Subscribe to Gizbot

ಕ್ರಿಯೆಟಿವ್ ಸಾಧನೆಯಲ್ಲಿ D100 ವೈರ್ ಲೆಸ್ ಸ್ಪೀಕರ್

Posted By: Super

ಕ್ರಿಯೆಟಿವ್ ಸಾಧನೆಯಲ್ಲಿ D100 ವೈರ್ ಲೆಸ್ ಸ್ಪೀಕರ್
D100 ವೈರ್ ಲೆಸ್ ಸ್ಪೀಕರ್ ಈಗ ಕ್ರಿಯೆಟಿವ್ ನ ಸಾಧನೆ ಗರಿಗೆ ಮತ್ತೊಂದು ಸೇರ್ಪಡೆಯಾಗಿದೆ. ಯಾವುದೆ ಬ್ಲೂಟೂಥ್ ಸಾಧನದಲ್ಲಿ ಬಳಸಬಹುದಾದ ಗಾಗೂ ಜೊತೆಗೆ ಕೊಂಡೊಯ್ಯಬಹುದಾದ ಈ ಸ್ಪೀಕರ್ ಕೈಗೆಟುಕುವ ದರದ್ಲಿ ಲಭ್ಯವಿದೆ.

ಹಸಿರು, ಗುಲಾಬಿ, ಕಪ್ಪು, ನೀಲಿ ಬಣ್ಣದಲ್ಲಿರುವ ಲಭ್ಯವಿರುವ ಈ ಸ್ಪೀಕರ್ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ವಿನ್ಯಾಸವನ್ನು ಹೊಂದಿದೆ. ಇದು ಅಳತೆಯಲ್ಲಿ 336x115x115 mm ಮತ್ತು ಬ್ಯಾಟರಿಯನ್ನು ಹೊರತುಪಡಿಸಿ 1ಕೆಜಿ ತೂಕವನ್ನು ಹೊಂದಿದೆ.

ಈ ಸಾದನವು 4 AA ಗಾತ್ರದ ಬ್ಯಾಟರಿಯನ್ನು ಬಳಸಿಕೊಂಡು ಕಾರ್ಯವನ್ನು ನಿರ್ವಹಿಸುತ್ತದೆ. ಈ ಬ್ಯಾಟರಿಯನ್ನು ಬಳಸಿಕೊಂಡು 25 ಗಂಟೆಗಳ ಕಾಲ ನಿರಂತರವಾಗಿ ಸಂಗೀತವನ್ನು ಉತ್ತಮ ಗುಣಮಟ್ಟದಲ್ಲಿ ನೀಡುವಷ್ಟು ಸಾಮರ್ಥ್ಯವನ್ನು ಹೊಂದಿದೆ.

ಇದರಲ್ಲಿ ಬ್ಲೂಟೂಥ್ ಸಂಪರ್ಕದ ರೇಂಜ್ ಮಾತ್ರ ಅದ್ಭುತವಾಗಿದ್ದು 10 m ರೇಡಿಯಸ್ ಒಳಗೆ ಎರಡು ಸಾಧನಗಳಿಗೆ ಜೋಡಿಸಬಹುದಾಗಿದೆ.

ಈ ಸಂಗೀತ ಸಾಧನವನ್ನು ರು. 4, 500 ಕೊಂಡು ಮನೆಯಲ್ಲಿ ಸಂಗೀತದ ಸವಿಯನ್ನು ಸವಿಯಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot