ಸಂಗೀತದ ಝೂಮ್ ತರಲಿದೆ ಬೂಮ್ ಬಾಕ್ಸ್ ಸ್ಪೀಕರ್

Posted By: Staff

ಸಂಗೀತದ ಝೂಮ್ ತರಲಿದೆ ಬೂಮ್ ಬಾಕ್ಸ್ ಸ್ಪೀಕರ್
ಸಂಗೀತ ಸಾಧನಗಳು ಯಾವತ್ತಿಗೂ ತಮ್ಮ ವಸ್ತುಗಳನ್ನು ತಯಾರಿಸುವಾಗ ಮೊಬೈಲ್, ಲ್ಯಾಪ್ ಟಾಪ್, ಟಿವಿ ಇಂತಹ ವಸ್ತುಗಳಲ್ಲಿ ಕಾರ್ಯ ನಿರ್ವಹಿಸುವಂತೆ ತಯಾರಿಸಲಾಗಿರುತ್ತದೆ.

ಲ್ಯಾಪ್ ಟಾಪ್ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಗಳಲ್ಲಿರುವ ಶಬ್ದದ ಮಿತಿಯನ್ನು ಅರಿತಿರುವ ಮ್ಯೂಸಿಕ್ ಕಂಪನಿಗಳು ಅವುಗಳ ಶಬ್ದದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಅನೇಕ ಸಂಗೀತ ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತದೆ.

ಈಗ ಲಾಜಿಟೆಕ್ ಮ್ಯೂಸಿಕ್ ಕಂಪನಿ ಬ್ಲೂಟೂಥ್ ಮಿನಿ ಬೂಮ್ ಬಾಕ್ಸ್ ಹೆಸರಿನ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ.ಈ ಸ್ಪೀಕರ್ ಅನ್ನು ಐಪೋಡ್, ಐಫೋನ್, ಸ್ಮಾರ್ಟ್ ಫೋನ್ ಗಳಲ್ಲಿ ಬಳಸಲಾಗಿದ್ದು ಇದು ಬ್ಲೂಟೂಥ್ A2DP ಫ್ರೊಫೈಲ್ ಅನ್ನು ಸಪೋರ್ಟ್ ಮಾಡುತ್ತದೆ.

ಇದನ್ನು 3.5mm ಜಾಕ್ ಬಳಸಿ ಬ್ಲೂಟೂಥ್ ಗೆ ಸಪೋರ್ಟ್ ಮಾಡಲು ಸಾಧ್ಯವಿಲ್ಲವಾಗಿದೆ. ಇದನ್ನು ಬಳಸಿ ಸ್ಮಾರ್ಟ್ ಫೋನ್ ಹ್ಯಾಂಡ್ ಫ್ರೀ ಕಾಲ್ ಮಾಡಲು 1.5 ಬ್ಲೂಟೂಥ್ HFP ಫ್ರೊಫೈಲ್ ನ ಅಗತ್ಯವಿದೆ.

ಈ ಬೂಮ್ ಬಾಕ್ಸ್ ಅನ್ನು USB ಪೋರ್ಟ್ ಬಳಸಿ ಚಾರ್ಜ್ ಮಾಡಬಹುದಾಗಿದೆ. ಇದನ್ನು ಒಮ್ಮೆ ಜಾರ್ಜ್ ಮಾಡಿದರೆ 10 ಗಂಟೆಗಳವರೆಗೆ ಬಳಸಿಕೊಳ್ಳ ಬಹುದಾದಷ್ಟು ಸಾಮರ್ಥ್ಯವನ್ನು ಹೊಂದಿದೆ.

ಸದ್ಯಕ್ಕೆ ಈ ಸ್ಪೀಕರ್ ಅನ್ನು ಮುಂಚಿತವಾಗಿ ಕೋರಿಕೆಯನ್ನು ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಇದರ ಲಾಜಿಟೆಕ್ ವೆಬ್ ಸೈಟ್ ನ ಮುಖಾಂತರ ಕೋರಿಕೆ ಸಲ್ಲಿಸಬಹುದಾಗಿದೆ. ಇದರ ಬೆಲೆಯು ರು. 5000-6000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot