ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟಕ್ಕೆ ಮನೆ ಭಸ್ಮ

Posted By:

ಅದೇನು ಗೊತ್ತಿಲ್ಲ ಮೊಬೈಲ್‌ ಉದ್ಯಮದಲ್ಲಿ ಪ್ರಖ್ಯಾತ ಕಂಪೆನಿಗಳು ಎಂದು ಗುರುತಿಸಲ್ಪಟ್ಟ ಮೊಬೈಲ್‌ಗಳ ಗುಣಮಟ್ಟದ ಬಗ್ಗೆ ಈಗ ಅನುಮಾನ ಬರಲಾರಂಭಿಸಿದೆ. ಇತ್ತೀಚಿಗಷ್ಟೆ  ಸ್ಯಾಮ್‌ಸಂಗ್‌,  ಐಫೋನ್‌ ಸ್ಪೋಟಗೊಂಡಿದ್ದ ಸುದ್ದಿಯನ್ನು ನೀವು ಓದಿರಬಹುದು. ಆದರೆ ಈಗ ಸ್ಯಾಮ್‌ಸಂಗ್‌ನ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿರುವ ಗೆಲಾಕ್ಸಿ ಎಸ್‌4 ಹಾಂಗ್‌ಕಾಂಗ್‌ನಲ್ಲಿ ಸ್ಪೋಟಗೊಂಡಿದೆ.

ಹಾಂಗ್‌ಕಾಂಗ್‌ನ ಡು (Du) ಎನ್ನುವ ವ್ಯಕ್ತಿ ಗೆಲಾಕ್ಸಿ ಎಸ್‌4 ನಲ್ಲಿ ಗೇಮ್ಸ್‌ ಆಡುತ್ತಿರುವಾಗ ಇದ್ದಕ್ಕಿದ್ದಂತೆ ಬೆಂಕಿಹೊತ್ತಿತ್ತಂತೆ. ಕೂಡಲೇ ಇವನು ಮೊಬೈಲ್‌ ತೆಗೆದು ಎಸೆದಿದ್ದಾನೆ. ಎಸೆದ ಫೋನ್‌ ಅವನ ಮನೆಯಲ್ಲಿರುವ ಮಂಚಕ್ಕೆ ತಾಗಿ ಕೆಳಗೆ ಬಿದ್ದು ಸ್ಪೋಟಗೊಂಡಿದೆ.ಸ್ಪೋಟದ ರಭಸಕ್ಕೆ ಅವನ ಮನೆಯೇ ಸಂಪೂರ್ಣ‌ ಬೆಂಕಿಗಾಹುತಿಯಾಗಿದೆ ಎಂದು ಚೀನಾದ Xianguo.com ವರದಿ ಮಾಡಿದೆ.

ಕಳೆದ ಮೂರು ತಿಂಗಳಿನಲ್ಲಿ ನಾಲ್ಕನೇಯ ಮೊಬೈಲ್‌ ಸ್ಪೋಟ ಇದಾಗಿದ್ದು, ಹಾಂಗ್‌ಕಾಂಗ್‌ನ ಸ್ಯಾಮ್‌ಸಂಗ್‌ ಕಂಪೆನಿ ಈಗ ಈ ಸ್ಪೋಟದ ತನಿಖೆಗೆ ಮುಂದಾಗಿದೆ.

ಇದನ್ನೂ ಓದಿ: ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ


ಸ್ಪೋಟದಿಂದಾಗಿ ಸಂಪೂರ್ಣ ಬೆಂಕಿಗಾಹುತಿಯಾದ ಮನೆ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ


ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿಯನ್ನು ನಂದಿಸುತ್ತಿರುವುದು

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ


ಪೊಲೀಸರೊಂದಿಗೆ ಡು ಮಾತನಾಡುತಿರುವುದು

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4 ಸ್ಪೋಟ


ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌4

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot