ಇಂಡಿಯಾ 272+: ಬಿಜಿಪಿ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

Written By:

ಮುಂಬರುವ ಲೋಕಸಭಾ ಚುನಾವಣೆಗೆ ಇಂಟ್‌ರ್‌ನೆಟ್‌ನಲ್ಲಿ ಈಗಾಗಲೇ ಪ್ರಚಾರ ನಡೆಸುತ್ತಿರುವ ಬಿಜೆಪಿ ಈಗ ಆಂಡ್ರಾಯ್ಡ್‌‌‌ ಆಪ್‌ ಬಿಡುಗಡೆ ಮಾಡಿ ಪ್ರಚಾರ ಕಾರ್ಯ‌ ಆರಂಭಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷ ಬಹುಮತ ಗಳಿಸಲು 272 ಸೀಟುಗಳನ್ನುಗಳಿಸಬೇಕು..ಹೀಗಾಗಿ ಬಿಜೆಪಿ ತನ್ನತ್ತ ಕಾರ್ಯಕರ್ತರನ್ನು ಸೆಳೆಯಲು ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡಲು ಕಳೆದ ಅಗಸ್ಟ್‌‌ನಲ್ಲಿ www.india272.com ಹೆಸರಿನ ವೆಬ್‌ಸೈಟ್‌ ಆರಂಭಿಸಿತ್ತು.ಈಗ ಆ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ‌ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಲ್ಲಿ ವೀಕ್ಷಿಸಲು India272+ Volunteer ಆಪ್‌ನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.

ಇಂಡಿಯಾ 272+: ಬಿಜಿಪಿ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

ಯುವಜನತೆಯನ್ನು ಸೆಳೆಯಲು ಮತ್ತು ಪ್ರಚಾರಕಾರ್ಯದಲ್ಲಿ ಸಾಮಾಜಿಕ ತಾಣಗಳ ಬಳಕೆ ಹೆಚ್ಚು ಪರಿಣಾಮಕಾರಿ ಎಂಬುದನ್ನು ಮನಗಂಡಿರುವ ಬಿಜೆಪಿ ಈಗಾಗಲೇ ಲೋಕಸಭಾ ಚುನವಾಣೆಗಾಗಿ ಸೈಬರ್‌ ಆರ್ಮಿ ಆರಂಭಿಸಿದೆ.

ಕಳೆದ ವಾರವಾಷ್ಟೇ ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿ‌ ನರೇಂದ್ರ ಮೋದಿ ಬ್ರ್ಯಾಂಡ್‌ ಉತ್ಪನ್ನಗಳನ್ನು ಖರೀದಿಸಲು ದಿ ನಮೋಸ್ಟೋರ್‌ ಹೆಸರಿನ ಹೊಸ ಆನ್‌ಲೈನ್‌ ಶಾಪಿಂಗ್‌ ತಾಣವನ್ನು ಆರಂಭಿಸಿತ್ತು.

ನರೇಂದ್ರ ಮೋದಿ ಹೆಸರಿನಲ್ಲಿ ಈಗಾಗಲೇ 'ಮೋದಿ ರನ್‌' ಹೆಸರಿನ ಆಂಡ್ರಾಯ್ಡ್‌ ಗೇಮಿಂಗ್‌ ಆಪ್‌ ತಯಾರಾಗಿದೆ. ಮಾರಿಯೋ ಆಟಗಳು ಹೇಗಿದಿಯೋ ಆದೇ ರೀತಿ ಆಟವನ್ನು ಅಭಿವೃದ್ಧಿಪಡಿಸಲಾಗಿದೆ.

ಮೋದಿ ಅಭಿಮಾನಿಗಳಿಗೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲಸ ಮಾಡಲಿರುವ ಬಿಜೆಪಿ ಕಾರ್ಯ‌ಕರ್ತರಿಗೆ ಸ್ಮಾರ್ಟ್‌ನಮೋ ಹೆಸರಿನ ಆಂಡ್ರಾಯ್ಡ್‌ ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.


ಇದನ್ನೂ ಓದಿ: ಗುಜರಾತ್‌ನಲ್ಲಿದೆ ಏಷ್ಯಾದ ಅತಿ ದೊಡ್ಡ ಸೋಲಾರ್‌ ಪಾರ್ಕ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot