Subscribe to Gizbot

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

Posted By:

ವಿಶ್ವದ ಮೊದಲ 10x ಅಪ್ಟಿಕಲ್‌ ಝೂಮ್‌ ಇರುವ ಸ್ಮಾರ್ಟ್‌ಫೋನ್‌ನ್ನು ಸ್ಯಾಮ್‌ಸಂಗ್‌ ಪರಿಚಯಿಸಿದೆ. ಗೆಲಾಕ್ಸಿ ಎಸ್‌ 4 ಝೂಮ್‌ ಎಂದು ಇದಕ್ಕೆ ಹೆಸರಿಟ್ಟಿದ್ದು ಗ್ರಾಹಕರು ಸ್ಮಾರ್ಟ್‌ಫೋನ್‌ಲ್ಲೇ ಉತ್ತಮ ಗುಣಮಟ್ಟದ ಫೋಟೋವನ್ನು ತೆಗೆಯಬಹುದಾಗಿದೆ. 16 ಎಂಪಿ ಸಿಎಂಒಎಸ್‌ ಸೆನ್ಸಾರ್‌,ಒಐಎಸ್‌, Xenon ಫ್ಲ್ಯಾಶ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಮತ್ತು ಯಾವಾಗ ಮಾರುಕಟ್ಟೆ ಬರಲಿದೆ ಎಂಬುದನ್ನು ಸ್ಯಾಮ್‌ಸಂಗ್‌ ಅಧಿಕೃತವಾಗಿ ಪ್ರಕಟಿಸಿಲ್ಲ. ಈ ಸ್ಮಾರ್ಟ್‌ಫೋನ್‌ ಬೆಲೆ ನಲುವತ್ತು ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ.


ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್
ವಿಶೇಷತೆ:

4.3 ಇಂಚಿನ ಸುಪರ್‌ AMOLED qHD ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
8 GB ಆಂತರಿಕ ಮೆಮೊರಿ
1.5GB RAM
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಎನ್‌ಎಫ್‌ಸಿ
16 ಎಂಪಿ ಹಿಂದುಗಡೆ ಕ್ಯಾಮೆರಾ(10X ಅಪ್ಟಿಕಲ್‌ ಝೂಮ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
2,330mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಝೂಮ್‌ ರಿಂಗ್‌

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಈ ಸ್ಮಾರ್ಟ್‌ಫೋನ್‌ಲ್ಲಿ ನೀವು ಬೇರೆಯವರೊಂದಿಗೆ ಕಾಲ್‌ ಮಾಡುತ್ತಿರುವಾಗ ಯಾವುದೋ ಒಂದು ವಿಶೇಷ ದೃಶ್ಯ ನಿಮ್ಮನ್ನು ಸೆಳೆಯುತ್ತದೆ. ಕೂಡಲೇ ಈ ದೃಶ್ಯವನ್ನು ಕಾಲ್‌ ಕಟ್‌ ಮಾಡದೇ ಕ್ಯಾಮೆರಾದಿಂದ ಫೋಟೋ ತೆಗೆದು ಶೇರ್‌ ಮಾಡಬಹುದು. ಝೂಮ್‌ ರಿಂಗ್‌ ಆಯ್ಕೆ ಇದಕ್ಕಾಗಿ ರೂಪಿಸಿದ್ದು, ಇದರಲ್ಲಿ ನೇರವಾಗಿ ಮಾತನಾಡುತ್ತಿರುವ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಎಂಎಂಎಸ್‌ ಮೂಲಕ ಫೋಟೋ ಕಳುಹಿಸಬಹುದು.

ಫೋಟೋ ಸಜೆಸ್ಟ್‌:

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಗೆಲಾಕ್ಸಿ ಎಸ್‌ 4 ಝೂಮ್‌ನಲ್ಲಿ ನೀವು ನಿಮ್ಮ ಸ್ನೇಹಿತರ ಫೋಟೋಗಳನ್ನು ಸುಲಭವಾಗಿ ನೋಡಬಹುದು. ಫೋಟೋ ಸಜೆಸ್ಟ್‌ನಲ್ಲಿ ನಿಮ್ಮ ಸ್ನೇಹಿತರ ಇಂಟರ್‌ನೆಟ್‌ ಫೋಟೋ ಲೈಬ್ರೆರಿ ಅಕೌಂಟ್‌ನ್ನು ಸೇರಿಸಿದ್ರೆ ಸುಲಭವಾಗಿ ಆ ಅಲ್ಬಗಳನ್ನು ನೀವು ವೀಕ್ಷಿಸಬಹುದು.

ಸ್ಮಾರ್ಟ್‌ ಫೀಚರ್‌ಗಳು:

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಬೆಸ್ಟ್‌ಫೋಟೋ,ಕಿಡ್ಸ್‌ ಶಾಟ್‌,ಲ್ಯಾಂಡ್‌ಸ್ಕೇಪ್‌,ಸ್ನೋ,ಮ್ಯಾಕ್ರೋ,ಫುಡ್‌, ಪಾರ್ಟಿ‌,ಅನಿಮೇಟೆಡ್‌ ಫೋಟೋ,ಡ್ರಾಮಾ,ಸೌಂಡ್‌ ಆಂಡ್‌ ಶಾಟ್, ಸನ್‌ಸೆಟ್‌,ರಾತ್ರಿ,ಫೈರ್‌ವರ್ಕ್ಸ್(ಪಟಾಕಿ) ಶಾಟ್‌ಗಳನ್ನು ತೆಗೆಯಬಹುದು

ಪ್ರಿಲೋಡೆಡ್‌ ಅಪ್ಲಿಕೇಶನ್‌:

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಅಷ್ಟೇ ಅಲ್ಲದೇ ಈ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಹಬ್‌, ಸ್ಯಾಮ್‌ಸಂಗ್‌ ಲಿಂಕ್‌,ಸ್ಯಾಮ್‌ಸಂಗ್‌ ಚಾಟ್‌ ಆನ್‌, ಎಸ್‌ ವಾಯ್ಸ್‌,ಎಸ್‌ ಟ್ರಾನ್ಸ್ಲೇಟರ್‌ನೊಂದಿಗೆ ಬಂದಿದೆ.

ಉತ್ತಮ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ:

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಗೆಲಾಕ್ಸಿ ಎಸ್‌ 4 ಝೂಮ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋ ತಗೆಯಬಹುದು.ಡಿಜಿಟಲ್‌ ಕ್ಯಾಮೆರಾದಲ್ಲಿರುವಂತೆ ಇದಕ್ಕೆ 16 ಎಂಪಿ BSI CMOS ಸೆನ್ಸಾರ್‌, ಜೊತೆಗೆ 10x ಅಪ್ಟಿಕಲ್‌ ಝೂಮ್‌ ಇರುವುದರಿಂದ ದೂರ ಮತ್ತು ಕ್ಲೋಸ್‌ ಅಪ್‌ ಶಾಟ್‌ಗಳಲ್ಲಿ ಚೆನ್ನಾಗಿ ಫೋಟೋ ಮತ್ತು ವೀಡಿಯೋ ತೆಗೆಯಬಹುದು.

 ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

 ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

 ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot