ನೋಕಿಯಾ ಪರಿಚಯಿಸಲಿದೆ ನೋಕಿಯಾ BH 110 ಹೆಟ್ ಸೆಟ್

Posted By:
ನೋಕಿಯಾ ಪರಿಚಯಿಸಲಿದೆ ನೋಕಿಯಾ BH 110 ಹೆಟ್ ಸೆಟ್

ನೋಕಿಯಾ ಕಂಪನಿಯು ಮೊಬೈಲ್ ಮಾರುಕಟ್ಟೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಇದೀಗ ಆಡಿಯೊ ವಸ್ತುಗಳನ್ನು ತಯಾರಿಸಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿದೆ. ಇತ್ತೀಚಿಗೆ ನೋಕಿಯಾ ಬ್ಲೂಟೂಥ್ ತಂತ್ರಜ್ಞಾನವನ್ನು ಹೊಂದಿರುವ ನೋಕಿಯಾ BH 110 ಎಂಬ ಬ್ಲೂಟೂಥ್ ಹೆಡ್ ಸೆಟ್ ಅನ್ನು ತಯಾರಿಸಿದ್ದು ಇನ್ನಷ್ಟೆ ಮಾರುಕಟ್ಟೆಗೆ ಪರಿಚಯಿಸಬೇಕಾಗಿದೆ.

ಈ ಹೆಡ್ ಸೆಟ್ ಅನ್ನು ಅನೇಕ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಬಳಕೆದಾರರಿಗೆ ಉಪಯೋಗಿಸಲು ಸುಲಭವಾಗುವಂತೆ ರೂಪಿಸಲಾಗಿದೆ.ಈ ಹೆಡ್ ಸೆಟ್ ಮಲ್ಟಿಪಾಯಿಂಟ್ ತಂತ್ರಜ್ಞಾನವನ್ನು ಹೊಂದಿದ್ದು ಒಂದೆ ಹೆಡ್ ಸೆಟ್ ಬಳಸಿ ಮನೆಯ ಫೋನ್ ಮತ್ತು ಕೆಲಸದ ಜಾಗದಲ್ಲಿರುವ ಫೋನ್ ಗೆ ಸಂಪರ್ಕವನ್ನು ಉಂಟುಮಾಡಲು ಸಾಧ್ಯವಾಗುವುದು. ಈ ತಂತ್ರಜ್ಞಾನದಿಂದ ಬಳಕೆದಾರರು ಎರಡೂ ಫೋನ್ ಗಳಲ್ಲಿ ಬಂದಿರುವ ಕರೆಯನ್ನು ಸ್ವೀಕರಿಸಬಹುದಾಗಿದೆ. ಇದನ್ನು ಬಳಸಿ ಹ್ಯಾಂಡ್ ಫ್ರೀ ಕಾಲ್ ಮಾಡಬಹುದಾಗಿದೆ.

ಈ ಸಾಧನವು ಬಳಸಲು ಸುಲಭವಾಗಿದ್ದು, ಇದು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಾಗುವುದು. ಈ ಹೆಡ್ ಸೆಟ್ ನಲ್ಲಿ ಅನೇಕ ಕಾರ್ಯವನ್ನು ನಿರ್ವಹಿಸುವಂತಹ ಬಟನ್ ಇದ್ದು ಪವರ್ ಆಫ್ ಅಥವಾ ಆನ್ , ಕರೆಯನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದನ್ನು ಮಾಡಬಹುದಾಗಿದೆ.10ಗ್ರಾಂ ತೂಕದ ಈ ಹೆಡ್ ಸೆಟ್ 56.0 x 17.4 x 8.7 mm ಗಾತ್ರವನ್ನು ಹೊಂದಿದೆ. ಈ ಸಾಧನದಲ್ಲಿ 2 mm ಚಾರ್ಜಿಂಗ್ ಕನೆಕ್ಟರ್ ಹೊಂದಿದ್ದು ಇದು ಜಾರ್ಜ್ ಆಗಲು ತೆಗೆದುಕೊಳ್ಳುವ ಅತ್ಯಧಿಕ ಸಮಯವೆಂದರೆ 2 ಗಂಟೆ ಆಗಿದೆ.

ಇದು 6 ಗಂಟೆಗಳ ಟಾಕ್ ಟೈಮ್ ಸಾಮರ್ಥ್ಯವನ್ನು ಹೊಂದಿದ್ದು ಇದರಲ್ಲಿ 32 ohm ಇರುವ ಇಂಪೆಡನ್ಸ್ ಮತ್ತು 4 mm ಮೈಕ್ರೊಫೋನ್ ಅನ್ನು ಹೊಂದಿದೆ. ಇದರಲ್ಲಿ ಆಪರೇಟಿಂಗ್ ಸಿಸ್ಟಮ್ 300 Hz ಯಿಂದ 400 Hz ರೇಂಜ್ ವರೆಗೆ ಸಪೋರ್ಟ್ ಮಾಡುತ್ತದೆ. ಇದನ್ನು ಕೊಳ್ಳುವಾಗ ಮಾನ್ಯುಯಲ್ ಮತ್ತು AC-11 ನೋಕಿಯಾ ಚಾರ್ಜ್ರ್ ರ್ ಮತ್ತು 3 ರೀತಿ ಗಾತ್ರದ ಇಯರ್ ಬಡ್ಸ್ ಕೂಡ ಲಭ್ಯವಾಗುತ್ತದೆ.

ಆದರೆ ಈ ಹೆಡ್ ಸೆಟ್ ಬೆಲೆಯ ಬಗ್ಗೆ ಮಾತ್ರ ಇದುವರೆಗೆ ತಿಳಿದುಬಂದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot