ಬಣ್ಣ-ಬಣ್ಣದ ಚಿಟ್ಟೆಯಲ್ಲ -ಇದು ಯಮಹಾ ಸ್ಪೀಕರ್

Posted By: Staff

ಬಣ್ಣ-ಬಣ್ಣದ ಚಿಟ್ಟೆಯಲ್ಲ -ಇದು ಯಮಹಾ ಸ್ಪೀಕರ್
ಯಮಹಾ ಕಂಪನಿ ವಸ್ತುಗಳ್ನು ಬಯಸುವ ಗ್ರಾಹಕರಿಗೇನು ಕೊರತೆಯಿಲ್ಲ ಅಟೋಮೊಬೈಲ್ ಆಗಲಿ, ಗ್ಯಾಡ್ಜೆಟ್ ಆಗಲಿ ಯಮಹಾ ವಸ್ತುಗಳೆ ಬೇಕೆಂದು ಬಯಸುತ್ತಾರೆ.

ಈಗ ಯಮಹಾ ಪ್ರಿಯ ಗ್ರಾಹಕರಲ್ಲಿ ಸಂಗೀತ ಗ್ರಾಹಕರಿಗಾಗಿ ಹೊಸ ಮ್ಯೂಸಿಕ್ ಸಿಸ್ಟಮ್ PDX11 ಬಿಡುಗಡೆ ಮಾಡಿದ್ದು, ಇದನ್ನು ಬಳಕೆದಾರರು ಜೊತೆಗೆ ಕೊಂಡೊಯ್ಯಬಹುದುದಂತೆ ರೂಪಿಸಿರುವುದು ಇದರ ವಿಶೇಷವಾಗಿದೆ.

ನೋಡಲು ಮನಸೆಳೆಯುವಂತೆ ಇರುವ ಈ ಸ್ಪೀಕರ್ ಕಪ್ಪು, ಬಿಳಿ, ಗಾಢವಾದ ನೀಲಿ, ಹಸಿರು ಬಣ್ಣದಲ್ಲಿ ಈ ಸ್ಪೀಕರ್ ಲಭ್ಯವಿದ್ದು, ಇದನ್ನು ಐಪೋಡ್, ಐಫೋನ್ ಗಳಲ್ಲಿ ಬಳಸಲಾಗಿದೆ.

ಸ್ಪಷ್ಟ ಶಬ್ದವನ್ನು ನೀಡುವ ಈ ಸ್ಪೀಕರ್ ನಲ್ಲಿ 4 ಇಂಚಿನ ವೂಫರ್ ಇದ್ದು ಹೆಚ್ಚು ಕಂಪನಾಂಕದ ಶಬ್ದವನ್ನು ಕಡಿಮೆ ಮಾಡುತ್ತದೆ. ಈ ಸ್ಪೀಕರ್ 8-1/4 x 9-3/8 x 9-3/8 ಇಂಚಿನ ಡೈಮೆಂಶನ್ ಹೊಂದಿದ್ದು, 6 AA ಗಾತ್ರದ ಬ್ಯಾಟರಿಯನ್ನು ಹೊಂದಿದೆ.

ಇದನ್ನು ಪರ್ಸನಲ್ ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಬಳಸಿ ಹಾಡಿನ ಮನರಂಜನೆಯನ್ನು ಪಡೆಯಬಹುದಾಗಿದೆ.ಎಕ್ಸಚೇಂಜ್ ರೇಟಿನ ಈ ಸ್ಪೀಕರ್ ರು. 6000ಕ್ಕೆ ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot