ಹೊಸ ಎಲ್ ಜಿ ಹೋಮ್ ಥಿಯೇಟರ್ ಸೂಪರ್!

Posted By: Staff

ಹೊಸ ಎಲ್ ಜಿ ಹೋಮ್ ಥಿಯೇಟರ್ ಸೂಪರ್!
ಎಲ್ ಜಿ ಎಲೆಕ್ಟ್ರಾನಿಕ್ಸ್ ಕಂಪೆನಿ ಸಾಕಷ್ಟು ಸುಪ್ರಸಿದ್ಧ. ಗ್ಯಾಜೆಟ್ ಜಗತ್ತಿನಲ್ಲಿ ಎಲ್ ಜಿ ಸಾಕಷ್ಟು ಹೊಸ ಹೊಸ ಸಾಧನಗಳ ಮೂಲಕ ಯಶಸ್ಸಿನ ಶಿಖರವೇರಿ ಕುಳಿತಿದೆ. ಇದೀಗ ಹೊಸ ಹೋಮ್ ಥಿಯೇಟರ್ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಹೊಸ ಹೋಮ್ ಥಿಯೇಟರ್ ಸಿಸ್ಟಮ್ ಹೆಸರು, ಎಲ್ ಜಿ HX 906TX.

ಸಾಕಷ್ಟು ಆಧುನಿಕವಾಗಿರುವ ಈ ಹೊಸ ಹೋಮ್ ಥಿಯೇಟರ್ ಸಿಸ್ಟಮ್ ಬಹಳಷ್ಟು ವಿಶೇಷತೆಗಳನ್ನೂ ಹೊಂದಿದೆ. 9.1 ಸ್ಪೀಕರ್ ಸಿಸ್ಟಮ್ ಸೌಲಭ್ಯ, 360 ಡಿಗ್ರಿ ವರ್ಟಿಕಲ್ ಮತ್ತು ಹಾರಿಝಾಂಟಲ್ ಸೌಂಡ್ ವ್ಯಾಪ್ತಿ ಹೊಂದಿದೆ. ಇದರಲ್ಲಿರುವ 10 ಸ್ಪೀಕರ್ ಗಳಲ್ಲಿ 4 ಮೇಲ್ಮುಖವಾಗಿದ್ದು, 3D ಗುಣಮಟ್ಟದ ಸೌಂಡ್ ಹೊಂದಿದೆ.

ನೋಡುಗರಿಗೆ ಹಾಗೂ ಕೇಳುಗರಿಗೆ ಮೈ ಜುಂ ಎನ್ನುವ ಅನುಭವ ನೀಡಲಿವೆ. ವಿಶಿಷ್ಠ ವಿನ್ಯಾಸದ ಮೂಲಕ ಪ್ರಸಾರವಾಗುವ ಸೌಂಡ್ ಪರಿಣಾಮ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವಂತಿದೆ. ಇದರಲ್ಲಿರುವ 3D ಇಫೆಕ್ಟ್ ನ ಡಿಜಿಟಲ್ ಸಿಗ್ನಲ್ ಕಮ್ಯುನಿಕೇಶನ್ ಅಲ್ಗೋರಿಥಮ್ ತಂತ್ರಜ್ಞಾನ ಸ್ವೀಟ್ ಸ್ಪಾಟ್ ತಂತ್ರಜ್ಞಾನದೊಂದಿಗೆ ಸೇರಿಕೊಂಡು ಮಧುರವಾದ ಸಂಗೀತ ನೀಡುವಲ್ಲಿ ಸಫಲವಾಗಿದೆ.

ಇದರಲ್ಲಿವ 3D ಬ್ಲೂ ರೇ ಪ್ಲೇ ಬ್ಯಾಕ್, 1080 ಪಿಕ್ಸೆಲ್ 3D ಚಿತ್ರಗಳನ್ನು 12-ಬಿಟ್ ಗ್ರೇಸ್ ನೋಟ್ ಮೂಲಕ ನೀಡಲಿವೆ. ಈ ಸೇವೆ ಟ್ಯಾಬ್ಲೆಟ್ಸ್, ಪಿಸಿ ಮತ್ತು ಮೊಬೈಲ್ ಫೊನುಗಳಲ್ಲೂ ಲಭ್ಯ. ಆದರೆ ಸಾಮಾನ್ಯ ವರ್ಗಕ್ಕೆ ಕೊಂಚ ದುಬಾರಿ ಎನಿಸಬಹುದಾದ ಬೆಲೆ ರು. 1,80,000 ಹೊಂದಿರುವ ಇದು ಇದರಲ್ಲಿರುವ ವಿಶೇಷತೆಗೆ ತಕ್ಕ ದರ ಹೊಂದಿದೆ ಎಂದೇ ಹೇಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot