ಶಿಬಿರ, ಚಾರಣ ಪ್ರಿಯರಿಗಾಗಿ ಔಟ್ ಡೋರ್ ಸ್ಪೀಕರ್

Posted By:
ಶಿಬಿರ, ಚಾರಣ ಪ್ರಿಯರಿಗಾಗಿ ಔಟ್ ಡೋರ್ ಸ್ಪೀಕರ್
ಹೊರಗಡೆ ಹೋಗುವಾಗ ಪ್ರಕೃತಿ ರಮೀಣಿಯ ತಾಣದಲ್ಲಿ ಕುಳಿತಿರುವಾಗ ಸಂಗೀತದ ಅಬ್ಬರವನ್ನು ಕೇಳ ಬೇಕೆಂದಿನಿಸುವುದು ಸಹಜ, ಕೈಯಲ್ಲಿ ಐಪೋಡ್, ಐಫೋನ್ ಇದ್ದರು ಸಾಕಾಗುವುದಿಲ್ಲ.

ಇನ್ನು ಹೆಚ್ಚಿನ ಶಬ್ದವನ್ನು ನೀಡುವ ಆಡಿಯೊ ಬೇಕೆಂದಿನಿಸಿದರೆ ಅಂತಹವರು ರಸ್ ಸೌಂಡ್ ಸ್ಪೀಕರ್ ಅನ್ನು ಕೊಂಡುಕೊಳ್ಳಬಹುದಾಗಿದೆ.ಆಡಿಯೊ ಸಿಸ್ಟಮ್ ಗಳ ತಯಾರಿಯಲ್ಲಿ ರಸ್ ಸೌಂಡ್ ಬ್ರಾಂಡ್ ಈಗಾಗಲೆ ಗುರುತಿಸಿಕೊಂಡಿದೆ.

ಸುಮಾರು 35 ವರ್ಷಗಳಿಂದ ಆಡಿಯೊ ಸಾಧನಗಳನ್ನು ಉತ್ಪತ್ತಿ ಮಾಡುತ್ತಿರುವ ರಸ್ ಸೌಂಡ್ ಇದೀಗ ಏರ್ ಗೋ ಸ್ಪೀಕರ್ ಅನ್ನು ತಯಾರಿಸಿದೆ.

ಇದನ್ನು ಹೊರಗಡೆ ಹೋಗುವಾಗುವಾಗ ಕೊಂಡೊಯ್ಯಬಹುದಾಗಿದ್ದು ಐಪೋಡ್, ಲ್ಯಾಪ್ ಟಾಪ್ ಐಫೋನ್ ಗಳಿಗೆ ಜೋಡಿಸಿ ಸಂಗೀತವನ್ನು ಸ್ನೀಹಿತರೊಂದಿಗೆ ಕೇಳಿದರೆ ಅದರ ಸವಿಯೆ ಬೇರೆ.

ಈ ಆಂಪ್ಲಿಫೈಯರ್ ಔಟ್ ಡೋರ್ ಸ್ಪೀಕರ್ 12.6x12.9x10.2 ಇಂಚು ಮತ್ತು RMS 40-ವ್ಯಾಟ್ ಆಂಪ್ಲಿಫೈಯರ್, ಒಂದು 6.5 ವೂಫರ್,ಮತ್ತು 1 ಇಂಚು ಟ್ವೀಟರ್ ಅನ್ನು ಹೊಂದಿದೆ.

ರಸ್ ಸೌಂಡ್ ಏರ್ ಗೋ ಅನ್ನು ಏರ್ ಪೋರ್ಟ್ ಎಕ್ಸ್ ಪ್ರೆಸ್ ನಲ್ಲೂ ಪ್ಲೆಗ್ ಮಾಡಬಹುದಾಗಿದೆ. ಇದು ಶಿಬಿರ ಮತ್ತು ಚಾರಣಕ್ಕೆ ಹೋಗುವರು ಇದನ್ನು ಕೊಂಡೊಯ್ಯುದ್ದು ಅಧಿಕ ಮನರಂಜನೆಯನ್ನು ಪಡೆಯಬಹುದಾಗಿದೆ.

ಈ ಸ್ಪೀಕರ್ ಅನ್ನು ಕೊಳ್ಳಬಯಸುವರು BestBuy.com ಮತ್ತು Amazon.com ರೀಟೈಲ್ ಸೈಟ್ ನಲ್ಲಿ ಕೊಳ್ಳಬಹುದಾಗಿದೆ.

ಇದರ ಬೆಲೆ ರು. 20,000 ಆಗಿದ್ದು ಭಾರತೀಯರು ತರಿಸಿಕೊಳ್ಳಬೇಕೆಂದು ಬಯಸುವರೆಗೆ ಅದನ್ನು ಹಡಗಿನಲ್ಲಿ ತರಿಸುವುದರಿಂದ ಅದರ ಚಾರ್ಜ್ ಸೇರಿ ಸ್ವಲ್ಪ ಅಧಿಕವಾಗಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot