ಹೈಫೈಮ್ಯಾನ್ ನಿಂದ ಫುಲ್ ಸೈಜ್ ಇಯರ್ ಹೆಡ್ ಫೋನ್

Posted By:
ಹೈಫೈಮ್ಯಾನ್ ನಿಂದ ಫುಲ್ ಸೈಜ್ ಇಯರ್ ಹೆಡ್ ಫೋನ್

ಹೆಡ್ ಫೋನ್ ಮಾರುಕಟ್ಟೆಬೆಳೆಯುತ್ತಿದ್ದ ಹಾಗೆ ಗ್ರಾಹಕರ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಸ್ಪೋರ್ಟ್ಸ್ ನವರಿಗೆ ವಾಟರ್ ಫ್ರೂಫ್ ಆದರೆ, ಇನ್ನು ಕೆವರಿಗೆ ಗೇಮರ್, ಡಿಜೆ ಹೆಡ್ ಫೋನ್ ಹೀಗೆ ಅನೇಕ ಬೇಡಿಕೆಗಳಿಗೆ ಅನುಗುಣವಾಗಿ ಹಲವಾರು ಹೆಡ್ ಸೆಟ್ ಮಾರುಕಟ್ಟೆಗೆ ಬಂದಿದೆ.

ಹೀಗೆ ಹೆಚ್ಚು ಸಮಯ ಕಾಲ ಸಂಗೀತ ಕೇಳ ಬಯಸುವರು ಅಧಿಕ ಸಮಯ ಬ್ಯಾಟರಿಯನ್ನು ಹೊಂದಿರುವ ಹೆಡ್ ಫೋನ್ ಬಯಸುವವರಿಗಾಗಿ ಬಂದಿದೆ ಈ ಹೈಫೈಮ್ಯಾನ್ HE-300.ಇದು ಕಿವಿಯಷ್ಟು ದೊಡ್ಡದಾಗಿರುವ ಈ ಹೆಡ್ ಫೋನ್ ವ ಸೆನ್ಸಿಟಿವಿಟಿ 93 dB ಆಗಿದ್ದು ಇದನ್ನು ಜೊತೆಗೆ ಕೊಂಡೊಯ್ಯಬಹುದಾದ ಆಡಿಯೊ ಸಾಧನಗಳಲ್ಲಿ ಬಳಸಬಹುದಾಗಿದೆ.

ಬಳಕೆದಾರರಿಗೆ ತೃಪ್ತಿಯನ್ನು ಕೊಡುವ ಎಲ್ಲಾ ಗುಣವನ್ನು ಹೊಂದಿರುವ ಈ ಹೆಡ್ ಫೋನ್ 270 ಗ್ರಾಂ ತೂಕವನ್ನು ಹೊಂದಿದ್ದು ತುಂಬಾ ಹಗುರವಾಗಿದೆ.ಈ ಹೆಡ್ ಫೋನ್ 15-22000Hz ನಡುವಿನ ಶಬ್ದದ ಕಂಪನಾಂಕದಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಇದರಲ್ಲಿ ಇಂಪೆಡೆಯೆನ್ಸ್ 50 Ohms ಮತ್ತು ಡ್ರೈವರ್ ಡೈನಾಮಿಕ್ ಆಗಿದ್ದು ಅದರ ವ್ಯಾಸ 50mm ಆಗಿದೆ.

ಹೈಫೈಮ್ಯಾನ್ HE-300 ಯನ್ನು ಹೈಫೈಮ್ಯಾನ್ HE-500 ಗೆ ಹೋಲಿಸಿದರೆ ಸರಿಸುಮಾರು ಸಮವಾಗಿದ್ದು, ಒಳಗಿನ ಡ್ರೈಬರ್ ಅಸ್ಸೆಂಬ್ಲಿ ಹೈಫೈಮ್ಯಾನ್ 500ನಲ್ಲಿ ಸ್ವಲ್ಪ ಅಧಿಕವಾಗಿದೆ.

ಹೈಫೈಮ್ಯಾನ್ HE-300 ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದು ಸುಮಾರು ರು.15,000ಕ್ಕೆ ಲಭ್ಯವಿದೆ. ಇದರ ಬೆಲೆಯಲ್ಲಿ ಹೆಚ್ಚು ಕಡಿಮೆ ಆನ್ ರಿಟೈಲರ್ ಮೇಲೆ ಅವಲಂಭಿತವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot