ಹ್ಯೂಗೊ ಬಾಸ್ ಬರ್ತಿದಾರೆ ದಾರಿ ಬಿಡಿ..

Posted By: Staff
ಹ್ಯೂಗೊ ಬಾಸ್ ಬರ್ತಿದಾರೆ ದಾರಿ ಬಿಡಿ..
 

ಸ್ಯಾಮ್ ಸಂಗ್ ಕಂಪನಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧಗೊಂಡಿದೆ. ಗ್ರಾಹಕರಿಗೆ ಡಿಸೆಂಬರ್ ವೇಳೆಗೆ ವಿನೂತನ ಸ್ಮಾರ್ಟ್ ಫೋನ್ ನೀಡಲು ಸ್ಯಾಮ್ ಸಂಗ್ ತಯಾರಾಗಿದೆ. 'ಸ್ಯಾಮ್ ಸಂಗ್ ಹ್ಯೂಗೊ ಬಾಸ್' ಮೊಬೈಲ್ ನಿಮಗೆಂದೇ ಅನೇಕ ಆಯ್ಕೆಗಳನ್ನು ಹೊತ್ತು ಬರಲಿದೆ.

ತಮ್ಮದೇ ಸ್ಟೈಲ್ ಸ್ಟೇಟ್ ಮೆಂಟ್ ಸೃಷ್ಟಿಸಲು ಹಾತೊರೆಯುವ ಯುವಜನರಿಗಂತೂ ಇದು ಸಖತ್ ಮೊಬೈಲ್. ಈ ಹಿಂದೆ ಬಿಡುಗಡೆಗೊಂಡಿದ್ದ ಸ್ಯಾಮ್ ಸಂಗ್ F480 ಎಂಬ ಮೊಬೈಲ್ ಮಾದರಿಯನ್ನು ಇನ್ನಷ್ಟು ಪರಿಷ್ಕ್ರತಗೊಳಿಸಿ ಹೊಸ ಲುಕ್ ನೀಡಲಾಗಿರುವ ಮೊಬೈಲ್ ಸ್ಯಾಮ್ ಸಂಗ್ ಹ್ಯೂಗೊ ಬಾಸ್ ಮೊಬೈಲ್ ಎನ್ನಲಾಗಿದೆ.

ನೋಡಿದ ತಕ್ಷಣವೇ ಕೊಂಡುಕೊಳ್ಳಲು ಮನಸ್ಸಾಗುವಂತಹ ವಿಶೇಷ ವಿನ್ಯಾಸವನ್ನು ಮೊಬೈಲ್ ಗೆ ನೀಡಲಾಗಿದೆ. F480 ಮೊಬೈಲ್ ನ ಮುಂದುವರೆದ ಭಾಗ ಇದಾಗಿದ್ದರೂ ಎಲ್ಲಾ ರೀತಿಯಿಂದಲೂ ಮೊಬೈಲ್ ವಿಶೇಷತೆ ಹೊಂದಿದೆ.

ನಿಮ್ಮ ಸ್ಟೈಲ್ ಗೆ ತಕ್ಕಂತೆ ಅನೇಕ ಆಯ್ಕೆಗಳನ್ನೂ ಇಲ್ಲಿ ನೀಡಲಾಗಿದೆ. 800 MHz ಸಿಂಗಲ್ ಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 2.3.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ.

3.5 ಇಂಚಿನ ಡಿಸ್ಪ್ಲೇ ಮತ್ತು 320 x 480 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. 5 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ ಆಟೊ ಫೋಕಸ್ ಆಯ್ಕೆಯನ್ನೂ ನೀಡಲಾಗಿದೆ. ಸಂಪರ್ಕಕ್ಕೆಂದು ಬ್ಲೂಟೂಥ್, ವೈ-ಫೈ ಆಯ್ಕೆಯೂ ಲಭ್ಯವಿದೆ. ಈ ಮೊಬೈಲಿನ ಮೆಮೊರಿ ಸಾಮರ್ಥ್ಯ ಮತ್ತು ಬ್ಯಾಟರಿ ಬಾಳಿಕೆಯೂ ಉತ್ತಮವಾಗಿದೆ ಎಂದು ಕಂಪನಿ ತಿಳಿಸಿದೆ.

ಮುಂದಿನ ತಿಂಗಳಿನಲ್ಲಿ ಆನ್ ಲೈನ್ ಸ್ಟೋರ್ಸ್ ಗಳಲ್ಲಿ ಲಭ್ಯವಾಗುವ ಈ ಮೊಬೈಲ್ ಬೆಲೆ ಅಧೀಕೃತವಾಗಿ ತಿಳಿದುಬಂದಿಲ್ಲ. ಆದರೆ ಮೂಲಗಳ ಪ್ರಕಾರ ಸ್ಯಾಮ್ ಸಂಗ್ ಹ್ಯೂಗೊ ಬಾಸ್ ಬೆಲೆ 25,000ರು ಇರಬಹುದು ಎನ್ನಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot