ಗೆಲಾಕ್ಸಿ ಎಸ್‌5 ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ.ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದರೂ ಸ್ಮಾರ್ಟ್‌‌ಫೋನಿನ ಬೆಲೆಯನ್ನು ಮಾತ್ರ ಸ್ಯಾಮ್‌ಸಂಗ್‌ ನಿಖರವಾಗಿ ಪ್ರಕಟಿಸಿಲ್ಲ.

 ಈ ಸ್ಮಾರ್ಟ್‌ಫೋನಿನ ಬೆಲೆ 51-53 ಸಾವಿರದೊಳಗೆ ನಿಗದಿಯಾಗಲಿದೆ ಎಂದು ಸ್ಯಾಮ್‌ಸಂಗ್‌ ಹೇಳಿದೆ.ಮಾರ್ಚ್ 29ರಿಂದ ಮುಂಗಡ ಆರ್ಡರ್‌ ಮಾಡಬಹುದಾಗಿದ್ದು,ಏಪ್ರಿಲ್‌ 11ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ.

ಸ್ಯಾಮ್‌ಸಂಗ್‌ ಈ ಸ್ಮಾರ್ಟ್‌ಫೋನಿನೊಂದಿಗೆ ವೇರಬಲ್‌ ಗ್ಯಾಜೆಟ್‌ಗಳಾದ ಗೆಲಾಕ್ಸಿ ಗೇರ್‌ 2,ಗೆಲಾಕ್ಸಿ ಗೇರ್‌ 2 ನಿಯೋ,ಗೇರ್‌ ಫಿಟ್‌ಗಳನ್ನು ಬಿಡುಗಡೆ ಮಾಡಿದೆ. ಗೇರ್‌ ಫಿಟ್‌ ಮತ್ತು ಗೇರ್‌ 2 ನಿಯೋಗೆ 15,900 ರೂಪಾಯಿ ನಿಗದಿ ಮಾಡಿದ್ದರೆ, ಗೇರ್‌ 2 21,900 ರೂಪಾಯಿ ಬೆಲೆಯನ್ನು ಸ್ಯಾಮ್‌ಸಂಗ್‌ ನಿಗದಿಮಾಡಿದೆ.

ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಕ್ವಾಡ್‌ ಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಿದ್ದ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಅಕ್ಟಾ ಕೋರ್‍ ಪ್ರೊಸೆಸರ್‌‌‌‌‌ನಲ್ಲಿ ಬಿಡುಗಡೆಯಾಗಿದೆ. ಸ್ಯಾಮ್‌ಸಂಗ್‌ ಈ ಹಿಂದೆ ಎರಡು ರೀತಿ ಪ್ರೊಸೆಸರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತ್ತು.

 ಗೆಲಾಕ್ಸಿ ಎಸ್‌5 ಭಾರತದ ಮಾರುಕಟ್ಟೆಗೆ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5
ವಿಶೇಷತೆ:
ಸಿಂಗಲ್‌ ಸಿಮ್‌
5.1 ಇಂಚಿನ ಸೂಪರ್‌ ಅಮೊಲೆಡ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,432 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್‌ ಓಎಸ್‌
ಅಕ್ಟಾ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16/32 ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌‌‌,ಎನ್‌ಎಫ್‌ಸಿ
2800 mAh ಬ್ಯಾಟರಿ


ಇದನ್ನೂ ಓದಿ: ಗೆಲಾಕ್ಸಿ ಎಸ್‌5 vs ಐಫೋನ್‌ 5ಎಸ್‌ vs ನೆಕ್ಸಸ್‌5...
ಇದನ್ನೂ ಓದಿ: ಗೆಲಾಕ್ಸಿ ಎಸ್‌5ಯಲ್ಲಿ ಹೃದಯ ಬಡಿತವನ್ನು ಪರೀಕ್ಷಿಸುವುದು ಹೇಗೆ?
ಇದನ್ನೂ ಓದಿ: ಗೆಲಾಕ್ಸಿ ಎಸ್‌5ಯಲ್ಲಿರುವ ಐಫೋನ್‌ 5ಎಸ್‌ನಲ್ಲಿರದ ವಿಶೇಷತೆಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot