ಆಡಿಯೊ ಟೆಕ್ನಿಕಾದಿಂದ ಕ್ರಿಸ್ ಮಸ್ ಉಡುಗೊರೆ

Posted By:
ಆಡಿಯೊ ಟೆಕ್ನಿಕಾದಿಂದ ಕ್ರಿಸ್ ಮಸ್ ಉಡುಗೊರೆ

ಕ್ರಿಸ್ ಮಸ್ ಹತ್ತಿರ ಬರುತ್ತಿದ್ದ ಹಾಗೆ ಕಂಪನಿಗಳು ಸಹ ಕ್ರಿಸ್ ಮಸ್ ವ್ಯಾಪಾರಗಳತ್ತ ತಮ್ಮ ಗಮನವನ್ನು ಹರಿಸಿದೆ. ಕಂಪನಿಗಳು ತಮ್ಮ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಲು ತೀರ್ಮಾನಿಸಿವೆ. ಅಂತಹ ರಿಯಾಯತಿ ಹೆಡ್ ಫೋನ್ ಮಾರುಕಟ್ಟೆಯಲ್ಲು ಸಹ ಕಾಣಬಹುದಾಗಿದೆ. ಅಂತಹ ಕಂಪನಿಗಳಲ್ಲಿ ಆಡಿಯೊ ಟೆಕ್ನಿಕಾ ಕೂಡ ಒಂದು.

ಆಡಿಯೊ ಟೆಕ್ನಿಕಾ ಸರಣಿ ಹೆಡ್ ಫೋನ್ ಗಳನ್ನು ಬಿಡುಗಡೆಯಾಗಿದ್ದು ಅವುಗಳು ಸಾಧಾರಣ ಹೆಡ್ ಸೆಟ್ ನಲ್ಲಿ ಕಂಡು ಬರುತ್ತಿದ್ದ ದೋಷದಿಂದ ಮುಕ್ತವಾಗಿವೆ. 45 ವರ್ಷಗಳ ಅನುಭವವನ್ನು ಹೊಂದಿರುವ ಈ ಕಂಪನಿಯ ವಸ್ತುಗಳು ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಂತೆ ಗುಣಮಟ್ಟವನ್ನು ಹೊಂದಿದೆ.ಇತ್ತೀಚಿಕೆಗೆ ಇದು ಸಿ ಕೆ 400, ಸಿ ಕೆ ಎಸ್ 500 ಮತ್ತು ಡಬ್ಲ್ಯೂ ಎಸ್ ಸರಣಿ ಹೆಡ್ ಫೋನ್ ಗಳನ್ನು ತಯಾರಿಸಿದೆ.

ಅದರಲ್ಲಿ ಸಿ ಕೆ 400i ಕಿವಿಯ ವಿನ್ಯಾಸದ ಚಿಕ್ಕ ಹೆಡ್ ಫೋನ್ ಆಗಿದ್ದು ತುಂಬಾ ಆಕರ್ಷಕವಾಗಿದೆ. ಈ ಹೆಡ್ ಪೋನ್ ಗಳು ಗುಲಾಬಿ, ಬಿಳಿ, ಕಪ್ಪು, ನೀಲಿ ಬಣ್ಣಗಳಲ್ಲಿ ದೊರೆಯುತ್ತಿದ್ದು, ಇಯರ್ ಫೋನ್ ನಲ್ಲಿ ಇನ್ ಲೈನ್ ರಿಮೋಟ್ ಕಂಟ್ರಲ್ ಇದ್ದು ಇದನ್ನು ಆಪಲ್ ಪೋಡ್, ಐಪ್ಯಾಡ್ ಗಳಲ್ಲಿ ಬಳಸಬಹುದಾಗಿದೆ. ಇದರಲ್ಲಿರುವ ಇನ್ ಲೈನ್ ರಿಮೋಟ್ ಬಳಸಿ ಫೋನ್ ಅಥವಾ ಪ್ಲೇಯರ್ ಅನ್ನು ಜೇಬಿನಿಂದ ಹೊರತೆಗೆಯದೆ ಶಬ್ದವನ್ನು ನಿಯಂತ್ರಿಸಬಹುದಾಗಿದೆ.

ಸಿ ಕೆ 400i ಸ್ಮಾರ್ಟ್ ಫೋನ್ ಗಳಾದ ನೋಕಿಯಾ, ಬ್ಲ್ಯಾಕ್ ಬರಿ ಮತ್ತು ಸ್ಯಾಮ್ ಸಂಗ್ ಗಳಲ್ಲಿ ಬಳಸ ಬಹುದಾಗಿದೆ. ಇವುಗಳು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ದೊರಕುತ್ತದೆ. ಸಿ ಕೆ 400 ಸರಣಿಯಲ್ಲಿ ಸಿ ಕೆ 400 ಎಕ್ಸ್ ಪಿ ಹೆಡ್ ಫೋನ್, ಸೋನಿ ಎರಕ್ಸನ್ ಎಕ್ಸ್ ಪೀರಿಯಾ ಜೊತೆ ಸ್ಪರ್ಧೆಯನ್ನು ನೀಡುವಷ್ಟು ಸಮರ್ಥವಾಗಿದೆ.

ಆಡಿಯೊ ಟೆಕ್ನಿಕಾ ಸಿಕೆ 55i ಕಪ್ಪು ಅಥವಾ ಕೆಂಪು ಮತ್ತು ಬಿಳಿ ಬಣ್ಣದ ಮಿಶ್ರಣದಿಂದ ನೋಡಲು ಆಕರ್ಷಕವಾಗಿದೆ. ಇದರಲ್ಲಿ ಶಬ್ದವು ಉತ್ತಮ ಗುಣಮಟ್ಟದಲ್ಲಿ ದೊರಕುತ್ತಿದ್ದು ಆಡಿಯೊ ಫೈಲ್ಸ್ ಗಳಲ್ಲಿ ಇದು ಅತ್ಯಂತ ಪ್ರಿಯವಾದ ಹೆಡ್ ಸೆಟ್ ಆಗಿದೆ.

ಆಡಿಯೊ ಟೆಕ್ನಿಕಾದ ಡಬ್ಲ್ಯೂ ಎಸ್ 55i ಹೆಡ್ ಫೋನ್ ಸಿ ಕೆ 400i ಮತ್ತು ಸಿ ಕೆ 55iನ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿದ್ದು ವಿಮರ್ಶಕರಿಂದ ಫೈವ್ ಸ್ಟಾರ್ ಅವಾರ್ಡ್ ಸಿಕ್ಕಿದೆ.

ಇದರ ಬೇರೆ-ಬೇರೆ ಮಾಡಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆಯು ರು. 2000-8000ರ ನಡುವೆ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot