ವಿಸ್ಕೋ 1 ಸ್ಪೀಕರ್ ನ ವಿಶೇಷತೆ ಗೊತ್ತಾ?

Posted By: Staff

ವಿಸ್ಕೋ 1 ಸ್ಪೀಕರ್ ನ ವಿಶೇಷತೆ ಗೊತ್ತಾ?
NAD ಎಲೆಕ್ಟ್ರಾನಿಕ್ ಇತ್ತೀಚಿಗೆ ವಿಸ್ಕೋ 1 ಎಂಬ ಡಿಜಿಟಲ್ ಮ್ಯೂಸಿಕ್ ಸಿಸ್ಟಮ್ ತಂದಿದ್ದು ಈ ಡಕ್ ಸಿಸ್ಟಮ್ ಅನ್ನು ಐಫೋನ್ ಮತ್ತು ಐಫೋಡ್ ಗಳಲ್ಲಿ ಬಳಸಿ ಅದರ ಕಾರ್ಯವೈಖರಿಗಳನ್ನು ಹೆಚ್ಚಿಸಿ ಕೊಳ್ಳಬಹುದಾಗಿದೆ ಎಂದು ಘೋಷಿಸಿದೆ.

ಈ ಸ್ಪೀಕರ್ ನಲ್ಲಿ ರಿಂಗ್ ಆಕಾರದ ಡಕ್ ಇದ್ದು ಅದಕ್ಕೆ ಐಫೋನ್ ಅಥವಾ ಐಫೋಡ್ ಅನ್ನು ಡಕ್ ಮಾಡಿದರೆ ಅದರಿಂದ ಬರುವ ಶಬ್ದವು ಗುಣಮಟ್ಟದಾಗಿದ್ದು ಕೇಳುಗರಿಗೆ ಸಂತೋಷವನ್ನು ನೀಡುವುದು

.ಇದರಲ್ಲಿ ಬ್ಲೂಟೂಥ್ ಸೌಲಭ್ಯವಿದ್ದು ಅದನ್ನು ಬಳಸಿ ಯಾವುದೆ ಡಿಜಿಟಲ್ ಸಾಧನಕ್ಕೆ ಜೋಡಿಸಿ ಹಾಡನ್ನು ಕೇಳಬಹುದಾಗಿದೆ.ಇದು ಆಪ್ಟಿಕಲ್ ಡಿಜಿಟಲ್ ಇನ್ ಪುಟ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಈ ವಿಸ್ಕೋ 1 ಸಾಧನವನ್ನು ಐಫೋನ್ ಮತ್ತು ಐಫೋಡ್ ಹೊರೆತು ಪಡಿಸಿ , ಆಂಡ್ರಾಯ್ಡ್ ಮತ್ತು ವಿಂಡೀಸ್ ಆಪರೇಟಿಂಗ್ ಸಿಸ್ಟಮ್ ಇರುವ ಗ್ಯಾಡ್ಜೆಟ್ ನಲ್ಲಿ ಸಹ ಬಳಸಬಹುದು ಎಂಬುದು ಇದರ ಬಹು ಮುಖ್ಯ ವಿಶೇಷಗಳಲ್ಲಿ ಒಂದಾಗಿದೆ.

ಈ ಡಕ್ ತೊಟ್ಟಲನ್ನು ತಿರುಗಿಸಬಹುದಾಗಿದ್ದು, ಇದರಲ್ಲಿರುವ 30 ಪಿನ್ ಕನೆಕ್ಟರ್ ಬಳಸಿ ಐಫೋಡ್ ಅನ್ನು ಚಾರ್ಜ್ ಮಾಡಬಹುದಾಗಿದೆಇದನ್ನು ಬಳಸಿ ಟಿವಿಗೆ ಜೋಡಿಸಿ ಐಫೋನ್ ನಲ್ಲಿರುವ ವೀಡಿಯೊ ಆನ್ನು ಚಾಲನೆ ಮಾಡಿ ಟಿವಿಯಲ್ಲಿ ನೋಡಬಹುದಾಗಿದೆ.

ಗುಣಮಟಟ್ದಲ್ಲಿ ಉತ್ತಮ ಇರುವ ಈ ಮೊಬೈಲ್ ಬೆಲೆಯಲ್ಲಿ ಮಾತ್ರ ಯಾವುದೆ ರಾಜಿಗೆ ತಯಾರಿಲ್ಲ ಅಂದರೆ ಇದನ್ನು ರು. 34, 000 ಗ್ರಾಹಕಕೊಟ್ಟರೆ ಮಾತ್ರ ಇದರ ಸೌಲಭ್ಯ ಪಡೆಯಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot