ಅಥ್ಲೆಟ್ಸ್ ಗೆ ಬೆಸ್ಟ್ ಈ ಸ್ವೆಟ್ ಫ್ರೂಫ್ ಹೆಡ್ ಸೆಟ್

Posted By:
ಅಥ್ಲೆಟ್ಸ್ ಗೆ ಬೆಸ್ಟ್ ಈ ಸ್ವೆಟ್ ಫ್ರೂಫ್ ಹೆಡ್ ಸೆಟ್

ಹೆಡ್ ಸೆಟ್ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಹೊಸ ಹೆಡ್ ಸೆಟ್ ಗಳು ಮಾರುಕಟ್ಟೆಗೆ ಬರುತ್ತಿರುತ್ತವೆ.

ಆದ್ದರಿಂದ ಬರುವ ಹೊಸ ಹೆಡ್ ಸಟ್ ಗಳು ಗ್ರಾಹಕರನ್ನು ತನ್ನತ್ತ ಸೆಳೆಯಲು ಮತ್ತಷ್ಟು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಧಿಕ ಸಾಮಾರ್ಥ್ಯದಿಂದ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.

ಜನರಿಗೆ ಕೆಲಸಮಾಡುವಾಗ, ವ್ಯಾಯಾಮ ಮಾಡುವಾಗ ಈ ರೀತಿಯ ಬ್ಲೂಟೂಥ್ ಹೆಡ್ ಸೆಟ್ ಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಾರೆ.

ಆದರೆ ಇಯರ್ ಬಡ್ಸ್ ಹೆಡ್ ಫೋನ್ ಗಳನ್ನು ಬಳಸುವುದು ಕೂಡ ಭಾರ ಅನಿಸಿ ಬಿಟ್ಟಿದೆ. ಅದಕ್ಕಾಗಿ ಈಗ ಹೊಸದಾದ ಜಾಯ್ ಬರ್ಡ್ JF3 ವೈರ್ ಲೆಸ್ ಬ್ಲೂಟೂಥ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಇದು ಅಥ್ಲೆಟ್ಸ್ ಗಳಿಗೆ ಹೆಚ್ಚಿನ ಸಹಕಾರಿಯಾಗಿದೆ. ಏಕೆಂದರೆ ಇದು ಹಗುರವಾಗಿದ್ದು ಸ್ವೆಟ್ ಫ್ರೂಫ್( ಬೆವರಿನಿಂದ ಯಾವುದೆ ತೊಂದರೆ ಉಂಟಾಗುವುದಿಲ್ಲ) ಆಗಿದೆ. ಇದಕ್ಕಾಗಿ ಲೈಫ್ ಟೈಮ್ ವಾರಂಟಿಯನ್ನು ಸಹ ನೀಡಲಾಗಿದೆ.

ಇದನ್ನು ಬಳಸಿದರೆ ಉತ್ತಮ ಗುಣಮಟ್ಟದ ಸಂಗೀತವನ್ನು ಕೇಳಬಹುದಾಗಿದೆ. ಆದರೆ ಸಂವಹನದಲ್ಲಿ ಇದರ ಶಬ್ದದ ಗುಣ ಮಟ್ಟ ಬಳಕೆದಾರರಿಗೆ ಅಷ್ಟೇನು ತೃಪ್ತಿ ಕೊಡುವುದಿಲ್ಲ.

ಈ ಜಾಯ್ ಬರ್ಡ್ ಹೆಡ್ ಸೆಟ್ ಅನ್ನು ಐಪೋನ್, ಆಪರೇಟಿಂಗ್ ಸಿಸ್ಟಮ್ ಇರುವ ಸ್ಟರಿಯೊಗಳಲ್ಲಿ ಬಳಸಿ ವರ್ ಲೆಸ್ ಸಂಗೀತದ ಸವಿಯನ್ನು ಸವಿಯಬಹುದಾಗಿದೆ.

ಈ ಹೆಡ್ ಸೆಟ್ ಮಾರುಕಟ್ಟೆಯಲ್ಲಿ ರು. 5,000 ಕ್ಕೆ ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot