ಗದ್ದಲಕ್ಕೆ ಶ್... ಎನ್ನುವ ನಾಯ್ಸ್ ಹುಶ್ ಹೆಡ್ ಸೆಟ್

|
ಗದ್ದಲಕ್ಕೆ ಶ್... ಎನ್ನುವ ನಾಯ್ಸ್ ಹುಶ್ ಹೆಡ್ ಸೆಟ್

ನಾಯ್ಸ್ ಹುಶ್ ಕಂಪನಿಯು ಅನೇಕ ವೈರ್ ಹೆಡ್ ಸೆಟ್ ಗಳನ್ನು ಮಾರುಕಟ್ಟೆಗೆ ಇತ್ತೀಚಿಗೆ ಬಿಡುಗಡೆ ಮಾಡಿದೆ, ಅದಲ್ಲದೆ ಬ್ಲೂಟೂಥ್ ಹೆಡ್ ಫೋನ್ ನಲ್ಲಿ ಸಹ ತನ್ನದೆಯಾದ ಛಾಪನ್ನು ಉಂಟುಮಾಡಿದೆ. ಈಗ ಈ ಕಂಪನಿ ನಾಯ್ಸ್ ಹುಶ್ NX26 ಎಂಬ ಹೆಡ್ ಸೆಟ್ ಅನ್ನು ಬಿಡುಗಡೆ ಮಾಡಿದೆ. ಈ ಹೆಡ್ ಸೆಟ್ ಸಿಂಪಲ್ ಆಗಿದ್ದರೂ ಇದರ ಸಂಗೀತ ಗುಣಮಟ್ಟ ಮಾತ್ರ ಉತ್ತಮವಾಗಿದೆ.

ಈ ಹೆಡ್ ಸೆಟ್ ಗಳು ಕಪ್ಪು ಮತ್ತು ಸಿಲ್ವರ್ ಬಣ್ಣದ ಹೊಂದಿಕೆಯೊಂದಿಗೆ ಬರುತ್ತದೆ. ಈ ಇಯರ್ ಫೋನ್ ಪ್ಯಾಡಡ್ ಆಗಿದ್ದು ಇದು ಹೆಡ್ ಬ್ಯಾಂಡ್ ಆಗಿದೆ. ಈ ಹೆಡ್ ಫೋನ್ ನಲ್ಲಿ ಇಷ್ಟವಾಗದ ಅಂಶವೆಂದರೆ ಇದರ ವೈರ್ ಸುಲಭವಾಗಿ ಬೇರೆ ವಸ್ತುಗಳಿಗೆ ಸಿಕ್ಕಿ ಹಾಕಿ ಕೊಳ್ಳುತ್ತದೆ.240 ಗ್ರಾಂ ತೂಕದ ಈ ಹೆಡ್ ಸೆಟ್ ಬಾಕ್ಸ್ ನಲ್ಲಿ ಸುಂದರವಾಗಿ ಪ್ಯಾಕ್ ಮಾಡಲಾಗಿದೆ.

ಈ ಸ್ಟೈಲಿಷ್ ಹೆಡ್ ಸೆಟ್ ಧರಿಸಿದರೆ ಸ್ಟೈಲಿಷ್ ಆಗಿ ಕಾಣುವುದು ಆದರೂ ಇದರ ವಿನ್ಯಾಸವು ಕೆಲವರಿಗೆ ಧರಿಸಲು ಮುಜಗರವನ್ನು ಉಂಟು ಮಾಡಬಹುದು. ಇದನ್ನು ಮನೆಯಲ್ಲಿ , ಅಥವಾ ಪ್ರಯಾಣ ಮಾಡುವಾಗ ಬಳಸಬಹುದಾಗಿದ್ದು ಇದನ್ನು ಧರಿಸಿದರೆ ಯಾವುದೆ ಕಿರಿಕಿರಿ ಬಳಕೆದಾರನಿಗೆ ಆಗುವುದಿಲ್ಲ.

ಇದರಲ್ಲಿ ಇನ್ ಬಿಲ್ಟ್ ಮೈಕ್ರೋಫೋನ್ ಕೂಡ ಇದ್ದು ಇದನ್ನು ಬಳಸಿ ಮಾತನಾಡಿದರೆ ಶಬ್ದವು ಉತ್ತಮ ಗುಣ ಮಟ್ಟದಲ್ಲಿ ಕೇಳಿಸುತ್ತದೆ. ಈ ಹೆಡ್ ಫೋನ್ ಅನ್ನು ಧರಿಸಿ ಗದ್ದಲ ಇರುವ ಸ್ಥಳದಲ್ಲಿ ನಿಂತಿದ್ದರು ಕೂಡ ಸಂವಹನಕ್ಕೆ ಯಾವುದೆ ತೊಂದರೆ ಉಂಟಾಗುವುದಿಲ್ಲ.ಇದರ ಡ್ರೈವರ್ ಯೂನಿಟ್ 40 mm ಗಾತ್ರ ಹೊಂದಿದೆ. ಇದರ ಡ್ರೈವರ್ ನಲ್ಲಿ ಸಿಗುವ ಔಟ್ ಪುಟ್ ಪವರ್ 30mW RMS ಆಗಿದೆ.

ಈ ಸ್ಪೀಕರ್ ನಲ್ಲಿ ಶಬ್ದದ ಕಂಪನಾಂಕ 20 Hz ಯಿಂದ 20, 000 Hz ಆಗಿದ್ದು -42dBಸೆನ್ಸಿಟಿವಿಟಿ ಹೊಂದಿದೆ. ಇದರಲ್ಲಿರುವ ಮೈಕ್ರೊಫೋನ್ ನ ಕಂಪನಾಂಕ 100 ಯಿಂದ 20KHz ನಡುವೆ ಇದೆ. ಇದರಲ್ಲಿ ಆಡಿಯೊ ಸಂಪರ್ಕಕ್ಕೆ 3.5mm ಹೆಡ್ ಫೋನ್ ಜಾಕ್ ಅನ್ನು ಬಳಸಲಾಗುತ್ತದೆ. ಇದರ ವೈರ್ ನಲ್ಲಿಯೆ ರಿಮೋಟ್ ಇದ್ದು ಇದ್ನು ಟ್ರ್ಯಾಕ್ ಬದಲಾಯಿಸಲು ಮತ್ತು ಕರೆ ಸ್ವೀಕರಿಸಲು ಬಳಸಬಹುದಗಿದೆ.

ಈ ನಾಯ್ಸ್ ಹುಶ್ NX26 ಹೆಡ್ ಸೆಟ್ ರು.4,000ಕ್ಕೆ ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X