ಬಾಡಿ ಬಿಲ್ಡ್ ನಲ್ಲಿ ಬ್ಯಾಲೆನ್ಸ್ ಹೆಡ್ ಪೋನ್!

Posted By: Staff

ಬಾಡಿ ಬಿಲ್ಡ್ ನಲ್ಲಿ ಬ್ಯಾಲೆನ್ಸ್ ಹೆಡ್ ಪೋನ್!
ದೇಹ ಫಿಟ್ ನೆಸ್ ಗಾಗಿ ಜಿಮ್ ಗೆ ಜನ ಹೋದರೆ ತಾಂತ್ರಿಕ ಕಂಪನಿಗಳು ತಮ್ಮ ತಂತ್ರಜ್ಞಾನವನ್ನು ಉಪಯೋಗಿಸಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ. ಮ್ಯುಸಿಕ್ ವಸ್ತಗಳನ್ನು ಉತ್ಪಾದಿಸುವ ನ್ಯೂ ಬ್ಯಾಲೆನ್ಸ್ ತನ್ನ ಹೊಸ ನ್ಯೂ ಬ್ಯಾಲೆನ್ಸ್ NB639 ಫಿಟ್ ನೆಸ್ ಹೆಡ್ ಪೋನ್ ತಯಾರಿಸಿದೆ.

ಇದರಲ್ಲಿರುವ ಅನೇಕ ಅಂಶಗಳು ಇದನ್ನು ಇತರ ಹೆಡ್ ಪೋನ್ ಗಳಿಗಿಂತ ಭಿನ್ನವಾಗಿಸಿದೆ.ಈ ಹೆಡ್ ಪೋನ್ ಕಿವಿಗೆ ಸಿಕ್ಕಿಸಿ ಆರಾಮವಾಗಿ ವ್ಯಾಯಾಮದಲ್ಲಿ ತೊಡಗಬಹುದಾಗಿದೆ, ಇದರಿಂದ ಯಾವುದೇ ಅಡಚಣೆ ಉಂಟಾಗುವುದಿಲ್ಲ.

ಇದರ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ವ್ಯಾಯಾಮ ಮಾಡಿದಾಗ ಉಂಟಾಗುವ ಬೆವರು ಇದರ ಮೇಲೆ ಬಿದ್ದರೂ ಸಹ ಯಾವುದೇ ತೊಂದರೆ ಈ ಹೆಡ್ ಫೋನ್ ಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲವೆಂಬುದಾಗಿದೆ.

ಅತ್ಯಾಧುನಿಕವಾದ ಸಾಫ್ಟ್ ವೇರ್ ಬಳಸಿ ಇದನ್ನು ತಯಾರಿಸಲಾಗಿದ್ದು ಅದು ಇದರ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೆ ಇದರ ಕಾರ್ಯಗಳ ಮಾಹಿತಿಯನ್ನು ಗ್ರಾಫ್ ನಲ್ಲಿ ತೋರಿಸುತ್ತದೆ.

ಇದು ಕೈಗೆಡುಕುವ ದರ ರು. 4, 000ಕ್ಕೆ ಲಭ್ಯವಿದ್ದು ಜಿಮ್ ಗೆ ಹೋಗುವರಿಗೆ ಇದೊಂದು ಬೆಸ್ಟ್ ಹೆಡ್ ಪೋನ್ ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot