Subscribe to Gizbot

ಜಾಬ್ರದ ಹೆಡ್ ಸೆಟ್ ನೀಡಲಿದೆ ಡಬಲ್ ಆಫರ್

Posted By: Super

ಜಾಬ್ರದ ಹೆಡ್ ಸೆಟ್ ನೀಡಲಿದೆ ಡಬಲ್ ಆಫರ್
ಜಾಬ್ರದ ಹೆಡ್ ಸೆಟ್ ಶಬ್ದದಲ್ಲಿ ಉತ್ತಮಗುಣ ಮಟ್ಟದಾಗಿದ್ದು ಮಾರುಕಟ್ಟೆಯಲ್ಲಿ ಯಾವತ್ತು ಸುದ್ದಿಯಲ್ಲಿರುತ್ತದೆ. ಇದೀಗ ಹೊಸ ಹೆಡ್ ಸೆಟ್ ಜಾಬ್ರ ಪ್ರೋ 9450 ತಯಾರಿಸಿದ್ದು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಬಳಕೆದಾರರಿಗೆ ಸುಲಭವಾಗುವಂತೆ ಹಾಗೂ ಮತ್ತಷ್ಟು ಆಕರ್ಷಕವಾಗುವಂತೆ ಇದರ ಕಾರ್ಯ ವೈಖರಿಯನ್ನು ರೂಪಿಸಲಾಗಿದೆ.

ಈ ಹೆಡ್ ಮುಖ್ಯ ಎರಡು ಲಕ್ಷಣಗಳೆಂದರೆ ಎರಡು ರೀತಿಯಲ್ಲಿ ಕರೆಯನ್ನು ಸ್ವೀಕರಿಸಬಹುದಾಗಿದೆ.

1. ನೀವು ಆಫೀಸ್ ನಲ್ಲಿ ರುವಾಗ ಕಾಲ್ ಬಂದರೆ ಹೆಡ್ ಸೆಟ್ ನಲ್ಲಿರುವ ಟಚ್ ಪ್ಯಾಡ್ ಅನ್ನು ಪ್ರೆಸ್ ಮಾಡಿ ಮಾತನಾಡಬಹುದಾಗಿದೆ.
2. ಒಂದು ವೇಳೆ ನೀವು ವಾಹನ ಚಲಾಯಿಸುವಾಗ ಕರೆ ಬಂದರೆ ಸುಲಭವಾಗಿ ಕರೆ ಸ್ವೀಕರಿಸುವಂತೆ ಹೆಡ್ ಸೆಟ್ ರೂಪಿಸಲಾಗಿದೆ.

ಜಾಬ್ರ ಪ್ರೋ 9450ನಲ್ಲಿ ಮೋನೋ ಸ್ಪೀಕರ್ ಜೊತೆ ಅವಳಿ ಮೈಕ್ರೋ ಪೋನ್ ಸೌಲಭ್ಯವಿದೆ. ಇದು ಮುಖ್ಯವಾಗಿ ಉದ್ಯಮಿಗಳು ಮತ್ತು ಕಂಪನಿ ಉದ್ಯೋಗಿಗಳನ್ನು ಗುರಿಯಾಗಿ ಇಟ್ಟು ಈ ಹೆಡ್ ಸೆಟ್ ತಯಾರಿಸಲಾಗಿದೆ.

ಜಾಬ್ರ ಪ್ರೋ 9450 ಬೆಲೆಯಲ್ಲಿ ರೂಪಾಯಿ 14,000 ರಷ್ಟಿದ್ದರೂ ಇದರಲ್ಲಿರುವ ಸೌಲಭ್ಯಗಳನ್ನು ನೋಡುವಾಗ ಬಳಕೆದಾರನಿಗೆ ಅಷ್ಟು ಬೆಲೆಯನ್ನು ಕೊಟ್ಟರು ಒಳ್ಳೆಯ ವಸ್ತು ಸಿಕ್ಕಿದೆ ಎಂಬ ತೃಪ್ತಿ ಇರುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot