ಆಪಲ್ ಗಾಗಿ ಬಂದಿದೆ CS-345 CD ಮಿನಿ ಸಿಸ್ಟಮ್

|
ಆಪಲ್ ಗಾಗಿ ಬಂದಿದೆ CS-345 CD ಮಿನಿ ಸಿಸ್ಟಮ್

ಒಂಕಿಯೊ ಇತ್ತೀಚಿಗೆ ತನ್ನ ಹೊಸ ಅನ್ವೇಷಣೆಯಿಂದ ಮಿನಿ ಸ್ಪೀಕರ್ ತಯಾರಿಸಿದ್ದು ಅದನ್ನು CS-345 CD ಎಂದುಕರೆಯಲಾಗಿದೆ. ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು ಇದರ ಶಬ್ದದ ಗುಣ ಮಟ್ಟದ ಬಗ್ಗೆ ಎರಡು ಮಾತಿಲ್ಲ, ಅಷ್ಟರ ಮಟ್ಟಿಗಿನ ಒಳ್ಳೆಯ ಗುಣಮಟ್ಟವನ್ನು ಹೊಂದಿದೆ.

ಈ ಹೆಡ್ ಫೋನ್ ನ ಮತ್ತೊಂದು ವಿಶೇಷತೆ ಅಂದರೆ ಇದನ್ನು ಆಪಲ್ ಐಪೋಡ್ ಮತ್ತು ಐಫೋನ್ ಗಾಗಿ ಮಾತ್ರ ತಯಾರಿಸಲಾಗಿದೆ.CS-345 CD ಸ್ಪೀಕರ್ ಪವರ್ ಪುಟ್ ಸ್ಟಿರಿಯೊ ಮತ್ತುಡಿಜಿಟಲ್ ಆಂಪ್ಲಿಫೈಯರ್ ಸರ್ಕ್ಯುಟರಿ ಜೊತೆ ಬಂದಿರುವ ಇದರ ಔಟ್ ಪುಟ್ ಸ್ಟಿರಿಯೊ 15 W/Ch ಆಗಿದೆ. ಅಲ್ಲದೆ ಇದರಲ್ಲಿ ಸೂಪರ್ ಬಾಸ್ ಕಂಟ್ರೋಲ್ ಮತ್ತು ಆಕ್ಟೀವ್ ಬಾಸ್ ಕಂಟ್ರೋಲ್ ಅನ್ನು ಹೊಂದಿದೆ.

ಈ ಸಿಡಿ ಪ್ಲೇಯರ್ ನಲ್ಲಿ ಬಳಕೆದಾರರು ಇಷ್ಟವಾದ ಸಂಗೀತವನ್ನು ಅವರ ಆಯ್ಕೆಯಂತೆ ಕೇಳಬಹುದಾಗಿದೆ.ಸ್ಪೀಕರ್ ಭಾಗವು 2-ವೇ ಬಾಸ್ ರಿಫ್ಲೆಕ್ಸ್ ಬಗ್ಗೆಯಲ್ಲಿ ಬರುತ್ತದೆ. ಈ ಸಾಧನವು ಬಳಸಿಕೊಳ್ಳುವ ವಿದ್ಯುತ್ 30 W ಆಗಿದ್ದು ಇದರ ಕಂಪನಾಂಕ 55 Hz – 50 KHz ಆಗಿದೆ. ಇದರಲ್ಲಿ ವೂಫರ್ ಇದ್ದು 10 cm ಕೋನ್ ಮತ್ತು 2.5 ಬ್ಯಾಲೆನ್ಸ್ ಡೋಮ್ ಟ್ವೀಟರ್ ಹೊಂದಿದೆ.

ಇದರಲ್ಲಿ ರಿಸೀವರ್ ಸೆಕ್ಷನ್ 215 x 100 x 270 mm ಮತ್ತು ಸ್ಪೀಕರ್ ಸೆಕ್ಷನ್ 130 x 203 x 173 mmಡೈಮೆಂಶನ್ ಹೊಂದಿದೆ. ಇದನ್ನು ಟಿವಿಗೆಸಹ ಜೋಡಿಸಬಹುದಾಗಿದೆ.ಈ ಸ್ಪೀಕರ್ ಬೆಲೆಯ ಬಗ್ಗೆ ಇದುವರೆಗೆ ತಿಳಿದು ಬಂದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X