ಮೊಬೈಲ್ ಲೋಕದ ಆಕರ್ಷಕವಾದ ಟಾಪ್ 10 ಮಾಡಲ್
ಸೋನಿ ಎಕ್ಸ್ ಪಿರಿಯಾ ಸ್ಮಾರ್ಟ್ ಫೋನ್ ಅನ್ನು ಗೇಮ್ ಪ್ರಿಯರಿಗಾಗಿಯೆ ವಿನ್ಯಾಸಗೊಳಿಸಿದಂತಿದೆ. ಇದು ಪ್ಲೇ ಸ್ಟೇಷನ್ ಪೋರ್ಟೇಬಲ್ ಜೊತೆ ಸಿಂಕ್ ನಲ್ಲಿ ಜೋಯ್ ಪ್ಯಾಡ್ ಕಂಟ್ರೋಲ್ ಕೂಡ ಹೊಂದಿದೆ. ಇದನ್ನು ಬಳಸಿದರೆ ಅತ್ಯುತ್ತಮವಾದ ಗೇಮಿಂಗ್ ಅನುಭವ ಪಡೆಯಬಹುದು.
ಅತ್ಯುತ್ತಮ ಮೊಬೈಲ್ ನಲ್ಲಿ ಇರಬೇಕಾದ ಎಲ್ಲಾ ಗುಣಲಕ್ಷಣವನ್ನು ಈ ಮೊಬೈಲ್ ಹೊಂದಿದೆ. ಆದರೆ ಇದರ LCD ಡಿಸ್ ಪ್ಲೇ ಗುಣಮಟ್ಟ ಅತ್ಯುತ್ತಮವಾಗಿದೆ. ಗೇಮಿಂಗ್ ನಲ್ಲಿ ಈ ಮೊಬೈಲ್ ಬಳಸಿದಾಗ ಪ್ರತ್ಯಕ್ಷವಾಗಿ ಗೇಮಿಂಗ್ ಆಡಿದಂತಹ ಅನುಭವವಾಗುವುದು. ಇದು ಅಧಿಕ ಕಾಲದ ಬ್ಯಾಟರಿ ಸಾಮರ್ಥ್ಯ ಕೂಡ ಹೊಂದಿದೆ.
ಗೇಮ್ ಪ್ರಿಯರ ಮನವನ್ನು ಗೆಲ್ಲುವ ಎಲ್ಲಾ ಗುಣವನ್ನು ಹೊಂದಿರುವ ಈ ಮೊಬೈಲ್ ನ ಮಾರುಕಟ್ಟೆ ಬೆಲೆ ರು. 32,000.ಆಗಿದೆ.
ಬ್ಲ್ಯಾಕ್ ಬೆರಿ ಮೊಬೈಲ್ ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇದೀಗ ಬ್ಲ್ಯಾಕ್ ಬೆರಿ 9980 ಮಾರುಕಟ್ಟೆಗೆ ಬಂದಿದ್ದು ಗ್ರಾಹಕರ ಬೇಡಿಕೆಯನ್ನು ಪೂರೈಸುವಂತಹ ಎಲ್ಲಾ ಗುಣಲಕ್ಷಣವನ್ನು ಹೊಂದಿದೆ. ಅತ್ಯುತ್ತಮ ಗುಣಮಟ್ಟದ ಈ ಸ್ಮಾರ್ಟ್ ಫೋನ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ.
ಇದರಲ್ಲಿ ಬ್ಲ್ಯಾಕ್ ಬೆರಿ OS 7 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು 1.2 GHz ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ಹೊಂದಿರುವುದರಿಂದ ವೇಗವಾಗಿ ಕಾರ್ಯವನ್ನು ನಿರ್ವಹಿಸಿವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಕಸ್ಟಮೈಸೇಶನ್ ( ವೆಬ್, ವರ್ಡ್ ಪ್ರೆಸ್...) ಇದ್ದು ಇದನ್ನು ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳಬಹುದು. ಬ್ಲ್ಯಾಕ್ ಬೆರಿ ಇತರ ಮೊಬೈಲ್ ಗಳಿಗೆ ಹೋಲಿಸಿದರೆ ಈ ಮೊಬೈಲ್ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ್ದಂತಹ ಮೊಬೈಲ್ ಆಗಿದೆ.
ಯುವ ಜನಾಂಗವನ್ನು ಸೆಳೆಯುವ ಎಲ್ಲಾ ಲಕ್ಷಣವನ್ನು ಹೊಂದಿರುವ ಈ ಬ್ಲ್ಯಾಕ್ ಬೆರಿ 9980 ಭಾರತೀಯ ಮಾರುಕಟ್ಟೆ ಬೆಲೆ ರು. 55,000 ಆಗಿದೆ.
8. ಎಚ್ ಟಿ ಸಿ ರೇಡಾರ್:
ಟಾಪ್ 10 ಲಿಸ್ಟ್ ನಲ್ಲಿ ಸೇರಿಸಬಹುದಾದ ಮತ್ತೊಂದು ಸುಂದರವಾದ ಮೊಬೈಲ್ ಎಚ್ ಟಿ ಸಿ ರೇಡಾರ್. ಈ ಎಚ್ ಟಿ ಸಿ ಮೊಬೈಲ್ ನಲ್ಲಿರುವ ಪ್ರಮುಖವಾದ ಅಂಶವೆಂದರೆ 2G, 3G ನೆಟ್ ವರ್ಕ್ ಬೆಂಬಲ, ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ ಮತ್ತು ಪ್ರೊಟೆಕ್ಷನ್ ಕೇಸ್ ( ರಕ್ಷಾ ಕವಚ) ಹೊಂದಿದೆ.
ಇದನ್ನು ಹೊರತು ಪಡಿಸಿ ಎಚ್ ಟಿ ಸಿ ರೇಡಾರ್ ವಿಂಡೋಸ್ ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಮತ್ತು ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು ಬೆಲೆಯಲ್ಲಿ ದುಬಾರಿಯಾಗಿದೆ.
9. ಎಚ್ ಟಿ ಸಿ ರೈಮ್:
ಎಚ್ ಟಿ ಸಿ ರೈಮ್ ಆಂಡ್ರಾಯ್ಡ್ ಆಧಾರಿತ ಫೋನ್ ಆಗಿದೆ. ಎಚ್ ಟಿ ಸಿ ರೇಡಾರ್ ರೇಡಾರ್ ರೀತಿ ರೈಮ್ ಕೂಡ 2G, 3G ನೆಟ್ ವರ್ಕ್ ಅನ್ನು ಬೆಂಬಲಿಸುತ್ತದೆ. ಇದು ಗುಣಮಟ್ಟದ ಡಿಸ್ ಪ್ಲೇ ಹೊಂದಿದೆ. ಇದರ ಮೆಮೊರಿಯನ್ನು 32 GBವರೆಗೆ ವಿಸ್ತರಿಸಬಹುದಾಗಿದೆ.
ಇಂಟರ್ ನೆಟ್ ಸಂಪರ್ಕ , ಪ್ರತ್ಯೇಕ ಗ್ರಾಫಿಕ್ ಪ್ರೊಸೆಸರ್ ( ಆಂಡ್ರೆನೊ 205) ಇದ್ದು ಇದನ್ನು ಬಳಸಿ ಗ್ರಾಫಿಕ್ ಎಡಿಟಿಂಗ್ ಮಾಡಬಹುದು.ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಇದೂ ಕೂಡ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಆಗಿದೆ.
10. ನೋಕಿಯಾ ಲುಮಿಯಾ 800:
ನೋಕಿಯಾ ಮೊಬೈಲ್ ಗಳ ಪಟ್ಟಿಯಲ್ಲಿ ನೋಕಿಯಾ ಲುಮಿಯಾ 800 ಟಾಪ್ 10 ಮೊಬೈಲ್ ಗಳಲ್ಲಿ ಒಂದಾಗಿದೆ.
ಆಂಡ್ರಾಯ್ಡ್ ಮೊಬೈಲ್ ಗಳಿಗೆ ಸ್ಪರ್ಧೆಯಾಗಿ ಮೊಬೈಲ್ ಕಣಕ್ಕೆ ಬಂದಿರುವ ಈ ಮೊಬೈಲ್ ಗೆ ಬಿಡುಗಡೆಗೆ ಮೊದಲೆ ಇದರ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಲುಮಿಯಾ 800 ವಿಂಡೋಸ್ ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು 1.4Ghz ಪ್ರೊಸೆಸರ್ ಹೊಂದಿದೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ಗುಣಮಟ್ಟವನ್ನು ಹೊಂದಿರುವ ಈ ಮೊಬೈಲ್ ಹಗುರವಾಗಿದ್ದು 2012ರ ಮೊಬೈಲ್ ಮಾರುಕಟ್ಟಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದುವ ಮೊಬೈಲ್ ಆಗಲಿದೆ ಎಂದು ನೋಕಿಯಾ ನಿರೀಕ್ಷೆಯನ್ನು ಇಟ್ಟು ಕೊಂಡಿದೆ.


Click it and Unblock the Notifications








