ಭೀಮ ಶಬ್ದ ನೀಡುವುದು ಸೂಪರ್ ಬೀಮ್ ಹೆಡ್ ಸೆಟ್

By Super
|
ಭೀಮ ಶಬ್ದ ನೀಡುವುದು ಸೂಪರ್ ಬೀಮ್ ಹೆಡ್ ಸೆಟ್
ಉತ್ತಮ ಮಟ್ಟದ ಶಬ್ದದ ಜೊತೆಗೆ ಸಂವಹನಕ್ಕೂ ಸಹಾಯಕವಾಗುವಂತೆ ಅದರಲ್ಲಿ ಮೈಕ್ರೋಫೋನ್ ಅಳವಡಿಸಿ ಆಂಡ್ರಿಯಾ ಎಲೆಕ್ಟ್ರಾನಿಕ್ಸ್ ಕಂಪನಿ ಆಂಡ್ರಿಯಾ ಸೂಪರ್ ಬೀಮ್ ಹೆಡ್ ಸೆಟ್ ಅನ್ನು ಉತ್ಪಾದಿಸಿದೆ.

ಈ ಹೆಡ್ ಸೆಟ್ ಸ್ಪಷ್ಟ ಶಬ್ದವನ್ನು ನೀಡುತ್ತಿದ್ದು ಸುತ್ತಮುತ್ತಲಿನ ಗದ್ದಲವನ್ನು ತಡೆಯುವುದರಿಂದ ಯಾವುದೆ ತೊಂದರೆ ಉಂಟಾಗುವುದಿಲ್ಲ. ಈ ಹೆಡ್ ಸೆಟ್ ನ ಪ್ಯಾಡ್ ಚಿಕ್ಕದಾಗಿದ್ದು ಬಳಸಲು ಸುಲಭವಾಗಿದೆ.

ಇದು 20Hz ನಿಂದ 20 KHzವರೆಗೆ ಶಬ್ದದ ಕಂಪನಾಂಕವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು USB ಸೌಂಡ್ ಕಾರ್ಡ್ ಅನ್ನು ಹೊಂದಿದ್ದು ಹೈ ಡೆಫಿನಿಷಿನ್ ಆಡಿಯೊ ನೀಡುತ್ತದೆ.

ಈ ಹೆಡ್ ಸೆಟ್ ಅನ್ನು ಅಳವಡಿಸಿಕೊಳ್ಳುವುದು ಬಹು ಸುಲಭವಾಗಿದೆ. ಈ ಹೆಡ್ ಸೆಟ್ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಜೊತೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹೆಡ್ ಸೆಟ್ ಮತ್ತು ಕಂಪ್ಯೂಟರ್ ನಡುವಿನ ಸಂವಹನಕ್ಕೆ ಸೌಂಡ್ ಕಾರ್ಡ್ ಮುಖ್ಯವಾಗಿದೆ.

ವಿದೇಶಿ ಮಾರುಕಟ್ಟೆಯಲ್ಲಿ ಈ ವಸ್ತುವಿನ ದರವನ್ನು ಭಾರತಕ್ಕೆ ಹೋಲಿಸಿದರೆ ರು. 10,000ದ ಒಳಗೆಈ ಹೆಡ್ ಸೆಟ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X