ಸೂಪರ್ ಯೋಜನೆಯೊಂದಿಗೆ ಬ್ಲ್ಯಾಕ್ ಬೆರಿ ಕರ್ವ್ 9350

|
ಸೂಪರ್ ಯೋಜನೆಯೊಂದಿಗೆ ಬ್ಲ್ಯಾಕ್ ಬೆರಿ ಕರ್ವ್ 9350

ರಿಸರ್ಚ್ ಇನ್ ಮೋಷನ್ (RIM) ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್ ಗಳಲ್ಲಿ ಮುಂಚೂಣಿಯಲ್ಲಿರುವ ಬ್ರಾಂಡ್ ಆಗಿ ಪರಿಗಣಿಸಲಾಗಿದೆ. ಈಗ ಬ್ಲ್ಯಾಕ್ ಬೆರಿ ಕರ್ವ್ 9350 ಡಿಸೆಂಬರ್ 1 ರಂದು ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿದೆ. ಇದು ಬಂದರೆ ಮೊದಲ CDMA ಆಧಾರಿತ ಬ್ಲ್ಯಾಕ್ ಬೆರಿ 7 ಆಪರೇಟಿಂಗ್ ಸಿಸ್ಟಮ್ ಭಾರತಕ್ಕೆ ಬರಲಿದೆ. ಈ ಅಭಿವೃದ್ಧಿಯು CDMA ನೊಂದಿಗೆ RIM ಸಹಯೋಗದಿಂದಾಗಿ ಇದು ಸಾಧ್ಯವಾಗಿದೆ.

ಬ್ಲ್ಯಾಕ್ ಬೆರಿ ಕರ್ವ್ 9350 ತನ್ನದೆ ಆದ ವಿಶಿಷ್ಟ ಚಂದಾ ಯೋಜನೆ (ಡಾಟ ಸಬ್ ಸ್ಕ್ರಿಪ್ಸ್ ನ್) ಅಂದರೆ ಮೊಬೈಲ್ ಕೊಂಡು ತಿಂಗಳಿನಲ್ಲಿ ಇಂತಿಷ್ಟು ಹಣ ಪಾವತಿಸುವಂತಹ ಯೋಜನೆ. ಇದರ ಸಲುವಾಗಿ 3 ಮೊಬೈಲ್ ಆಪರೇಟರ್ ಗಳನ್ನು ಪರಿಚಯಿಸಲಿದೆ. ಇದರಿಂದಾಗಿ ಈ ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ಹೊರೆ ಬೀಳುವುದಿಲ್ಲ, ಅವರು ನೀಡಿದ ನಿಗದಿತ ಸಮಯದಲ್ಲಿ ಕಟ್ಟಿ ಮುಗಿಸಿದರೆ ಸಾಕು. Rcom ಪಾಕೆಟ್ ಫ್ರೆಂಡ್ಲಿ ಡಾಟ ಸಬ್ ಸ್ಕ್ರಿಪ್ಸ್ ನ್ ಅನ್ನು ಬ್ಲ್ಯಾಕ್ ಬೆರಿ ಕರ್ವ್ 9350ರಲ್ಲಿ ತರಲಿದೆ ಎಂದು ಫೋಷಿಸಿದೆ. .

ಆದರೆ ಈ ಯೋಜನೆಗೆ ಬೆಂಬಲದ ಬಗ್ಗೆ MTS ನಿಂದ ಯಾವುದೆ ಅಧಿಕೃತ ಘೋಷಣೆ ಪ್ರಕಟವಾಗಿಲ್ಲ. ಆದರೆ ಸುದ್ಧಿ ಮೂಲದ ಪ್ರಕಾರ HTC ಪ್ಲಸ್ ಗೆ ಇದೆ ಮಾದರಿಯನ್ನು ಅನುಸರಿಸಲಿದೆ ಎಂದು ಕೇಳಿ ಬರುತ್ತಿದೆ. ಇದರಲ್ಲಿ ಬಳಕೆದಾರರು ಆಂಡ್ರಾಯ್ಡ್ ಆಪರೇಟಿಂಗ್ ಮೊಬೈಲ್ ಬಳಸಿದರೆ ಯಾವುದೆ ಡೌನ್ ಪೇಮಂಟ್ ಮಾಡುವ ಅಗತ್ಯವಿಲ್ಲ. ಅದಕ್ಕೆ ಬದಲಾಗಿ ಬಳಕೆದಾರರು ತಿಂಗಳಿಗೆ 1,500 ಆಗಿ 12 ತಿಂಗಳು ಕಟ್ಟಿದರೆ ಸಾಧನವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

HTC ಪ್ಲಸ್ ಸ್ಮಾರ್ಟ್ ಫೋನ್ ಗೆ MTS ಸಬ್ ಸ್ಕ್ರಿಪ್ಸ್ ನ್ ನಲ್ಲಿ 1,500 ನಿಮಿಷ ಟಾಕ್ ಟೈಮ್ ಮತ್ತು 1, 500 ಉಚಿತ ಎಸ್ಸೆಮ್ಮಸ್ ಮತ್ತು 1, 500 MB ಪ್ರತಿ ತಿಂಗಳಿನಲ್ಲೂ ದೊರೆಯುವ ಸೌಲಭ್ಯ ಈ ಯೋಜನೆಯಲ್ಲಿದೆ. ಬ್ಲ್ಯಾಕ್ ಬೆರಿ ಕರ್ವ್ 9350 ಉತ್ತಮ ವಿನ್ಯಾಸ, ಫ್ರೆಂಡ್ಲಿ ಕೀ ಬೋರ್ಡ್, ಜಿ ಪಿ ಎಸ್, ವೈಫೈ ಸೌಲಭ್ಯವನ್ನು ಹೊಂದಿದೆ. ಈ ಮೊಬೈಲ್ 5 ಮೆಗಾ ಪಿಕ್ಸಲ್ ಕ್ಯಾಮೆರಾ ಅತ್ಯುತ್ತಮವಾಗಿದೆ. ಈ ಸ್ಮಾರ್ಟ್ ಫೋನ್ 512 MB RAM ಸಾಮರ್ಥ್ಯ ಹೊಂದಿದೆ. ಇದನ್ನು 32GB ವರೆಗೆ ವಿಸ್ತರಿಸಬಹುದಾಗಿದೆ. ಈ ಮೊಬೈಲ್ ನಲ್ಲಿ NFC ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X