ಜೊತೆಯಲ್ಲಿ ಕೊಂಡೊಯ್ಯಬಹುದಾದ ನೋವಾ ಮಿನಿ ಸ್ಪೀಕರ್

Posted By:
ಜೊತೆಯಲ್ಲಿ ಕೊಂಡೊಯ್ಯಬಹುದಾದ ನೋವಾ ಮಿನಿ ಸ್ಪೀಕರ್

ಚಿಕ್ಕದಾದ, ನೋಡಲು ಸುಂದರವಾಗಿರುವ ನೋವಾ ಮಿನಿ ಎಂಬ ಸ್ಪೀಕರ್ ಟ್ಯಾಗೊ ಆಡಿಯೊದಿಂದ ಬರುತ್ತಿದೆ.ಈ ಸ್ಪೀಕರ್ ಅನ್ನು ಜೊತೆಗೆ ಕೊಂಡೊಯ್ಯಬಹುದಾಗಿದ್ದು, ಇದರ 2 ಫೀಟ್ ಗಾತ್ರದಲ್ಲಿ ಶಬ್ದವನ್ನು ಹೆಚ್ಚು ಮತ್ತು ಕಡಿಮೆ ಮಾಡುವ ಬಟನ್ ಇದೆ. ಅಲ್ಲದೆ ಬೇರೊಂದು ಫೂಟ್ ನಲ್ಲಿ ಪವರ್ ಬಟನ್ ಹೊಂದಿದೆ.

ಇದರಲ್ಲಿ 3.5mm ಇನ್ ಪುಟ್ ಔಟ್ ಹೊಂದಿದ್ದು , ಮಿನಿ USB ಪೋರ್ಟ್ ಬಳಸಿ ಚಾರ್ಜ್ ಮಾಡಬಹುದಾಗಿದೆ.ಈ ನೋವಾ ಮಿನಿಯಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಬಳಸಲಾಗಿದ್ದು, ಇದರಲ್ಲಿ 24 ಗಂಟೆಗಳ ಕಲ ಚಾರ್ಜ್ ನಿಲ್ಲುತ್ತದೆ. ಇದರ ಕೋರ್ಡ್ 4 ಇಂಚು ಹೊಂದಿರುವುದರಿಂದ ಐಪೋಡ್, ಐಫೋನ್, ಟ್ಯಾಬ್ಲೆಟ್ ಅನ್ನು ದೂರದಲ್ಲಿ ಇಟ್ಟು ಸ್ಪೀಕರ್ ಗೆ ಜೋಡಿಸಲು ಸಾಧ್ಯವಿಲ್ಲ.

ಈ ಚಿಕ್ಕದಾದ ಸ್ಪೀಕರ್ ಕಪ್ಪು, ಕೆಂಪು ಮತ್ತು ಕಪ್ಪು, ಬಿಳಿ ಮತ್ತು ಕೆಂಪು ಈ 3 ಬಣ್ಣದಲ್ಲಿ ದೊರೆಯುತ್ತಿದ್ದು ಇದರ ವಿನ್ಯಾಸವು ನೋಡುಗರನ್ನು ಸೆಳೆಯುವಂತೆ ಇದೆ.

ಜೊತೆಗೆ ಕೊಂಡೊಯ್ಯಬಲ್ಲ ಸ್ಪೀಕರ್ ಬೆಲೆ ಅದರ ವೆಬ್ ಸೈಟ್ ನಲ್ಲಿ ರು. 2,000 ಎಂದು ಹೇಳಲಾಗಿದೆ. ಈ ಸ್ಪೀಕರ್ ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿದ್ದು , ಭಾರತ ಮತ್ತು ಇತರ ದೇಶಗಳಲ್ಲಿ ಸಧ್ಯದಲ್ಲಿಯೆ ಲಭ್ಯವಾಗುವುದು ಎಂದು ಹೇಳಲಾಗುತ್ತಿದೆ.

ಈ ಸ್ಪೀಕರ್ ಬೆಲೆಯಲ್ಲಿ ಇತರ ಮಿನಿ ಸ್ಪೀಕರ್ ಗಳಿಗೆ ಹೋಲಿಸಿದಾಗ ಸ್ವಲ್ಪ ಅಧಿಕವೆನಿಸಿದರು ಇದರ ಉತ್ತಮ ಗುಣ ಮಟ್ಟ ಗ್ರಾಹಕನನ್ನು ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಮಾಡುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot