'ಸಿರಿ' ಸೌಲಭ್ಯ ಐಪೋನ್ 4S ಬಳಕೆದಾರರಿಗೆ ಮಾತ್ರ

Posted By: Staff

'ಸಿರಿ' ಸೌಲಭ್ಯ ಐಪೋನ್ 4S ಬಳಕೆದಾರರಿಗೆ ಮಾತ್ರ
ಐಪೋನ್ ಗಳಿಗಾಗಿಯೆ ಬಂದ ಸಿರಿ ಅದರ ಕಾರ್ಯ ವೈಖರಿಯಿಂದ ನರ ಹುಬ್ಬೇರುವಂತೆ ಮಾಡಿದ್ದು ಎಲ್ಲರ ಗಮನದಲ್ಲಿದೆ, ಇದು ಒಂಥಾರ ಪರ್ಸನಲ್ ಸೆಕ್ರಟರಿ ತರನೆ ಕಾರ್ಯ ನಿರ್ವಹಿಸಿತ್ತು.

ನೀವು ಅದಕ್ಕೊಂದು ಸಿಂಗಲ್ ಕಮಾಂಡ್ ಮಾಡಿದರೆ ಸಾಕು ಮೆಸೇಜ್ , ಇಮೇಲ್ ಎಲ್ಲದರ ಬಗ್ಗೆ ಜ್ಞಾಪಕ ಮಾಡುತ್ತಿತ್ತು, ಒಂದು ವೇಳೆ ರಾಂಗ್ ಕಾಂಟಕ್ಟ್ ಗೆ ಮೆಸೇಜ್ ಮಾಡಿದರೂ ಇದು ಅದರ ಬಗ್ಗೆ ಬಳಕೆದಾರನ ಗಮನಕ್ಕೆ ತಂದು ಅವನು ಅಥವಾ ಅವಳನ್ನು ಹುಬ್ಬೇರಿಸುವಂತೆ ಮಾಡಿತ್ತು.

ಈಗ ಬಂದಿರುವ ಐರಿಸ್ 9000 ವಾಯ್ಸ್ ಆಕ್ಸಸರಿಯನ್ನು ಐಪೋನ್ 4Sಗಾಗಿಯೆ ಮಾಡಲಾಗಿದ್ದು ಇದರಲ್ಲಿ 'ಸಿರಿ' ಅಪ್ಲಿಕೇಶನ್ ಅನ್ನು ಮತ್ತಷ್ಟು ಪರಿಸ್ಕೃತಗೊಳಿಸಲಾಗಿದೆ. ಇದನ್ನು ಐಪೋನ್ 4S ಬಳಕೆದಾರರು ಬಳಸಿ ಎಂಥ ಗದ್ದಲವಿರುವ ಜಾಗದಲ್ಲಿ ಬೇಹಾದರೂ ನಿಂತು ಮಾತನಾಡಿದರೂ ಸಹ ವಾಯ್ಸ್ ಸ್ಪಷ್ಟವಾಗಿ ಕೇಳುವುದು.

ಈ ಸಾಧನವನ್ನು ಮನೆಯಲ್ಲಿ 50 ಅಡಿ ದೂರದಲ್ಲಿ ಇಟ್ಟು ಅತಿ ಮೆಲ್ಲನೆ ಪಿಸುಕುಟ್ಟಿದರೂ ಸಹ ಆ ಕಡೆಯವರಿಗೆ ವಾಯ್ಸ್ ಬಹಳ ಸ್ಪಷ್ಟವಾಗಿಯೆ ಕೇಳಿಸುವುದು.ಇದು ಬಳಕೆದಾರರು ಕೊಡುವ ಆಜ್ಞೆಯನ್ನು ಚಾಚುತಪ್ಪದೆ ಪಾಲಿಸುತ್ತದೆ.

ಆದರೆ ಈ ಸೌಲಭ್ಯವನ್ನು ಐಪೋನ್ 4S ಬಳಕೆದಾರರು ಮಾತ್ರ ಪಡೆಯಬಹುದಾಗಿದೆ.ಆದರೆ ಈ ಪರ್ಸನಲ್ ಬೆಲೆ ರು. 3000 ಆಗಿದ್ದು ಇದು ಅತಿ ಬೇಗನೆ ಜನಪ್ರಿಯಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot