Subscribe to Gizbot

ಆಂಡ್ರಿಯಾ ಸೂಪರ್ ಬೀಮ್ ಹೆಡ್ ಸೆಟ್

Posted By:
ಆಂಡ್ರಿಯಾ ಸೂಪರ್ ಬೀಮ್ ಹೆಡ್ ಸೆಟ್

ಹೆಡ್ ಫೋನ್ ಮಾರುಕಟ್ಟೆ ದಿನದಿಂದ ದಿನಕ್ಕೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಂಪನಿಗಳಿಂದ ಹೊಸ ಮಾದರಿಯ ಹೆಡ್ ಫೋನ್ ಗಳು ಮಾರುಕಟ್ಟೆಗೆ ಸೇರುತ್ತಿದೆ. ಅದರಲ್ಲಿ ಈಗ ಆಂಡ್ರಿಯಾ ಕಂಪನಿ ಬಳಕೆದಾರರಿಗೆ ಮತ್ತಷ್ಟು ಸೌಲಭ್ಯವನ್ನು ಒದಗಿಸಲು ಹೊಸ ಹೆಡ್ ಸೆಟ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಮನರಂಜನೆಗೆ ಮಾತ್ರವಲ್ಲ ಔಪಚಾರಿಕ ಅಂದರೆ ಆಫೀಸ್ ಕಾರ್ಯಗಳಲ್ಲಿ ಕಾನ್ಫರೆನ್ಸ್ ಕರೆ ಮಾಡಲು ಸಹ ಬಳಸಬಹುದಾಗಿದೆ.

ಈ ಸೂಪರ್ ಬೀಮ್ ಹೆಡ್ ಸೆಟ್ ಬಗ್ಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ದೊರೆತಿದ್ದು ಇದು 2 ರೀತಿ ಮಾಡಲ್ ಗಳನ್ನು SB-205, SB-405 ಹೆಸರಿಸಲಾಗಿದೆ.ಇದರಲ್ಲಿರುವ ಬೂಮ್ ಮೈಕ್ರೊಫೋನ್ ಅನ್ನು ಬೇಡ ಅಂದರೆ ತೆಗೆದು ಇಡಬಹುದಾಗಿದೆ, ಮುಖ್ಯವಾಗಿ ಇದನ್ನು ಅಧಿಕ ಹೊತ್ತು ಕರೆಯಲ್ಲಿರುವಾಗ ಬಳಸಲು ಕಷ್ಟವಾಗಿದ್ದು ಅಂತಹ ಸಂದರ್ಭದಲ್ಲಿ ಇದನ್ನು ತೆಗೆಯಬಹುದಾಗಿದೆ.

ಈ ಸಾಧನವು ಯೂನಿ ಡೈರಕ್ಷನಲ್ ಆಗಿದ್ದು, ಇದರಲ್ಲಿ ಮೈಕ್ರೊ ಫೋನ್ ಅನ್ನು ಬಾಯಿಂದ ಸ್ವಲ್ಪ ದೂರದಲ್ಲಿಟ್ಟರೆ ಅದು ಆ ಶಬ್ದವನ್ನು ಮಾತ್ರ ತೆಗೆದು ಕೊಳ್ಳುತ್ತದೆ.

ಈ ಎರಡು ಹೆಡ್ ಫೋನ್ ಮಾಡಲ್ ಗಳಲ್ಲಿ ಸೂಪರ್ ಬೀಮ್ ಬಡ್ಸ್ SB-205 ಬೆಲೆ ರು.5,500 ಮತ್ತು ಸೂಪರ್ ಬೀಮ್ ಬಡ್ಸ್ SB-405 ಬೆಲೆ ರು.6,500 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot