Subscribe to Gizbot

ಈ ಜಾಬ್ರ ಹೆಡ್ ಸೆಟ್ ಗೆ ಸ್ವಾಗತ ಕೋರಲು ನೀವು ರೆಡಿನಾ?

Posted By:
ಈ ಜಾಬ್ರ ಹೆಡ್ ಸೆಟ್ ಗೆ ಸ್ವಾಗತ ಕೋರಲು ನೀವು ರೆಡಿನಾ?

ಜಾಬ್ರ ಕಂಪನಿಯ ವಸ್ತುಗಳಾದ ಬ್ಲೂಟೂಥ್ ಹೆಡ್ ಸೆಟ್ ಮಾತ್ರವಲ್ಲ, ಆಡಿಯೊ ಸಾಧನಗಳು ಕೂಡ ಜನಪ್ರಿಯತೆಯನ್ನು ಗಳಿಸಸಿದೆ. ಈಗ ಈ ಕಂಪನಿಯು ಜಾಬ್ರ HALO2 ಎಂಬ ಹೆಡ್ ಸೆಟ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಿದೆ. ಬರಲಿರುವ ಈ ಹೆಡ್ ಸೆಟ್ ಗುಣಮಟ್ಟದಲ್ಲಿ ತನ್ನದೆ ಆದ ಲಕ್ಷಣವನ್ನು ಹೊಂದಿದ್ದು ಇದರಲ್ಲಿ AM3D ವರ್ಚ್ಯುಯಲ್ ಸರೌಂಡ್ಡ್ ಸೌಂಡ್ 2.0ಮತ್ತು ಪವರ್ ಬೇಸ್ ಲಕ್ಷಣವನ್ನು ಹೊಂದಿರುತ್ತದೆ.

ಇದರಲ್ಲಿ ಬ್ಲಟೂಥ್ ಸೌಲಭ್ಯವಿದ್ದು ಇದನ್ನು ಬಳಸಿ ಒಂದೆ ಸಮಯದಲ್ಲಿ 2 ಬ್ಲೂಟೂಥ್ ಹೊಂದಿರುವ ಸಾಧನಗಳಲ್ಲಿ ಬಳಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ರಿಮೋಟ್ ಮ್ಯೂಸಿಕ್ ಕಂಟ್ರೋಲ್ ಇದ್ದು, ಇದನ್ನು ಹೆಡ್ ಸೆಟ್ ಸೆನ್ಸಾರ್ ನಲ್ಲಿ ಸಹ ಬಳಸಬಹುದಾಗಿದೆ.ಈ ಹೆಡ್ ಸೆಟ್ 13 ದಿನಗಳ ಸ್ಟ್ಯಾಂಡ್ ಬೈ ಟೈಮ್ ಹೊಂದಿದ್ದು, ಇದನ್ನು ಬಳಸಿ ನಿರಂತರವಾಗಿ 8 ಗಂಟೆಗಳ ಕಾಲ ಸಂಗೀತವನ್ನು ಕೇಳಬಹುದಾಗಿದೆ.

ಇದರ ಆಪರೇಟಿಂಗ್ ರೇಂಜ್ 10 ಮೀಟರ್ ಆಗಿದ್ದು, ಚಾರ್ಜ್ ಗೆ ತೆಗೆದುಕೊಳ್ಳುವ ಸಮಯ 2 ಗಂಟೆ ಆಗಿದೆ. ಈ ಹೆಡ್ ಸೆಟ್ 80 ಗ್ರಾಂ ತೂಕವನ್ನು ಹೊಂದಿದ್ದು , 32mm ಡೈನಾಮಿಕ್ ಸ್ಪೀಕರ್ ಹೊಂದಿರುವ ಿದು ಉತ್ತಮ ಗುಣ ಮಟ್ಟದ ಶಬ್ದವನ್ನು ನೀಡುತ್ತದೆ.ಇದು ಬ್ಲೂಟೂಥ್ 3.0 EDR ಮತ್ತು eSCO ತಂತ್ರಜ್ಞಾನವನ್ನು ಬಳಸಿಕೊಂಡು ಸಂಭಾಷಣೆಯಲ್ಲಿ ಉತ್ತಮ ಗುಣಮಟ್ಟದ ಶಬ್ದವನ್ನು ನೀಡುವುದು.

ಬರಲಿರುವ ಈ ಜಾಬ್ರ ಹೆಡ್ ಸೆಟ್ ಬೆಲೆಯ ಬಗ್ಗೆ ಇನ್ನೂ ತಿಳಿದುಬಂದಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot