ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ನ ಫೀಚರ್ಸ್‌ ಹೀಗಿವೆ

Posted By: Staff
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ನ ಫೀಚರ್ಸ್‌ ಹೀಗಿವೆ
ಗೂಗಲ್ ಇತ್ತೀಚೆಗೆ ತನ್ನಯ ನೂತನ ಹಾಗೂ ಬಹುನಿರೀಕ್ಷಿತ ಗೂಗಲ್‌ ನೆಕ್ಸಸ್‌ ಸಾಧನಗಳನ್ನು ಅನಾವರಣ ಗೊಳಿಸಿದ್ದು, ಈ ಸಾದನಗಳು ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಚಾಲಿತವಾಗಿದ್ದು ನೂತನ ಆಪರೇಟಿಂಗ್‌ ಸಿಸ್ಟಂ ಸ್ಮಾರ್ಟ್‌ಫೀಚರ್ಸ್‌ನ ಉತ್ತಮ ಅನುಭವ ನೀಡುವ ಭರವಸೆ ಮೂಡಿಸಿದೆ. ಅಂದಹಾಗೆ ನೂತನ 4.2 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ಏನೆಲ್ಲ ಫೀಚರ್ಸ್‌ಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ಗೆಸ್ಚರ್‌ ಟೈಪಿಂಗ್‌ ಕೀ ಬೋರ್ಡ್‌ (Gesture typing keyboard)

ಮೆಸೇಜ್‌ ಪ್ರಿಯರಿಗಂತೂ ಈ ಆಪರೇಟಿಂಗ್‌ ಸಿಸ್ಟಂ ಅತ್ಯಂತ ಸುಲಭವಾಗಿ ಸಹಕರಿಸುತ್ತದೆ. ನೂತನ ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ನಲ್ಲಿ ಗೆಸ್ಚರ್‌ ಟೈಪಿಂಗ್‌ ಕೀಬೋರ್ಡ್‌ ಲಭ್ಯವಿದ್ದು ನಿವು ಟೈಪ್‌ ಮಾಡಬೇಕಾದ ಲೆಟರ್‌ ಮೇಲೆ ನಿಮ್ಮ ಬೆರಳನ್ನು ಕೇವಲ ಗ್ಲೈಡ್‌ ಮಾಡಿದರೆ ಸಾಕು. ಹಾಗು ಪ್ರತಿ ಅಕ್ಷರಗಳ ನಡುವೆ ತಾನಾಗಿಯೇ ಸ್ಪೇಸ್‌ ಕೂಡ ತೆಗೆದುಕೊಳ್ಳುತ್ತದೆ. ಹಾಗೂ ನೀವು ಮುಂದೆ ಯಾವ ಪದ ಟೈಪ್‌ ಮಾಡುತ್ತೀರಿ ಎಂಬುದನ್ನಿ ಕೀಬೋರ್ಡ್‌ ಮುಂಚಿತವಾಗಿಯೇ ಗುರ್ತಿಸುವಂತಹ ವಿಶೇಷ ಫೀಚರ್ಸ್‌ನಿಂದ ಕೂಡಿದೆ.

ಫೋಟೋ ಶೇರ್‌ ಕ್ಯಾಮೆರಾ (Photo Sphere camera)

ಫೋಟೋ ಶೇರ್‌ನಲ್ಲಿ ಐಫೋನ್‌ 5 ರೀತಿಯಲ್ಲಿ 360 ಡಿಗ್ರಿಯ ಪನೋರಮ ಫೀಚರ್ಸ್‌ಗಳು ಲಭ್ಯವಿದ್ಉ ಯಾವುದೇ ಕೋನದಲ್ಲಿಯೂ ಪಿಕ್ಚರ್ಸ್‌ ತೆಗೆಯ ಬಹುದಾಗಿದೆ. ನಿಮ್ಮ ನೆಚ್ಚಿನ ಪನೋರಮಾ ತಯಾರಿಸಿದ ಮೇಲೆ ಗೂಗಲ್‌ ಪ್ಲಸ್‌ ಮೂಲಕ ನಿಮ್ಮ ಸ್ನೇಹಿತರೂ ಹಾಗೂ ಕುಟುಂಬ ಸದಸ್ಯರುಗಳೊಂದಿಗೆ ಶೇರ್‌ ಕೂಡ ಮಾಡಬಹುದಾಗಿದೆ.

ಮಲ್ಟಿಪಲ್‌ ಶೇರಿಂಗಾಗಿ ವಿಶೇಷ ಸೌಲಭ್ಯ(Customizable tablet for enabling multiple sharing)

ನೀವು ನಿಮ್ಮ ಟ್ಯಾಬ್ಲೆಟ್‌ ಅನ್ನು ನಿಮಗೆ ಬೇಕಾದರೀತಿಯಲ್ಲಿ ಹೊಂದಿಸಿಕೊಳ್ಳ ಬಹುದಾಗಿದೆ. ಹೋಮ್‌ ಸ್ಕ್ರೀನ್‌ ಬ್ಯಾಗ್ರೌಂಡ್‌, ವಿಡ್ಜೆಟ್‌, ಆಪ್ಸ್‌ ಹಾಗೂ ಗೇಮ್ಸ್‌ಗಳಿಗೆ ಮಲ್ಟಿಪಲ್ ಯೂಸರ್‌ ಸೌಲಭ್ಯ ಕೂಡ ನೀಡುತ್ತದೆ. ಇದರಿಂದಾಗಿ ಮಲ್ಟಿ ಟಾಸ್ಕಿಂಗ್‌ ಅತ್ಯಂತ ಸುಲಭವೆನಿಸುವಂತೆ ಮಾಡುತ್ತದೆ.

ಗೂಗಲ್‌ ನಾವ್‌ (Google Now)

ಸ್ಮಾರ್ಟ್‌ ಫೋನ್‌ ನಳಕೆದಾರರಲ್ಲಿ ಗೂಗಲ್‌ ನಾವ್‌ ಅತ್ಯಂತ ಜನಪ್ರಿಯವಾಗಿದೆ. ಈ ಫೀಚರ್‌f ಮುಲಕ ಬಳಕೆದಾರರು ಸಮೀಪದ ರೆಸ್ಟೋರೆಂಟ್‌ ಹಾಗೂ ವಿಮಾನದ ಸಮಯ ಕುರಿತಾದ ಮಾಹಿತಿಗಳನ್ನು ಪಡೆದುಕೊಳ್ಳ ಬಹುದಾಗಿದೆ.

ಪರಿಷ್ಕೃತ ಗೂಗಲ್‌ ಸರ್ಚ್‌ (Refined Google Search)

ನೂತನ ಗೂಗಲ್‌ ಸರ್ಚ್‌ ಮೂಲಕ ಫಾಸ್ಟ್‌ ಬ್ರೌಸಿಂಗ್‌ನ ಅನುಭವ ಪಡೆದುಕೊಳ್ಳ ಬಹುದಾಗಿದೆ. ಹಾಗು ನಿಮ್ಮ ವಾಯ್ಸ್‌ ಮೂಲಕವೂ ನಿಮಗೆ ಬೇಕಾದ ವೆಬ್‌ ಬ್ರೌಸ್‌ಮಾಡಲು ತಿಳಿಸಬಹುದಾಗಿದೆ.

ವಿಡ್ಜೆಟ್‌ನ ಜಾದೂ (Widget Magic)

ನಿಮ್ಮ ಹೋಮ್‌ಸ್ಕ್ರೀನ್‌ ಮೇಲೆ ನಿಮ್ಮ ಆಯ್ಕೆಯ ಆಪ್ಸ್‌ ಹಾಗೂ ಫೇವರೆಟ್ಸ್‌ಗಳನ್ನು ಸುಲಭವಾಗಿ ಪಡೆದುಕೊಳ್ಳ ಬಹುದಾಗಿದೆ.

ದೀಪಾವಳಿಯ ಆಫರ್ನಲ್ಲಿನ ಟಾಪ್‌ 5 ಲ್ಯಾಪ್‌ಟಾಪ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot