Subscribe to Gizbot

ಸಕತ್ ಮನರಂಜನೆ ನೀಡುತ್ತೆ ಈ ಸ್ಪೀಕರ್

Posted By: Super

ಸಕತ್ ಮನರಂಜನೆ ನೀಡುತ್ತೆ ಈ ಸ್ಪೀಕರ್
ಸ್ಪೀಕರ್ ಅನ್ನು ಹಾಡನ್ನು ಕೇಳಲು ಮಾತ್ರವಲ್ಲ, ದೃಶ್ಯವನ್ನು ನೋಡಿ ಆನಂದಿಸಬೇಕು ಎಂದು ಬಯಸುವರಿಗಾಗಿ ಸೂಪರ್ ಮನರಂಜನೆ ನೀಡಲು ಸೂಪರ್ ಟೂಥ್ ಡಿಸ್ಕೋ ಸ್ಪೀಕರ್ ಅನ್ನು ಮಾರುಕಟ್ಟೆಗೆ ತಂದಿದೆ.

ಈ ಸ್ಪೀಕರ್ ಅನ್ನು ಐಪೋಡ್, ಐಫೋನ್ ಹಾಗೂ ವಾಕ್ ಮೆನ್ ಗಳಲ್ಲೂ ಆಡಿಯೊ ಜಾಕ್ ಅಥವಾ ಹೆಡ್ಫೋನ್ ಸಹಾಯದಿಂದ ಜೋಡಿಸಬಹುದಾಗಿದೆ. ಅಲ್ಲದೆ ಈ ಸ್ಪೀಕರ್ ಅನ್ನು MP3 ಪ್ಲೇಯರ್ ನಿಂದ ಯಾವುದೇ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಗೆ ಜೋಡಿಸಬಹುದಾಗಿದೆ.

1140 ಗ್ರಾಂ ತೂಕವಿರುವ , ಪಾದದಷ್ಟು ಉದ್ದದ ಈ ಸ್ಪೀಕರ್ ಸ್ವಲ್ಪ ಭಾರವಾಗಿದ್ದರೂ ಜೊತೆಗೆ ಕೊಂಡೊಯ್ಯ ಬಹುದಾಗಿದೆ.
ಈ ಸ್ಪೀಕರ್ ಬಳಸಿ ಇದರ ಶಬ್ದವನ್ನು ಹೆಚ್ಚು ಅಥವಾ ಕಡಿಮೆ ಮಾಡಿ ಸಕತ್ ಮನರಂಜನೆ ಪಡೆಯಬಹುದಾಗಿದೆ.

ಆದರೆ ಈ ಸ್ಪೀಕರ್ ನಲ್ಲಿ ಒಂದು ಹಂತದವರೆಗೆ ಶಬ್ದವನ್ನು ಹೆಚ್ಚು ಮಾಡಿದರೆ ತುಂಬಾ ಒಳ್ಳೆಯ ಗುಣಮಟ್ಟದ ಶಬ್ದವನ್ನು ಉಂಟುಮಾಡುತ್ತದೆ, ಆದರೆ ಅತಿ ಹೆಚ್ಚು ಮಾಡಿದರೆ ಶಬ್ದದ ಗುಣಮಟ್ಟ ಅಷ್ಟು ಚೆನ್ನಾಗಿರುವುದಿಲ್ಲ ಹಾಗಂತ ತೀರಾ ಕೆಟ್ಟಾದಾಗಿಯೇನು ಇರುವುದಿಲ್ಲ.

ಇದರ ಬ್ಯಾಟರಿ ಪವರ್ 10 ಗಂಟೆಗಳ ಕಾಲ ನಿಲ್ಲವುದು. ಈ ಉತ್ತಮ ಗುಣಮಟ್ಟದ ಸ್ಪೀಕರ್ ರು.5,750ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot