ಹೆಡ್ ಸೆಟ್ ಲೋಕದ ಹೊಸ ಅಲೆ ಬ್ಲೂಟೂಥ್ ಮೊನೊ

Posted By: Staff

ಹೆಡ್ ಸೆಟ್ ಲೋಕದ ಹೊಸ ಅಲೆ ಬ್ಲೂಟೂಥ್ ಮೊನೊ
ಹೆಡ್ ಸೆಟ್ ಮಾರುಕಟ್ಟೆಯಲ್ಲಿ ಜಾಬ್ರಾದೆ ನಾಯಕ ಸ್ಥಾನ. 2000ರಲ್ಲಿ ಮೊಬೈಲ್ ಗಾಗಿ ಬ್ಲೂಟೂಥ್ ಹೆಡ್ ಸೆಟ್ ಸೃಷ್ಟಿಸಿ ಹೆಡ್ ಸೆಟ್ ಲೋಕದಲ್ಲಿ ಒಂದು ಹೊಸ ಮೈಲುಗಲ್ಲನ್ನೆ ಸೃಷ್ಟಿಸಿತು.

ಈಗ ಮತ್ತೊಂದು ಮಾದರಿಯ ಬ್ಲೂಟೂಥ್ ಮೊನೊ ಹೆಡ್ ಸೆಟ್ ತಯಾರಿಸುವುದರ ಮುಖಾಂತರ ಮತ್ತೊಮ್ಮೆ ಹೊಸ ಅಲೆಯನ್ನು ಹೆಡ್ ಸೆಟ್ ಮಾರುಕಟ್ಟೆಯಲ್ಲಿ ಸೃಷ್ಟಿಸಲಿದೆ.

ಪ್ರಯಾಣದಲ್ಲಿರುವಾಗ ಜೋರಾಗಿ ಬೀಸುವ ಗಾಳಿಯಿಂದಾಗಿ ಸರಿಯಾಗಿ ಮಾತನಾಡಲು ಆಗುವುದಿಲ್ಲ, ಅಂತಹ ಉಪದ್ರವವನ್ನು ತಪ್ಪಿಸಲು ಈ ರೀತಿಯ ಹೆಡ್ ಸೆಟ್ ತಯಾರಿಸಲಾಗಿದೆ.

ಈ ಸಾಧನವು ಬ್ಲೂಟೂಥ್ 3.0 ಆಯಾಮವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತದೆ. 18 ಗ್ರಾಂ ತೂಕದ ಈ ಹೆಡ್ ಸೆಟ್ ಧರಿಸಿದರೆ ಇದು ಧರಿಸಿದ ಅನುಭವವೆ ಆಗುವುದಿಲ್ಲ ಅಷ್ಟು ಹಗುರವಾಗಿದೆ.

ಇದರ ಚಾರ್ಜ್ ಒಮ್ಮೆ ಮಾಡಿದರೆ 15 ದಿನಗಳ ಕಾಲ ನಿಲ್ಲುವಷ್ಟು ಸ್ಟ್ಯಾಂಡ್ ಬೈ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಬಳಸಿ ನಿರಂತರವಾಗಿ 6 ಗಂಟೆಗಳ ಕಾಲ ಮಾತನಾಡಬಹುದಾಗಿದೆ. 24 mm ಇರುವ ಸ್ಪೀಕರ್ ಒಳ್ಳೆಯ ಗುಣಮಟ್ಟದ ಶಬ್ದವನ್ನು ನೀಡುತ್ತದೆ.

ಇದರಲ್ಲಿ ವಾಲ್ಯೂಮ್ ಹೆಚ್ಚು ಅಥವಾ ಕಡಿಮೆ ಮಾಡಬಹುದಾಗಿದ್ದು, ಇದರಲ್ಲಿ ವಾಟರ್ ಫ್ರೂಫ್ ಸೌಲಭ್ಯವಿಲ್ಲ, ಮಳೆಯಲ್ಲಿ ನೆನೆಕೊಂಡು ಫೋನ್ ಅನ್ನು ಯಾರೂ ಹೆಚ್ಚಾಗಿ ಬಳಸುವುದಿಲ್ಲವಾದರಿಂದ ಇದೊಂದು ದೊಡ್ಡ ವಿಷಯವಲ್ಲ.

ಈ ಹೆಡ್ ಸೆಟ್ ಭಾರತೀಯ ಮಾರುಕಟ್ಟೆಯಲ್ಲಿ ಸಹ ಲಭ್ಯವಿದ್ದು ಇದರ ಬೆಲೆ ರು. 9000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot