ಸೋನಿ ಪರಿಚಯಿಸುತಿದೆ ಸ್ಮಾರ್ಟ್ MP3 ಪ್ಲೇಯರ್

Posted By: Staff

ಸೋನಿ ಪರಿಚಯಿಸುತಿದೆ ಸ್ಮಾರ್ಟ್ MP3 ಪ್ಲೇಯರ್
ಪ್ರತಿಷ್ಠಿತ ಸೋನಿ ಕಂಪನಿ ಇದೀಗ ನೂತನ ಸೋನಿ NWZ-A844 MP3 ಪ್ಲೇಯರ್ ಪರಿಚಯಿಸಿದೆ. ಕಂದು ಬಣ್ಣದಲ್ಲಿರುವ ಈ ಮ್ಯೂಸಿಕ್ ಪ್ಲೇಯರ್ ನೋಡಲು ಮಾತ್ರ ಆಕರ್ಷಿತವಾಗಿಲ್ಲ, ನಿಮಗೊಪ್ಪುವ ಅನೇಕ ಸೌಲಭ್ಯವನ್ನೂ ನೀಡಲಿದೆ.

ಉತ್ಕ್ರಷ್ಟ ಮಟ್ಟದ ಸಂಗೀತ ಸ್ಪಷ್ಟತೆ ಮತ್ತು ಡಿಜಿಟಲ್ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಸಹ ಹೊಂದಿದೆ. 7.1 ಸಿಎಂ ಡಿಸ್ಪ್ಲೇ ಜೊತೆ ತುಂಬಾ ಉತ್ತಮ ಗುಣಮಟ್ಟದ ವಿಡಿಯೋ ಪ್ರಸಾರಕ್ಕಾಗಿ OLED ಡಿಸ್ಪ್ಲೇ ನೀಡಲಾಗಿದೆ.

400 x 240 ಪಿಕ್ಸಲ್ ನೊಂದಿಗೆ 262,144 ಕಲರ್ ಗುಣಮಟ್ಟ ಹೊಂದಿರುವ ಈ ಮ್ಯೂಸಿಕ್ ಪ್ಲೇಯರ್ ನಲ್ಲಿರುವ ಇನ್ನೊಂದು ವಿಶೇಷ ಅಂಶವೆಂದರೆ ಎಫ್ ಎಂ ಟ್ಯೂನರ್. ಆಡಿಯೋ ಮತ್ತು ವಿಡಿಯೋ ಎರಡು ಆಯ್ಕೆಯೂ ಇದ್ದು, ಆಡಿಯೋಗಾಗಿ ಕ್ಲಿಯರ್ ಬಾಸ್ ಮತ್ತು ಕ್ಲಿಯರ್ ಸ್ಟಿರಿಯೋ ನೀಡಲಾಗಿದೆ. ಸಂಗೀತವನ್ನು ನಿಮ್ಮ ಮನಸ್ಸೋ ಇಚ್ಛೆ ಕೇಳಲು 5 ಬ್ಯಾಂಡ್ ಈಕ್ವಿಲೈಸರ್ ನೀಡಲಾಗಿದ್ದು, ಹೆವಿ, ಪಾಪ್ ಮತ್ತು ಯುನಿಕ್ ಆಯ್ಕೆ ನೀಡಲಾಗಿದೆ.

ಅಧೀಕೃತ ಮಾಹಿತಿ ಪ್ರಕಾರ ಸುಮಾರು 1800 ಹಾಡುಗಳನ್ನು ಇದರಲ್ಲಿ ಶೇಖರಿಸುವ ಸಾಮರ್ಥ್ಯ ಹೊಂದಿದ್ದು, ಸುಮಾರು 120 ಗಂಟೆ ಅವಧಿ ರೆಕಾರ್ಡ್ ಮಾಡುವ ಸೌಲಭ್ಯವನ್ನೂ ಒದಗಿಸಲಾಗಿದೆ. ಮೆಮೊರಿ ಕೂಡ ತೃಪ್ತಿಕರವಾಗಿದ್ದು, ಮಲ್ಟಿ ಫೈಲ್ ಫಾರ್ಮೆಟ್ ಗಳಾದ MP3, MPEG 4 ಮತ್ತು AAC-LC ಆಡಿಯೋ ಬಿಟ್ ರೇಟ್ ಹೊಂದಿದೆ. JPEG ಫೈಲ್ಸ್ ಗಳನ್ನೂ ಸಹ ಬೆಂಬಲಿಸುತ್ತದೆ.

29 ಗಂಟೆ ನಿರಂತರ ಪ್ಲೇಬ್ಯಾಕ್ ಹೊಂದಿರುವ ಸೋನಿ NWZ-A844 MP3 ಪ್ಲೇಯರ್ ದೂರ ಪ್ರಯಾಣಕ್ಕೆ ಕೊಂಡೊಯ್ದರೆ ಪ್ರಯಾಣವೂ ಸುಖಕರವೆನಿಸಲಿದೆ. ವಿಡಿಯೋಗಾಗಿ ಫ್ರೇಮ್ ರೇಟ್ 30 fps ಮತ್ತು QVGA 720 x 480 ವರೆಗೂ ರೆಸೊಲ್ಯೂಷನ್ ಹೊಂದಿದೆ. ಸ್ಲೈಡ್ ಶೋ ಆಯ್ಕೆಯಿರುವುದರಿಂದ ನೀವು ಶೇಖರಿಸಿರುವ ಚಿತ್ರಗಳನ್ನೂ ವೀಕ್ಷಿಸಬಹುದಾಗಿದೆ.

ಈ ಪ್ಲೇಯರ್ ದರದ ವಿಷಯಕ್ಕೆ ಬಂದರೆ, ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ತೆರಿಗೆ ನಿರ್ಬಂಧಿಸಿ ಸುಮಾರು 6900 ರು ಎಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot