ಸೂಪರ್ ಪವರ್ ಮಿನಿ ಮೋಟರ್ ಸ್ಪೀಕರ್

Posted By:
ಸೂಪರ್ ಪವರ್ ಮಿನಿ ಮೋಟರ್ ಸ್ಪೀಕರ್

ಎನ್ ಎಚ್ ಟಿ ಕಂಪನಿಯು 1986ರಿಂದ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಕೊಡುವುದರರಿಂದ ಅತಿ ಶೀಘ್ರನೆ ಜನಪ್ರಿಯತೆಯನ್ನು ಗಳಿಸಿತು. ಈ ಕಂಪನಿಯು ಆಡಿಯೊ ವಸ್ತುಗಳನ್ನು ಉತ್ಪಾದಿಸಿ ಯಾವುದೆ ಮಧ್ಯವರ್ತಿಯ ಸಹಾಯವಿಲ್ಲದೆಯೆ ತನ್ನ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವುದರಿಂದ ಗ್ರಾಹಕರ ವಿಶ್ವಾಸವನ್ನು ಸುಲಭವಾಗಿ ಗಳಿಸಲು ಸಾಧ್ಯವಾಯಿತು.

ಈಗ ಈ ಕಂಪನಿ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಕಂಪ್ಯೂಟರ್ ನಲ್ಲಿ ಬಳಸಲು ಉತ್ತಮ ಗುಣಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತಹ ಸ್ಪೀಕರ್ ತಯಾರಿಸಿದೆ. ಈ ಸ್ಪೀಕರ್ ಪವರ್ ಸ್ಪೀಕರ್ ನೋಡಲು ಸ್ವಲ್ಪ ಮಟ್ಟಿಗೆ ಸೂಪರ್ ಜೀರೊ 2.0 ರೀತಿಯಲ್ಲಿ ಕಾಣುತ್ತದೆ. ಈ ಸ್ಪೀಕರ್ ಡೈಮೆಂಶನ್ 9 ಇಂಚು x 5.5 ಇಂಚುx 6.75 ಇಂಚು (H x W x D) ಹೊಂದಿದೆ. ಈ ಸ್ಪೀಕರ್ 3.3 ಕಿ. ಗ್ರಾಂ ತೂಕವನ್ನು ಹೊಂದಿದೆ.

ಈ ಸ್ಪೀಕರ್ ನಲ್ಲಿರುವ ನತ್ತೊಂದು ಆಸಕ್ತಿಯ ವಿಷಯವೆಂದರೆ ಇದರ ಕ್ಯಾಬಿನೆಟ್ ಒಳಗೆ 90 ವ್ಯಾಟ್ ಪವರ್ ಅನ್ನು ಪ್ಯಾಕ್ ನಲ್ಲಿ ಆಂಪ್ಲಿಫೈಯರ್ ಮಾಡಲಾಗಿದೆ. ಈ ಸೋಪರ್ ಪವರ್ 4.5 ಇಂಚಿನ ಪೇಪರ್ ಕೋನ್ ವೂಫರ್ ಮತ್ತು 1 ಇಂಚಿನ ಸಿಲ್ಕ್ ಡೋಮ್ ಟ್ವೀಟರ್ ಹೊಂದಿದೆ. ಈ ಸ್ಪೀಕರ್ ನಲ್ಲಿ 2 ರೀತಿಯ ಲೌಡ್ ಸ್ಪೀಕರ್ ಇದ್ದು ಅದರ ಕಂಪನಾಂಕ 72 Hz ಯಿಂದ 20 KHz ಹೊಂದಿದ್ದು ಈ ಸಾಧನದ ಸೆನ್ಸಿಟಿವ್ 85dB ಆಗಿದೆ.

ಇದರಲ್ಲಿ ಆಂಪ್ಲಿಫೈಯರ್ ಕಸ್ಟಮ್ ಡಿಸೈನ್ ಫ್ರೀ ಆಂಪ್ಲಿಫೈಯರ್ ಜೊತೆಗೆ ಸರ್ಕ್ಯುಟ್ ಆಗಿದೆ. ಇದರಿಂದಾಗಿ SPL ನ 111dB ನೀಡಲು ಸಾಧ್ಯವಾಗಿದೆ. SPL ಅಂದರೆ ಸ್ಪೀಕರ್ ಹೊರಹಾಕುವ ಅತ್ಯಧಿಕ ಶಬ್ದವಾಗಿದ್ದು ಯಾವುದೆ ಕಿರಿ ಶಬ್ದವಿಲ್ಲದೆ ಇದು ಗುಣಮಟ್ಟದ ಶಬ್ದವನ್ನು ಹೊರಹಾಕುತ್ತದೆ. ಆದ್ದರಿಂದಾಗಿ ಇಂದು SPL ಮೌಲ್ಯ 111dBನಷ್ಟು ಈ ಮೊಬೈಲ್ ನಲ್ಲಿರುವುದು ತುಂಬಾ ಗುಣ ಮಟ್ಟದ ಶಬ್ದ ವನ್ನು ನೀಡಲು ಸಹಾಯಕವಾಗಿದೆ.

ನಂಬಿಕೆಗೆ ಅರ್ಹವಾದ ಕಂಪನಿ ಮತ್ತು ತುಂಬಾ ಉತ್ತಮ ಗುಣಮಟ್ಟವನ್ನು ಹೊಂದಿರು ಸ್ಪೀಕರ್ ಕೊಳ್ಳಬಯಸುವರು ಸೂಪರ್ 8 ಪವರ್ ಸಬ್ ವೂಫರ್ ಹೊಂದಿರುವ NHTಯ ಸೂಪರ್ ಮಿನಿ ಪೋರ್ಟ್ಬಲ್ ಸ್ಪೀಕರ್ ಕೊಳ್ಳಬಹುದಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರು. 10, 000.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot