ಐ ಟೆಕ್ ಮೈ ವಾಯ್ಸ್ 615 ಕೇಳಿ ಆನಂದಿಸಿ

Posted By:
ಐ ಟೆಕ್ ಮೈ ವಾಯ್ಸ್ 615 ಕೇಳಿ ಆನಂದಿಸಿ

ಐ ಟೆಕ್ ಡೈನಾಮಿಕ್ ಕಂಪನಿಯು ಐ-ಟೆಕ್ ಮೈ ವಾಯ್ಸ್ 615 ಎಂಬ ಟ್ರೆಂಡಿ ಹೆಡ್ ಸೆಟ್ ತಯಾರಿಸಲಿದೆ. ಇದರಲ್ಲಿ ಅನೇಕ ಅತ್ಯಾಧುನಿಕ ತಂತ್ರಜ್ಞಾನದಿಂದ ಹೊಸ ಲಕ್ಷಣಗಳೊಂದಿಗೆ ಬರಲಿದೆ ಎಂಬ ಭರವಸೆಯನ್ನು ನೀಡಿದೆ. ಇದು ಬಳಕೆದಾರರಿಗೆ ಸುಲಭವಾಗುವಂತಹ ವಾಯ್ಸ್ ಮೆಸೇಜ್ ಸೌಲಭ್ಯ , ಹೊರಗಿನ ಗದ್ದಲವನ್ನು ತಡೆಯುವಂತಹ ತಂತ್ರಜ್ಞಾನವನ್ನು ಹೊಂದಿದೆ.

ಇದರಲ್ಲಿರುವ ಮತ್ತೊಂದು ಆಸಕ್ತಿಯ ವಿಷಯವೆಂದರೆ ಕೀ ಲಾಕ್ ಬಟನ್ ಇದ್ದು ಇದು ಬೇಡದ ಕರೆಯನ್ನು ತಿರಸ್ಕೃತಗೊಳಿಸಲು ಸಹಾಯ ಮಾಡುತ್ತದೆ. ಬಳಕೆದಾರರು ಇದನ್ನು ಕೇವಲ 15 ನಿಮಿಷ ಚಾರ್ಜ್ ಮಾಡಿದರೂ ಸಹ 1.5ಗಂಟೆಯಷ್ಟು ಟಾಕ್ ಟೈಮ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಸಾಧನವು A2DPಯನ್ನು ಹೊಂದಿದ್ದು ಇದು ಸ್ಟ್ರೀಮಿಂಗ್ ಮತ್ತು ಸಿನಿಮಾ, ಹಾಡು ಮತ್ತು ಯು ಟ್ಯೂಬ್ ನಲ್ಲಿ ವೀಡಿಯೊ ನೋಡಲು ಬಳಸಬಹುದಾಗಿದೆ.ಇದು ಇಯರ್ ಬಡ್ಸ್ x 3 ಹಾಗೂ ಇಯರ್ ಕ್ಯುಶನ್ x 1 ಹೊಂದಿದೆ. ಈ ಹೆಡ್ ಸೆಟ್ ಜೊತೆ USB ಚಾರ್ಜ್ ಕೇಬಲ್ ಮತ್ತು ಇದರ ಬಳಕೆಯನ್ನು ಹೇಗೆ ಮಾಡಬೇಕೆಂದು ಸೂಚಿಸುವ ಮ್ಯಾನ್ಯುಯಲ್ ಸಹ ನೀಡಲಾಗುವುದು.

ಮೃದುವಾದ ಶಬ್ದದಲ್ಲಿ ಸಂಗೀತವನ್ನು ಕೇಳ ಬಯಸುವರು ಈ ಹೆಡ್ ಸೆಟ್ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು ಇನ್ನಷ್ಟೆ ಮಾರುಕಟ್ಟೆಗೆ ಬರಲಿರುವ ಇದರ ಬೆಲೆಯ ಬಗ್ಗೆ ಯಾವುದೆ ಮಾಹಿತಿ ತಿಳಿದು ಬಂದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot