ವಾವ್ ! ಜೇಬಿನಲ್ಲಿ ಕೊಂಡೊಯ್ಯಬಹುದು ಈ ಸ್ಪೀಕರ್

Posted By: Staff

ವಾವ್ ! ಜೇಬಿನಲ್ಲಿ ಕೊಂಡೊಯ್ಯಬಹುದು ಈ ಸ್ಪೀಕರ್
ಇದು ಹೇಳಿ ಕೇಳಿ ಬ್ಲೂಟೂಥ್ ಸ್ಪೀಕರ್ ನ ಜಮಾನ. ಅದರಲ್ಲೂ ಜೊತೆಗೆ ಕೊಂಡೊಯ್ಯಬಹುದಾದ ವಸ್ತುಗಳಾದರೆ ಅದು ಮತ್ತಷ್ಟು ಜನಪ್ರಿಯವಾಗುತ್ತದೆ. ಜನರ ಈ ಮನಸ್ಥಿತಿಗೆ ಹೊಂದುವಂತೆ ವೆಹೋ ಪೋರ್ಟೇಬಲ್ 360 ಡಿಗ್ರಿ ಸ್ಪೀಕರ್ ಅನ್ನು ತಯಾರಿಸಲಾಗಿದೆ.

ಈ ಸ್ಪೀಕರ್ ಗಾತ್ರದಲ್ಲಿ ಚಿಕ್ಕದಾದರೂ ಶಬ್ದ ಮಾತ್ರ ಸಕತ್ ಜೋರು ! ಇದನ್ನು ಜೀಬಿನಲ್ಲಿಟ್ಟು ಕೊಂಡೊಯ್ಯಬಹುದಾದರಿಂದ ಇದನ್ನು ಪಿಕ್ ನಿಕ್ ಪಾರ್ಟಿಗೂ ತೆಗೆದುಕೊಂಡುಹೋಗಬಹುದು.

ಇದರಲ್ಲಿರುವ ಲೀಥಿಯಂ ion ಬ್ಯಾಟರಿಯನ್ನು USB ಕೇಬಲ್ ಬಳಸಿ ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ. ಈ ಬ್ಯಾಟರಿ ಬಳಸಿ 3 ಗಂಟೆಯವರೆಗೆ ನಿರಂತರವಾಗಿ ಸಂಗೀತ ಕೇಳಬಹುದು.

ಈ ಸ್ಪೀಕರ್ ಯಾವುದೆ ಸ್ಮಾರ್ಟ್ ಪೋನ್, ಡಿಜಿಟಲ್ ಬ್ಲಟೂತ್ ಇರುವ ಮೊಬೈಲ್ ಗಳಿಗೆ ಜಾಸ್ತಿ ಅಂದರೆ 15m ದೂರದಲ್ಲಿ ಜೋಡಿಸಿದರೆ ಉತ್ತಮ ಗುಣಮಟ್ಟದ ಶಬ್ದ ನೀಡುತ್ತದೆ.

ಅಲ್ಲದೆ ಇದು 3.5ಎಂಎಂ ಜಾಕ್ ಹೊಂದಿರುವ ಸಾಧನಗಳನ್ನು ಬೆಂಬಲಿಸುತ್ತದೆ. ಅಲ್ಲದೆ ಇದನ್ನು ಐಪೋನ್ ಮತ್ತು ಐಪೋಡ್ ಗೂ ಜೋಡಿಸಬಹುದು. ಈ ಸ್ಪೀಕರ್ 2.2 W ಅನ್ನು ಸಪೋರ್ಟ್ ಮಾಡುತ್ತದೆ.

ಆದರೆ ಈ ಸ್ಪೀಕರ್ ನಲ್ಲಿ ದೋಷವಲ್ಲದಿದ್ದರೂ ಕೆಲವು ಬಳಕೆದಾರರಿಗೆ ಕಿರಿಕಿರಿ ಕೊಡುವ ವಿಷಯವೆಂದರೆ ಅಟೋ ವಾಲ್ಯೂಮ್ ಕಂಟ್ರೋಲ್ ಇಲ್ಲದಿರುವುದು ಮತ್ತು ಇದರ ಚಾರ್ಜರ್ mini-USB ಆಗಿದೆ.

ಎಲ್ಲಿಂದರಲ್ಲಿ ಕೊಂಡೊಯ್ದು ಸಂಗೀತದ ಸವಿಯನ್ನು ಸವಿಯುಬಹುದಾದ ಈ ಸ್ಪೀಕರ್ ಬೆಲೆ ರು. 2,900 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot