ಜೋಶ್ ಗಾಗಿ ಈ ಕೋರ್ಸಿಯರ್ ವೆಂಜಿಯನ್ಸ್ ಹೆಡ್ ಸೆಟ್

|
ಜೋಶ್ ಗಾಗಿ ಈ ಕೋರ್ಸಿಯರ್ ವೆಂಜಿಯನ್ಸ್ ಹೆಡ್ ಸೆಟ್

ಕೋರ್ಸಿಯರ್ ವೆಂಜಿಯನ್ಸ್ ತಯಾರಿಸಿರುವ ಹೆಡ್ ಫೋನ್ ಗಳಿಗೆ ಮಾರುಕಟ್ಟೆ ಉತ್ತಮ ಪ್ರತಿಕ್ರಿಯೆ ದೊರಕಿ

ಅದು ಯಶಸ್ವಿಯನ್ನು ಗಳಿಸತ್ತು. ಇದೀಗ ಆ ಯಶಸ್ವಿಗೆ ಮತ್ತೊಂದು ಸೇರ್ಪಡೆಯಾಗಲು ಕೋರ್ಸಿಯರ್ ವೆಂಜಿಯನ್ಸ್

1500 & 1300 ಹೆಡ್ ಸೆಟ್ ಗಳನ್ನು ಬಿಡುಗಡೆ ಮಾಡಿದೆ. ಸಂಗೀತ ಮತ್ತು ಸಿನಿಮಾವನ್ನು ನೋಡುವಾಗ ಉತ್ಕೃಷ್ಟ ಮಟ್ಟದ ಶಬ್ದದ ಅನುಭವವನ್ನು ಪಡೆಯಬೇಕೆಂದು ಬಯಸುವರು ಈ ಹೆಡ್ ಸೆಟ್ ಧಾರಾಳವಾಗಿ ಆಯ್ಕೆ

ಮಾಡಬಹುದು ಅಷ್ಟರಮಟ್ಟಿಗಿನ ಗುಣಮಟ್ಟವನ್ನು ಹೊಂದಿದೆ.

ಈ ಹೆಡ್ ಸೆಟ್ ಅನ್ನು ಆಕರ್ಷಕವಾಗಿ ತಯಾರಿಸಲಾಗಿದ್ದು ಯಾರಿಗೆ ಬೇಕಾದರು ಅವರ ತಲೆಗಾತ್ರಕ್ಕೆ ಹೊಂದುವಂತೆ ಜೋಡಿಸಹುದಾಗಿದೆ. ಈ ಹೆಡ್ ಸೆಟ್ ಹಗುರವಾಗಿದ್ದು ಇದರಲ್ಲಿ ವೆಂಟಿಲೇಷನ್ ಸೌಲಭ್ಯವಿರುವುದರಿಂದ ಇದನ್ನು ಎಷ್ಟು ಹೊತ್ತು ಬೇಕಾದರು ಬಳಸಬಹುದಾಗಿದೆ. ಇದನ್ನು ಬಳಸಿದರೆ ಯಾವುದೆ ಹೊರಗಿನ ಗದ್ದಲದ ಕಿರಿಕಿರಿ ಉಂಟಾಗುವುದಿಲ್ಲ.

ಇದು ದೊಡ್ಡದಾದ 50 mm ಡ್ರೈವರ್ ಹೊಂದಿದ್ದು ಇದರ ಕಂಪನಾಂಕವು 20Hz ಯಿಂದ 20 KHz ರಷ್ಟು ಹೊಂದಿದೆ. ಈ ಸಾಧನದಲ್ಲಿ USB ಸಂಪರ್ಕವಿದ್ದು ಇದು ಡೋಲಿ ಡಿಜಿಟಲ್ ಸರೌಂಡ್ಡ್ ಸೌಂಡ್ ಅನ್ನು ಸಪೋರ್ಟ್ ಮಾಡುತ್ತದೆ.

ಕೋರ್ಸಿಯರ್ ವೆಂಜಿಯನ್ಸ್ 1500 & 1300 ವಿನ್ಯಾಸದಲ್ಲಿ ಸರಿಸುಮಾರು ಒಂದೆ ರೀತಿ ಇದ್ದು ಒಂದು ಮುಖ್ಯವಾದ

ವ್ಯತ್ಯಾಸವೆಂದರೆ 1300ರಲ್ಲಿ 3.5 mm ಅನಾಲೋಗ್ ಸಂಪರ್ಕವಿದ್ದು USBಗೆ ಹೋಲಿಸಿದರೆ ಅಧಿಕ ವೆಚ್ಚದ್ದಾಗಿದೆ.

ಇದನ್ನು ಯಾವುದೆ ಮೊಬೈಲ್ ಸ್ಮಾರ್ಟ್ ಫೋನ್ ಟ್ಯಾಬ್ಲೆಟ್ ಗಳಿಗೆ ಜೋಡಿಸಿ ಮನರಂಜನೆಯನ್ನು ಪಡೆಯಬಹಯದಾಗಿದೆ.

ಕೋರ್ಸಿಯರ್ ವೆಂಜಿಯನ್ಸ್ 1500 ಮತ್ತು 1300 ಹೆಡ್ ಸೆಟ್ ಕ್ರಮವಾಗಿ ರು.5, 000 ಮತ್ತು ರು. 4,000ಕ್ಕೆ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X