Subscribe to Gizbot

ಐಫ್ರೋಜ್ ನ CS40s ಹೆಡ್ ಫೋನ್

Posted By:
ಐಫ್ರೋಜ್ ನ CS40s ಹೆಡ್ ಫೋನ್

ಐಫ್ರೋಜ್ ನ CS40s ಹೆಡ್ ಫೋನ್ ನೋಡಲು ಹಳೆಯ ಮಾದರಿಯ ಹೆಡ್ ಫೋನ್ ನಂತೆ ಕಂಡರೂ ಇದರಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿದ್ದು, ಜೊತೆಗೆ ಕೊಂಡೊಯ್ಯಲು ಅನುಕೂಲಕರವಾಗಿರುವಂತೆ ಇದೆ.ಇದನ್ನು ಬಳಸಿ ಗಂಟೆ ಗಟ್ಟಲೆ ಸಂಗೀತವನ್ನು ಕೇಳಿದರೂ ಬಳಕೆದಾರರಿಗೆ ಯಾವುದೆ ಕಿವಿನೋವು, ತೊಂದರೆ ಉಂಟಾಗಬಾರದು ಎಂದು ಬಹಳ ಮುತುವರ್ಜಿ ವಹಿಸಿ ಇದನ್ನು ತಯಾರಿಸಲಾಗಿದೆ.

ಈ ಹೆಡ್ ಫೋನ್ ಅನ್ನು ಕೊಂಡೊಯ್ಯಬಹುದಾದ ಮ್ಯೂಸಿಕ್ ಪ್ಲೇಯರ್, ಐಪೋಡ್ ಅಲ್ಲದೆ ಲ್ಯಾಪ್ ಟಾಪ್ ನಲ್ಲಿ ವೀಡಿಯೊ ನೋಡುವಾಗ ಬಳಸಿದರೆ ಶಬ್ದವು ಉತ್ತಮ ಗುಣಮಟ್ಟದಲ್ಲಿ ಕೇಳಿಸುತ್ತದೆ. ಈ ಹೆಡ್ ಪೋನ್ ನ ಇಯರ್ ಬಡ್ಸ್ ಸೂಪರ್ ಅನ್ನಬಹುದಾದಷ್ಟು ರೇಂಜ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಬೇರೆ - ಬೇರೆ ಗಾತ್ರದ ಬಡ್ಸ್ ಬರುತ್ತಿದ್ದು ನಿಮ್ಮ ಕಿವಿಗೆ ಯಾವುದು ಹೊಂದಿಕೆಯಾಗುತ್ತದೆಯೊ ಅದನ್ನು ಬಳಸಬಹುದಾಗಿದೆ.

ಬೆಲೆಯ ವಿಷಯಕ್ಕೆ ಬಂದಾಗ ಕೈಗೆಟುಕುವ ದರದಲ್ಲಿ ಅಂದರೆ ರು. 2,056 ಕ್ಕೆ ಲಭ್ಯವಾಗುವುದು, ಆದರೆ ಮೈಕ್ರೊ ಫೋನ್ ಇರುವುದಿಲ್ಲ, ಮೈಕ್ರೊಫೋನ್ ಬೇಕಾದರೆ ಬೆಲೆ ರು. 2,570 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot