ಎಲ್ ಜಿ ಸ್ಪೆಕ್ಟ್ರಮ್ ಸುತ್ತ ಊಹೆಗಳದ್ದೆ ಕಾರುಬಾರು

Posted By:
ಎಲ್ ಜಿ ಸ್ಪೆಕ್ಟ್ರಮ್ ಸುತ್ತ ಊಹೆಗಳದ್ದೆ ಕಾರುಬಾರು

ತಾಂತ್ರಿಕ ಜಗತ್ತಿನಲ್ಲಿ ಈಗಾಗಲೆ ಬಿಡುಗಡೆಯಾಗಲಿರುವ ಎಲ್ ಜಿ ಸ್ಪೆಕ್ಟ್ರಮ್ ಬಗ್ಗೆ ಅನೇಕ ಸುದ್ಧಿಗಳು ಕೇಳಿ ಬರುತ್ತಿದೆ. ಆದರೆ ಯಾವುದರಲ್ಲೂ ಇದರ ಗುಣಲಕ್ಷಣ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದ್ದರಿಂದ ಈ ಎಲ್ ಜಿ ಸ್ಪೆಕ್ಟ್ರಮ್ ಮತ್ತಷ್ಟು ಕುತೂಹಲವನ್ನು ಉಂಟುಮಾಡಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಈ ಮೊಬೈಲ್ ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬಹುದು ಎಂದು ಊಹಿಸಲಾಗಿದೆ.

ಈಗಾಗಲೆ ಕೇಳಿ ಬರುತ್ತಿರುವ ಪ್ರಕಾರ ಎಲ್ ಜಿ ಸ್ಪೆಕ್ಟ್ರಮ್ ನೋಡಲು ಆಕರ್ಷಕವಾಗಿದೆ ಅಲ್ಲದೆ ಗಾತ್ರದಲ್ಲಿ ತೆಳುವಾಗಿದೆ.ಇದರಲ್ಲಿ ಒಂದೆ ಬಣ್ಣವನ್ನು ಬಳಸಿರುವುದರಿಂದ ನೋಡಲು ಫ್ರೊಫೆಷನಲ್ ಲುಕ್ ಕೊಡುತ್ತದೆ. ಇದರ ಸ್ಕ್ರೀನ್ 4 ಇಂಚು ಹೊಂದಿದ್ದು ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಪೋನಿನಲ್ಲಿ ಇದೂ ಕೂಡ ಒಂದಾಗ ಬಹುದು ಎಂದು ಕೇಳಿ ಬರುತ್ತಿದೆ.

ಇದರ ರೆಸ್ಯೂಲೇಶನ್ 720p ಇರಬಹುದು ಎಂದು ಹೇಳಲಾಗಿದೆ. ಈ ಮೊಬೈಲ್ ನ ಕ್ಯಾಮೆರಾ ಸಾಮರ್ಥ್ಯ 8 ಮೆಗಾ ಪಿಕ್ಸಲ್ ಇದೆ ಎಂದು ಕೂಡ ಹೇಳಲಾಗುತ್ತಿದೆ. ಇದರಲ್ಲಿ ಡ್ಯುಯೆಲ್ ಕೋರ್ ಪ್ರೊಸೆಸರ್ ಇದ್ದು ಕ್ಲೋಕ್ ವೇಗ 1.5GHz ಆಗಿದೆ.ಈ ಮೊಬೈಲ್ ಬಂದರೆ ಸ್ಮಾರ್ಟ್ ಫೋನ್ ಗೆ ತಕ್ಕ ಸ್ಪರ್ಧಿಯಾಗಲಿದೆ ಎಂದು ಹೇಳಲಾಗುತ್ತಿದ್ದು ಇದರ ಬೆಲೆ ಬಗ್ಗೆ ಖಚಿತ ಮಾಹಿತಿ ದೊರಕಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot