ಹೊಸ ಆಡಿಯೋ ಲಿಂಕ್ ಸಿಸ್ಟಮ್ ಝೋನಾ ಬಿಡುಗಡೆ

By Super
|
ಹೊಸ ಆಡಿಯೋ ಲಿಂಕ್ ಸಿಸ್ಟಮ್ ಝೋನಾ ಬಿಡುಗಡೆ
ಖ್ಯಾತ ಅಪೇರಿಯನ್ ಕಂಪೆನಿ ಹೊಸ ಆಡಿಯೋ ಲಿಂಕ್ ಸಿಸ್ಟಮ್ ಬಿಡುಗಡೆಗೆ ಮುಂದಾಗಿದೆ. ಈ ಹೊಸ ಸಾಧನದ ಹೆಸರು ಝೋನಾ HAL.

ವೈರ್ ಲೆಸ್ ಸಂಗೀತ ಸಾಧನಗಳು ಈಗ ಮಾರುಕಟ್ಟೆಯಲ್ಲಿ ಬಿಸಿಬಿಸಿ ಕೇಕ್. ಈಗ ಜನರು ತೊಂದರೆ ರಹಿತ ವೈರ್ ಲೆಸ್ ಸ್ಪೀಕರ್ ಮಾತ್ರ ಇಷ್ಟಪಡುವ ಮನೋಸ್ಥಿತಿ ಹೊಂದಿದ್ದಾರೆ. ಹಾಗಾಗಿ ಇತ್ತೀಚಿಗೆ ಬರುವ ಹೊಸ ವೈರ್ ಲೆಸ್ ಸಂಗೀತ ಸಾಧನಗಳಿಗೆ ಎಲ್ಲಿಲ್ಲದ ಬೇಡಿಕೆ.

ಈ ಹೊಸ ಸಂಗೀತ ಸಾಧನದಿಂದ ನೀವು ಮನೆಯಲ್ಲಿ ಎಲ್ಲೇ ಕುಳತೂ ಕೂಡ ಸಂಗೀತ ಕೇಳಬಹುದು. ಕೇವಲ 2 ಪಾಯಿಂಟ್ ಗಳ ಮೂಲಕ ಸಂಪರ್ಕ ಹೊಂದುವ ಸಾಮರ್ಥ್ಯವಿರುವ ಇದು ಸೆಂಡರ್ ಯನಿಟ್ ನಿಂದ ರಿಸೀವರ್ ಯುನಿಟ್ ಗೆ ಆಡಿಯೋ ಸಿಗ್ನಲ್ ಗಳನ್ನು ಟ್ರಾನ್ಸ್ ಫರ್ ಮಾಡುತ್ತದೆ. MP3 ಅಥವಾ ಆಡಿಯೋ ಸಿಸ್ಟಮ್ ಗೆ ಈ ಸಾಧನದ ಸೌಲಭ್ಯ ಉಪಯೋಗಿಸಿ ನೀವು ಉತ್ಕೃಷ್ಟ ಸಂಗೀತ ಸವಿಯಬಹುದು.

ಈ ಹೊಸ ಝೋನಾ HAL ಸಾಧನ ಭಾರತದ ಮಾರುಕಟ್ಟೆಯಲ್ಲಿ ಆಕರ್ಷಕ ಬೆಲೆ ರು. 6,700 ರಲ್ಲಿ ಲಭ್ಯವಾಗಲಿದೆ. ಜಗತ್ತಿನಾದ್ಯಂತ ಬಿಡುಗಡೆಯಾಗಲಿರುವ ಇದು ಬೆಲೆಯೂ ಕಡಿಮೆ ಇರುವುದರಿಂದ ಸಾಕಷ್ಟು ಮಾರಾಟವಾಗುವ ನಿರೀಕ್ಷೆ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X