ಆಪಲ್,ಬ್ಲಾಕ್ ಬೆರಿಯ ಸ್ಪರ್ಧಿ ಈ ರೇಝರ್ ಹೆಡ್ ಫೋನ್ !

|

ಆಪಲ್,ಬ್ಲಾಕ್ ಬೆರಿಯ ಸ್ಪರ್ಧಿ ಈ ರೇಝರ್ ಹೆಡ್ ಫೋನ್ !
ರೇಝರ್ ಕಂಪನಿ ಈಗಾಗಲೆ ಗೇಮಿಂಗ್ ಮೌಸ್ ತಯಾರಿಸಿ ಮಾರುಕಟ್ಟೆಯಲ್ಲಿ ಉತ್ತಮ ಗಮನವನ್ನು ಸೆಳೆದಿತ್ತು, ಈಗ ಇದರ ಗಮನ ಆಡಿಯೊ ವಸ್ತುಗಳ ಮೇಲೆ ಸರಿದಿದ್ದು ಅದರ ಫಲವಾಗಿ ಹೊಸ ಆಡಿಯೊ ಸಾಧನವಾದ ಎಲೆಕ್ಟ್ರಾ ಹೆಡ್ ಫೋನ್ ತಯಾರಿಸಿದೆ.

ಈ ಎಲೆಕ್ಟ್ರಾ ಹೆಡ್ ಫೋನ್ ಮುಖ್ಯವಾಗಿ ಗೇಮಿಂಗ್ ಆಡಿಯೊ ಸಾಧನವಾಗಿದ್ದು , ಇದು ದೊಡ್ಡ ಗಾತ್ರದ ಹೆಡ್ ಫೋನ್ ಆಗಿದ್ದು ಕಿವಿಯನ್ನು ಮುಚ್ಚುವಲ್ಲಿ ಲೆದರ್ ಬಳಸಿ ಮಾಡಲಾಗಿದೆ.

ಈ ಹೆಡ್ ಪೋನ್ ಅನ್ನು ಸಂವಹನದಲ್ಲೂ ಸಹ ಬಳಸಲಾಗಿದೆ. ಈ ಹೆಡ್ ಫೋನ್ 284 ಗ್ರಾಂ ತೂಕವನ್ನು ಹೊಂದಿದೆ. ಇದು ಅನಿಯೊ ಡೈನಂ ಮ್ಯಾಗ್ನೆಟ್ ಹೊಂದಿದ್ದು ಅದನ್ನು ಅಲ್ಯುಮಿನಿಯಂ ವಾಯ್ಸ್ ಕಾಯಿಲ್ ನಿಂದ ಕವರ್ ಮಾಡಲಾಗಿದೆ.

ಈ ಹೆಎಡ್ ಫೋನ್ ನಲ್ಲಿ ಶಬ್ದದ ಕಂಪನಾಂಕವು 25 Hz ರಿಂದ 16, 000 Hz ನಡುವೆ ಇರುತ್ತದೆ. ಈ ಹೆಡ್ ಪೋನ್ ಇನ್ ಪುಟ್ ಪವರ್ 50mW ಬಳಸಿಕೊಂಡು ಕಾರ್ಯವನ್ನು ನಿರ್ವಹಿಸುತ್ತದೆ.

ಈ ಹೆಡ್ ಫೋನ್ ಕೇಬಲ್ 1.3 ಮೀಟರ್ ಉದ್ದ ಹೊಂದಿದ್ದು , 3.5 ಮಿಮಿ ಕನೆಕ್ಟರ್ ಅನ್ನು ಕೇಬಲ್ ನ ಒಂದು ಬದಿಯಲ್ಲಿ ಜೋಡಿಸಲಾಗಿರುತ್ತದೆ.

ಇದೊಂದು ಅತ್ಯುತ್ತಮವಾದ ಗೇಮಿಂಗ್ ಹೆಡ್ ಫೋನ್ ಆಗಿದ್ದು ಇದು ಹೊರಗಿನ ಶಬ್ದದಿಂದ ಬಳಕೆದಾರರನ ಮನರಂಜನೆಗೆ ಭಂಗ ಉಂಟಾಗುವುದನ್ನು ತಡೆಯುತ್ತದೆ.

ಈ ಹೆಡ್ ಪೋನ್ ಬಳಸಿದರೆ ಇದರಲ್ಲಿ ಸುಲಭವಾಗಿ ಗಾಳಿಯಾಡುವಂತೆ ಆಗುವುದರಿಂದ ಇದನ್ನು 3-4 ಗಂಟೆಗಳ ಕಾಲ ನಿರಂತರವಾಗಿ ಬಳಸಿದರೂ ಯಾವುದೆ ಕಿರಿಕಿರಿ ಉಂಟಾಗುವುದಿಲ್ಲ.

ಇದು ಓಮಿ ಡೈರಕ್ಷನಲ್ ಲಕ್ಷಣವನ್ನು ಹೊಂದಿದ್ದು ಇದನ್ನು ಮಲ್ಟಿ ಪ್ಲೇಯರ್ ಗೇಮ್ ನಲ್ಲಿ ಬಳಸಬಹುದಾಗಿದೆ. ಇದರ ಕಂಪನಾಂಕವು 100Hz ದಿಂದ 10, 000 Hz ಇದರ ವಾಯ್ಸ್ ಕ್ಲಾರಿಟಿ ಅನುಪಾತ 58 dB ಯನ್ನು ಹೊಂದಿದೆ.

ಈ ಹೆಡ್ ಫೋನ್ ನಲ್ಲಿ ಶಬ್ದವನ್ನು ಹೆಚ್ಚು ಮಾಡಲು ಮತ್ತು ಕಡಿಮೆ ಮಾಡಲು ರಿಮೋಟ್ ಕಂಟ್ರೋಲ್ ಇದೆ.ಈ ಹೆಡ್ ಫೋನ್ ಆಪಲ್, ಎಚ್ ಟಿ ಸಿ, ಬ್ಲಾಕ್ ಬರಿಗೆ ಸ್ಪರ್ಧೆಯನ್ನು ನೀಡುವಷ್ಟರ ಮಟ್ಟಿಗಿನ ಗುಣಮಟ್ಟವನ್ನು ಹೊಂದಿದೆ.

ಈ ಹೆಡ್ ಫೋನ್ ಬೆಲೆ ರು. 2, 700 ಆಗಿದ್ದು ಗ್ರಾಹಕರನ್ನು ಆಕರ್ಷಿಸುವ ಗುಣ ಮತ್ತು ಬೆಲೆ ಇದ್ದ ಮೇಲೆ ಉತ್ತಮ ಮಾರುಕಟ್ಟೆಯನ್ನು ಪಡೆಯುವ ಎಲ್ಲಾ ಲಕ್ಷಣವನ್ನು ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X