Subscribe to Gizbot

ಇ ಎಮ್ ಪಿ ಟೆಕ್ ನೀಡಿದೆ 3 ಹೋಂ ಸ್ಪೀಕರ್

Posted By:
ಇ ಎಮ್ ಪಿ ಟೆಕ್ ನೀಡಿದೆ 3 ಹೋಂ ಸ್ಪೀಕರ್
ಮನೆಯಲ್ಲಿ ಬಳಸುವ ಸಂಗೀತ ಸಾಧನಗಳಿಗೆ ಯಾವಾಗಲು ಬೇಡಿಕೆ ಇದ್ದೆ ಇರುತ್ತದೆ. ಆದ್ದರಿಂದಲೆ EMP ಟೆಕ್ 3 ಹೊಸ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ES1010i ಶಕ್ತಿಯಿರುವ ಸಬ್ ವೂಫರ್ಸ್ , E56Ci ಸೆಂಟರ್ ಚಾನಲ್, E55Wi ವಾಲ್ ಸರೌಂಡ್ಡ್ ಸ್ಪೀಕರ್ ಆಗಿವೆ.

ಈ ಸಾಧನಗಳ ಬೆಲೆ ಅಷ್ಟೇನು ಹೆಚ್ಚು ಇಲ್ಲದ ಕಾರಣ, ಇದು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ಈ ಸ್ಪೀಕರ್ ಗಳ ಹೊರಮೈಯನ್ನು ಆಕರ್ಷಕ ವಿನ್ಯಾಸದಿಂದ ತಯಾರಿಸಲಾಗಿದೆ. ಇದರಲ್ಲಿ ಯಾವುದೆ ತೊಂದರೆ ಇಲ್ಲದೆ ಶಬ್ದದ ಕಂಪನಾಂಕವನ್ನು ಫ್ಯಾಬ್ರಿಕ್ ಡೋಮ್ 1-ಇಂಚು ಟ್ವೀಟರ್ ನೀಡಲಾಗುತ್ತದೆ, ಈ ಟ್ವೀಟರ್ ಅಧಿಕ ವಿದ್ಯುತ್ ಅನ್ನು ನಿಯಂತ್ರಿಸುವಷ್ಟು ಸಾಮರ್ಥ್ಯವನ್ನು ಇದರಲ್ಲಿರುವ ಮ್ಯಾಗ್ನಟೆಕ್ ಲಿಕ್ವಿಡ್ ಕೂಲಿಂಗ್ ನಿಂದಾಗಿ ಸಾಧ್ಯವಾಗಿದೆ.

ಈ ಇಂಪ್ರೆಷನ್ ಸಿರಿಸ್ E56Ci ಸೆಂಟರ್ ಚಾನಲ್ ಸ್ಪೀಕರ್ ಮಿಡ್ ರೇಂಜ್ 5.25 ಇಂಚಿನ ಡ್ರೈವರ್, 6.5 ಇಂಚಿನ ವೂಫರ್ಸ್ ಮತ್ತು ಕಂಪನಾಂಕದ ಸಾಮರ್ಥ್ಯ 40Hz ಯಿಂದ 20 kHz ಹೊಂದಿದೆ.ಮತ್ತೊಂದು E55Wi ವಾಲ್ ಸರೌಂಡ್ಡ್ ಸ್ಪೀಕರ್ ಅತ್ಯುತ್ತಮ ಗುಣಮಟ್ಟದ ಶಬ್ದವನ್ನು ನೀಡುವುದರ ಜೊತೆಗೆ ಬೈ ಪೋಲಾರ್ ತ್ರಾಪೆಜೊಯಿಡಲ್ ವಿನ್ಯಾಸದಿಂದಾಗಿ ಗದ್ದಲವನ್ನು ನಿಯಂತ್ರಿಸುವ ಲಕ್ಷಣವನ್ನು ಹೊಂದಿದೆ. ಈ ಸ್ಪೀಕರ್ ನಲ್ಲಿ ಶಬ್ದದ ಕಂಪನಾಂಕದ ಸಾಮರ್ಥ್ಯ 65Hz ಯಿಂದ 20 kHz ಆಗಿದೆ.

ಈ ಸ್ಪೀಕರ್ ಗಳನ್ನು ಮನೆಯಲ್ಲಿ ಬಳಸಿ ಅಧಿಕ ಮನರಂಜನೆಯನ್ನು ಪಡೆಯಬಹುದಾಗಿದ್ದು ಇವುಗಳ ಬೆಲೆಯು ಮಾರುಕಟ್ಟೆಯಲ್ಲಿ ES1010i ಪವರ್ ಸಬ್ ವೂಫರ್ಸ್ ರು.22,560 , E56Ci ಸೆಂಟರ್ ಚಾನಲ್ ರು.25,000 ಮತ್ತು E55Wi ವಾಲ್ ಸರೌಂಡ್ಡ್ ಸ್ಪೀಕರ್ ರು.30, 000 ಲಭ್ಯವಿದ್ದು, ಭಾತರತಕ್ಕೆ ತರುವ ಹಡಗಿನ ವೆಚ್ಚ ಸೇರಿಸಿದಾಗ ಸ್ವಲ್ಪ ಹೆಚ್ಚಾಗುವುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot