Subscribe to Gizbot

ಎರಡೂ ಮೊಬೈಲ್ ಗಳ ಪೈಕಿ ನಿಮ್ಮ ಆಯ್ಕೆ ಯಾವುದು?

Posted By: Super
ಎರಡೂ ಮೊಬೈಲ್ ಗಳ ಪೈಕಿ ನಿಮ್ಮ ಆಯ್ಕೆ ಯಾವುದು?

ಗ್ರಾಹಕರು ಮೊಬೈಲ್ ವಿನ್ಯಾಸಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಹಿನ್ನಲೆಯಲ್ಲಿ ಎಲ್ ಜಿ ಮತ್ತು ಎಚ್ ಟಿಸಿ ಕಂಪನಿ ಕಡಿಮೆ ತೂಕದ ಸ್ಮಾರ್ಟ್ ಪೋನ್ ಗಳನ್ನು ತಂದಿದೆ. ಈ ಎರಡೂ ಫೋನ್ ಗಳೂ ಕೂಡ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ನಿರೀಕ್ಷೆಯಿದೆ. ಈ ಮೊಬೈಲ್ ಗಳ ಗುಣವಿಶೇಷತೆಯನ್ನು ಇಲ್ಲಿ ತಿಳಿಯೋಣ.

ಎರಡೂ ಮೊಬೈಲ್ ಗಳನ್ನು ಕ್ಯಾಂಡಿ ಬಾರ್ ಮಾದರಿಯಲ್ಲಿ ತಯಾರಿಸಲಾಗಿದ್ದು, ವಿನ್ಯಾಸಕ್ಕೆ ಹೆಸರಾಗಿರುವ ಎರಡೂ ಕಂಪನಿಗಳು ತಮ್ಮ ಮೊಬೈಲ್ ಗಳನ್ನು ಆಕರ್ಷಕವಾಗಿ ಹೊರತಂದಿವೆ. HTC ಟೈಟಾನ್ ಮೊಬೈಲ್ 1.5GHz ವೇಗದ ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು ಕ್ವಾಲ್ಕಂ MSM 8255 ಚಿಪ್ ಸೆಟ್ ಪಡೆದುಕೊಂಡಿದೆ. ಗ್ರಾಫಿಕ್ ಗೆಂದು ಅಡೆರ್ನೊ 205 ಇದರಲ್ಲಿದೆ. ಆದರೆ ಎಲ್ ಜಿ ಪ್ರಡಾ K2 ಯಾವ ಪ್ರೊಸೆಸರ್ ಹೊಂದಿದೆ ಎಂದು ತಿಳಿದುಬಂದಿಲ್ಲ.

HTC ಟೈಟಾನ್ ಮೊಬೈಲ್ ಮೈಕ್ರೊ ಸಾಫ್ಟ್ ಮ್ಯಾಂಗೊ 7.5 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದರೆ ಎಲ್ ಜಿ ಪ್ರಡಾ ಕೂಡ ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ.

ಎಲ್ ಜಿ ಪ್ರಡಾ K2 ಮೊಬೈಲ್ ವಿಶೇಷತೆ:

* 8.8 ಎಂಎಂ ಸುತ್ತಳತೆ

* 4.3 ಇಂಚಿನ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* IPS LCD ಟಚ್ ಸ್ಕ್ರೀನ್ ಡಿಸ್ಪ್ಲೇ

* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

* ಆಟೊ ಫೋಕಸ್, ಫ್ಲಾಶ್

* 16 ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ವೈ-ಫೈ, ಬ್ಲೂಟೂಥ್

HTC ಟೈಟಾನ್ ಮೊಬೈಲ್ ವಿಶೇಷತೆ:

* 131.5 ಎಂಎಂ x 70.7 ಎಂಎಂ x 9.9 ಎಂಎಂ ಸುತ್ತಳತೆ

* 160 ಗ್ರಾಂ ತೂಕ

* 4.7 ಇಂಚಿನ ಡಿಸ್ಪ್ಲೇ

* S- LCD ಟಚ್ ಸ್ಕ್ರೀನ್ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

* ಆಟೊ ಫೋಕಸ್, ಫ್ಲಾಶ್

* 16 ಜಿಬಿ ಆಂತರಿಕ ಮೆಮೊರಿ, 512 ಎಂಬಿ ಸಿಸ್ಟಮ್ ಮೆಮೊರಿ

* ವೈ-ಫೈ, ಬ್ಲೂಟೂಥ್

ಎರಡೂ ಫೋನ್ ಗಳು ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, ಟೈಟಾನ್ ಮೊಬೈಲ್ ನ 1600mAh ಬ್ಯಾಟರಿ 2ಜಿಯಲ್ಲಿ 360 ಗಂಟೆ ಮತ್ತು 3ಜಿನಲ್ಲಿ 460 ಗಂಟೆ ಸ್ಟ್ಯಾಂಡ್ ಬೈ ಟೈಂ, 2ಜಿನಲ್ಲಿ 11 ಗಂಟೆ 50 ನಿಮಿಷ ಟಾಕ್ ಟೈಂ ಮತ್ತು 3ಜಿನಲ್ಲಿ 6 ಗಂಟೆ 50 ನಿಮಿಷ ಟಾಕ್ ಟೈಂ ನೀಡುತ್ತದೆ. ಎರಡೂ ಮೊಬೈಲ್ ಗಳ ಬೆಲೆ ನಿಖರವಾಗಿ ತಿಳಿದುಬಂದಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot