Subscribe to Gizbot

ಮೊಬೈಲ್ ಲೋಕದ ಆಕರ್ಷಕವಾದ ಟಾಪ್ 10 ಮಾಡಲ್

Posted By: Super
<ul id="pagination-digg"><li class="next"><a href="/mobile/top-ten-smartphones-of-2011-2.html">Next »</a></li></ul>

ಹಳ್ಳಿಯಿಂದ -ದಿಲ್ಲಿಯವರೆಗೆ, ತರಕಾರಿ ಮಾರುವವನಿಂದ ಹಿಡಿದು ಕಂಪನಿ ಮಾಲೀಕರವರೆಗೆ ಮೊಬೈಲ್ ಬಳಕೆಯನ್ನು ಮಾಡುತ್ತಾರೆ. ಇಂದು ಮೊಬೈಲ್ ಜೀವನದ ಒಂದು ಅಂಗವಾಗಿ ಬಿಟ್ಟಿದೆ.ಮೊಬೈಲ್ ಗೆ ಸಾಕಷ್ಟು ಬೇಡಿಕೆ ಇರುವುದರಿಂದ ಮೊಬೈಲ್ ಮಾರುಕಟ್ಟೆ ವಿಸ್ತಾರ ಕೂಡ ಹೆಚ್ಚಾಗುತ್ತಿದೆ. ಅನೇಕ ಮೊಬೈಲ್ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ, ಅತ್ಯಂತ ಗುಣಮಟ್ಟದ, ಅಕರ್ಷಕವಾದ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಈ ಮೊಬೈಲ್ ಗಳಲ್ಲಿ ಕೆಲವು ಮೊಬೈಲ್ ಗಳನ್ನು 2011ರ ಟಾಪ್ 10 ಮಾಡಲ್ ಗಳು ಎಂದು ಗುರುತಿಸಲಾಗಿದೆ. ಅವುಗಳ ಬಗ್ಗೆ ತಿಳಿಯಲು ಮುಂದೆಕ್ಕೆ ಓದಿ.

1) ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ :

ಈ ವರ್ಷದ ಟಾಪ್ 10 ಸ್ಮಾರ್ಟ್ ಫೋನ್ ಗಳ ಪಟ್ಟಿಯಲ್ಲಿ ಸ್ಯಾಮ್ ಸಂಗ್ ಗೆಲಾಕ್ಸಿ ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ಇದಕ್ಕೆ ಕಾರಣ ಅದರ ಆಕರ್ಷಕವಾದ ವಿನ್ಯಾಸ ಮತ್ತು ಗುಣ ಲಕ್ಷಣಗಳು. ಈ ಸ್ಮಾರ್ಟ್ ಫೋನ್ ಪರ್ಸನಲ್ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ನ ಎರಡೂ ಲಕ್ಷಣಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ಅನ್ನು ಬಳಸಲು ಸುಲಭವಾಗಿರುವಂತೆ ವಿನ್ಯಾಸ ಗೊಳಿಸಲಾಗಿದೆ.

ಅಲ್ಲದೆ ಇದರಲ್ಲಿರುವ ಅತಿ ಪ್ರಮುಖವಾದ ಅಂಶವೆಂದರೆ  ಮಲ್ಟಿ ಮೀಡಿಯಾ ಪ್ಲೇಯರ್ , ಟ್ವಿನ್ ಕ್ಯಾಮೆರಾ, ಸ್ಟೈಲಿಷ್ ಹೆಸರಿನ ಎಸ್ ಪೆನ್ನು ಈ ಪೆನ್ನು ಬಳಸಿ ಕಲಾತ್ಮಕ ಚಿತ್ರ ಬರೆಯಬಹುದು, ಡಾಕ್ಯೂಮೆಂಟ್ ( ಕಾಗದ ಪತ್ರಗಳಲ್ಲಿ) ಸಹಿ ಕೂಡ ಮಾಡಬಹುದು. ಇದರಲ್ಲಿ ಆಂಡ್ರಾಯ್ಡ್ ಜಿಂಜರ್ ಬರ್ಡ್  ಆಪರೇಟಿಂಗ್ ಸಿಸ್ಟಮ್  ಇದೆ.

ಬಳಕೆದಾರರಿಗೆ ಎಲ್ಲಾ ಅಪ್ಲಿಕೇಶನ್ ಗಳನ್ನು ಸುಲಭವಾಗಿ ಡೌನ್ ಲೋಡ್ ಮಾಡಲು ಸಹಾಯಕವಾಗಿದೆ.ಇದರಲ್ಲಿರುವ ಗೆಲಾಕ್ಸಿ ನೋಟ್ ಟ್ಯಾಬ್ಲೆಟ್ ಪರ್ಸನಲ್ ಕಂಪ್ಯೂಟರ್ ತರ ಕಾರ್ಯವನ್ನು ನಿರ್ವಹಿಸುತ್ತದೆ.  ಇದನ್ನು ಬಳಸಿ ಕಂಪ್ಯೂಟರ್ ನಲ್ಲಿ ಮಾಡುವಂತಹ ಕೆಲಸ ಕಾರ್ಯವನ್ನು ಕೂಡ ಮಾಡಬಹುದು, ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಗುಣ ಲಕ್ಷಣವಿರುವ  ಈ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 30, 000 ಆಗಿದೆ.

2) ಐಫೋನ್ 4S :

ಎರಡನೆ ಅತ್ಯತ್ತಮ ಸ್ಮಾರ್ಟ್ ಫೋನ್ ಐಫೋನ್ 4S.  ಐಫೋನ್ 4Sನಲ್ಲಿ ಐಫೋನ್ 4ನಲ್ಲಿರುವ ಎಲ್ಲಾ ಗುಣಲಕ್ಷಣವನ್ನು ಹೊಂದಿದ್ದರೂ ಐಫೋನ್ 4S, ಐಫೋನ್ 4 ಗಿಂತ ಅಧಿಕ ವೇಗವಾಗಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಐಫೋನ್ 4Sನಲ್ಲಿ  ಮಲ್ಟಿ ಮೀಡಿಯಾ ಫೀಚರ್ ಇದ್ದು , ಇದು ಸಿರಿ ಅಪ್ಲಿಕೇಶನ್ ಹೊಂದಿದೆ.

ಅಲ್ಲದೆ ಐಫೋನ್  4S ನೋಡಲು ಆಕರ್ಷಕವಾಗಿದ್ದು iOs 5 ತಂತ್ರಜ್ಞಾನ ಬಳಸಿಕೊಂಡು ಕಾರ್ಯವನ್ನು ನಿರ್ವಹಿಸುತ್ತದೆ. ಇದು 3G ಗುಣಲಕ್ಷಣವನ್ನು ಕೂಡ ಹೊಂದಿದೆ.ಈ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು 16 GB  ಆಯಾಮಕ್ಕೆ ರು. 40,000, 32 GBಗೆ ರು.50,900 ಮತ್ತು 64 GBಗೆ ರು. 57,500 ಬೆಲೆಯನ್ನು ಹೊಂದಿದೆ.

3. ಮೊಟೊರೊಲಾ ಡ್ರಾಯ್ಡ್ ರೇಝರ್:

ಎಲ್ಲಾ ಮೊಟೊರೊಲಾ ಮೊಬೈಲ್  ರೀತಿ ಈ ಮೊಟೊರೊಲಾ ಡ್ರಾಯ್ಡ್ ರೇಝರ್ ಕೂಡ ನೋಡಲು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 1.2GHz tI OMAP 4430 ಪ್ರೊಸೆಸರ್ ಹೊಂದಿದ್ದು ವೇಗವಾಗಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.  ಈ ಮೊಬೈಲ್ ನಲ್ಲಿ ಆಂಡ್ರಾಯ್ಡ್ 2.3.5 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಈ ಮೊಬೈಲ್ ಮತ್ತೊಂದು ವಿಶೇಷವೆಂದರೆ ಇದರಲ್ಲಿರುವ AMOLED ಡಿಸ್ ಪ್ಲೇ, ಇದರ ಜೊತೆ 4G LTE ಆಯಾಮದ ಬೆಂಬಲವನ್ನು ಕೂಡ ಹೊಂದಿದೆ. ಆದರೆ ಈ ಗುಣಮಟ್ಟದ ಮೊಬೈಲ್ ನಲ್ಲಿ ಕಂಡು ಬರುವ ಪುಟ್ಟ ದೋಷವೆಂದರೆ ಇದರ ಬ್ಯಾಟರಿ ಸಾಮರ್ಥ್ಯ.   ಈ ಒಂದರಲ್ಲಿ  ಈ ಮೊಬೈಲ್ ಇದರ ಇತರ ಸ್ಪರ್ಧಿಗಳಿಗಿಂತ ಹಿಂದಿದೆ.

ಈ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 25,550 ಆಗಿದೆ.

4. ಸ್ಯಾಮ್ ಸಂಗ್ ಗೆಲಾಕ್ಸಿ SII:

ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್  ಜಿಂಜರ್  ಬರ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು ಅತ್ಯುತ್ತಮವಾದ ತಂತ್ರಜ್ಞಾನವನ್ನು ಬಳಸಲಾಗಿದೆ. ನೋಡಲು ಕೂಡ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ಟಚ್ ವಿಝ್ 4.0 ತಂತ್ರಜ್ಞಾನವನ್ನು ಹೊಂದಿದೆ.

ಈ ಮೊಬೈಲ್ 2011ರ್ಲಿ ಬಿಡುಗಡೆಯಾದ ಸ್ಮಾರ್ಟ್ ಫೋನ್ ಗಳಲ್ಲಿ ಒಂದು ಉತ್ತಮವಾದ ಮೊಬೈಲ್ ಆಗಿದೆ. ಈ ಮೊಬೈಲ್ ಮಾರುಕಟ್ಟೆ ಬೆಲೆ ರು. 29,000 ಆಗಿದೆ.

5.  ಎಲ್ ಜಿ ಪ್ರಡಾ 3.0:

ಈ ಮೊಬೈಲ್ ಐಫೋನ್ 4Sಗೆ ಪ್ರಬಲ ಸ್ಪರ್ಧೆಯನ್ನು ನೀಡುವಷ್ಟು ಸಮರ್ಥವಾಗಿದೆ. ಐಫೋನ್ 4S ಇಂಟರ್ ಫೇಸ್ ಜೊತೆ  ಕೆಲವೊಂದು ಫೀಚರ್ ಗಳನ್ನು ನೀಡುತ್ತೇವೆ ಎಂದು ಹೇಳಿದ್ದರೂ ಇನ್ನೂ ನೀಡಲು ಸಾಧ್ಯವಾಗಲಿಲ್ಲ. ಈ ಎಲ್ ಜಿ ಪ್ರಡಾ 3.0 ಬಳಸಲು ಸುಲಭವಾಗಿದ್ದು  ಇದು ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಅಲ್ಲದೆ ಇದರಲ್ಲಿ T1 OMAP 4430 ಪ್ರೊಸೆಸರ್ ಮತ್ತು ಅದ್ಭುತವಾದ ಮಲ್ಟಿ ಮೀಡಿಯಾ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಮೆಮೊರಿ ಕಾರ್ಡ್ ಸ್ಲೋಟ್ ಇದ್ದು ಇದರ ಮೆಮೊರಿಯನ್ನು 32GBವರೆಗೆ ವಿಸ್ತರಿಸಬಹುದು.

2012ರಲ್ಲಿ ಮಾರುಕಟ್ಟೆಗೆ ಬರಲಿರುವ ಈ ಮೊಬೈಲ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಬೇಕಾದ ಇಲ್ಲಾ ಗುಣಲಕ್ಷಣವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಬೆಲೆ ಬಗ್ಗೆ ಇನ್ನಷ್ಟೆ ತಿಳಿದು ಬರಬೇಕಾಗಿದ್ದು ಇದೊಂದು ಉತ್ತಮ ಗುಣಮಟ್ಟವನ್ನು ಹೊಂದಿರುವ ಮೊಬೈಲ್ ಆಗಿದೆ.

<ul id="pagination-digg"><li class="next"><a href="/mobile/top-ten-smartphones-of-2011-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot