ಆಪಲ್ ಮೇಲೆ ಲಿಬ್ರಾಟೋನ್ ಸ್ಪೀಕರ್ ಪ್ರೀತಿ

Posted By: Staff

ಆಪಲ್ ಮೇಲೆ ಲಿಬ್ರಾಟೋನ್ ಸ್ಪೀಕರ್ ಪ್ರೀತಿ
ವೈರ್ ಲೆಸ್ ಸ್ಪೀಕರ್ ಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಈ ಬೇಡಿಕೆಯನ್ನು ಅರಿತ ಲಿಬ್ರಾಟೋನ್ ಏರ್ ಪ್ಲೇ ಸೌಂಡ್ ಅನ್ನು ಬೆಂಬಲಿಸುವ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ.

ಈ ಸ್ಪೀಕರ್ ಪರ್ಸನಲ್ ಕಂಪ್ಯೂಟರ್ ಅಥವಾ ಮ್ಯಾಕ್ ಸಿಸ್ಟಮ್ ನ್ಲಲಿ ಶೇಖರಿಸಿಟ್ಟ ಹಾಡಿನ ಸವಿಯನ್ನು ಉತ್ತಮ ಗುಣಮಟ್ಟದಲ್ಲಿ ಸವಿಯಲು ಸಹಾಯ ಮಾಡುತ್ತದೆ. ಅಲ್ಲದೆ ಆಪಲ್ ಐಫೋನ್ ಮತ್ತು ಐಪೋಡ್ ಗಳಲ್ಲಿ ಸಂಗ್ರಹಿಸಿದ ಹಾಡನ್ನು ಲಿಬ್ರಾಟೋನ್ ಸ್ಪೀಕರ್ ನಲ್ಲಿ ವೈಫೈ ಬಳಸಿ ಪ್ಲೇ ಮಾಡಬಹುದಾಗಿದೆ.

ಈ ಸ್ಪೀಕರ್ ವೆನಿಲಾ, ಗ್ರೇ ಮತ್ತು ಕಪ್ಪು ದ್ರಾಕ್ಷಿಯ ಬಣ್ಣದಲ್ಲಿ ಲಭ್ಯವಿದೆ.ಈ ಸ್ಪೀಕರ್ ಬೆಲೆ ರು. 64,000 ಆಗಿದ್ದು , ಹಸಿರು ಮತ್ತು ಕೆಂಪು ಬಣ್ಣದಲ್ಲಿ ಸಹ ಕೇಳಿ ಪಡೆದುಕೊಳ್ಳಬಹುದಾಗಿದ್ದು ಅವುಗಳ ಬೆಲೆ ರು. 68,000 ಆಗಿರುತ್ತದೆ.

ಅದಕ್ಕಿಂತ ಚಿಕ್ಕ ಗಾತ್ರದ ಸ್ಟ್ಯಾಂಡರ್ಡ್ ಲಿಬ್ರಾಟೋನ್ ಸ್ಪೀಕರ್ ರು 34, 000ಕ್ಕೆ ಆಗಿದ್ದು , ಅದರ ಪ್ರೀಮಿಯಂ ಮಾಡಲ್ ಬೆಲೆ ರು. 40, 000 ಆಗಿದೆ.

ಲಿಬ್ರಾಟೋನ್ ಅಪ್ಲಿಕೇಶನ್ ಉಚಿತವಾಗಿ ಸಿಗುತ್ತಿದ್ದು ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಸ್ಪೀಕರ್ ಅನ್ನು ಮನೆಯಲ್ಲಿ ಎಲ್ಲಿ ಇಟ್ಟರು ಉತ್ತಮ ಗುಣಮಟ್ಟದ ಶಬ್ದವನ್ನು ನೀಡುವುದು.

ಆದರೆ ಈ ಸ್ಪೀಕರ್ ಬಳಸುವವರು ಆಪಲ್ ಕಂಪನಿಯ ಐಫೋನ್, ಐಪೋಡ್, ಐಪ್ಯಾಡ್ ಹೊಂದಿದ್ದರೆ ಅತ್ಯುತ್ತಮ ಗುಣಮಟ್ಟದ ಶಬ್ದದಲ್ಲಿ ಸಂಗೀತದ ಸವಿ ಸವಿಯಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot