ಸಿನಿಮಾ ಥಿಯೇಟರಿನ ಅನುಭವಕ್ಕಾಗಿ ಈ ಸ್ಪೀಕರ್

Posted By: Staff

ಸಿನಿಮಾ ಥಿಯೇಟರಿನ ಅನುಭವಕ್ಕಾಗಿ ಈ ಸ್ಪೀಕರ್
ಥಿಯೇಟರಿನಲ್ಲಿ ಕುಳಿತು ಸಿನಿಮಾ ನೋಡುವ ಅನುಭವದ ಹಾಗೆ ನಿಮ್ಮ ಹೋಂ ಥಿಯೇಟರಿನಲ್ಲಿ ಸಿಗಬೇಕೆ ಹಾಗಾದರೆ ಪಾರಾಡಿಮ್ ಶಿಫ್ಟ್ 100 CT ಸಿನಿಮಾ ಸ್ಪೀಕರ್ ಅನ್ನು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ. ಇದರೊಂದಿಗೆ ಸೇರಿ 200 CT ಮತ್ತು 400 CT ಸಿನಿಮಾ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ.

ಇದರಲ್ಲಿ 100 CT ಸಿನಿಮಾ ಸ್ಪೀಕರ್ ಬಗ್ಗೆ ಹೇಳುವುದಾದರೆ ಇದರಲ್ಲಿ ಹೊರಹೊಮ್ಮುವ ಸೌಂಡ್ ಸಿನಿಮಾ ಥಿಯೇಟರಿನ ಸೌಂಡಿನ ರೀತಿಯೆ ಇದೆ. ಇದರಲ್ಲಿ ಭಾವನಾತ್ಮಕ ಚಿತ್ರಣಗಳು, ನಾಯಕ ಅಥವಾ ನಾಯಕಿ
ಡೈಲಾಗ್ ಹೇಳುವಾಗ ಬಿಡುವ ಉಸಿರಿನ ಶಬ್ದವನ್ನು ಸಹ ಇದರಲ್ಲಿ ಕೇಳಬಹುದಾಗಿದೆ.

ಇದರಲ್ಲಿ S-PAL ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಸೌಂಡ್ ಅನ್ನು ಕಡಿಮೆ ಮಾಡಿ ಮತ್ತೆ ಪ್ರತಿಶಬ್ದವನ್ನು ಉಂಟು ಮಾಡಿ ಶಬ್ದವನ್ನು ನೈಜವಾಗಿ ಹೊರಹೊಮ್ಮುವಂತೆ ಮಾಡುತ್ತದೆ. ಇದರಲ್ಲಿ ಆಪ್ಲಿಪೈಯರ್ ಅನ್ನು ಎರಡು ಇನ್ ಪುಟ್ ಲೈನ್ ಆಯ್ಕೆ ಇದ್ದು ,ಪವರ್ ಸಪ್ಲೈ 300 ವ್ಯಾಟ್ ಇರುವರೆಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಸಿನಿಮಾ ನೋಡುವಾಗ ಥಿಯೇಟರಿನಲ್ಲಿ ನೋಡಿದ ಅನುಭವ ನೀಡುವ ಈ ಸ್ಪೀಕರ್ ಬೆಲೆ ರು. 50,000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot