ಸಮುದ್ರದ ಅಲೆಯೊಂದಿಗೆ ಆಡುತ್ತಾ ಸಂಗೀತ ಕೇಳಿ

Posted By:
ಸಮುದ್ರದ ಅಲೆಯೊಂದಿಗೆ ಆಡುತ್ತಾ ಸಂಗೀತ ಕೇಳಿ

ನಿಮಗೆ ಇಷ್ಟವಾದ ಸಂಗೀತವನ್ನು ಕೇಳುತ್ತಾ ಈಜಲು ಸಾಧ್ಯವಿದೆಯೆ ಎಂದು ನೀವು ಯೋಚಿಸಿತ್ತಿದ್ದರೆ ಅದು ಸಾಧ್ಯ ಎಂದು ಹೇಳುತ್ತಿದೆ ಫೈನೀಸ್ ಕಂಪನಿ. ಇದು ಈ ಕಂಪನಿ ತಯಾರಿಸಿದಂತಹ ವಾಟರ್ ಫ್ರೂಫ್ MP3 ಪ್ಲೇಯರ್ ನ ಮೂಲಕ ಸಾಧ್ಯವಿದೆ ಎಂದು ಹೇಳುತ್ತಿದೆ. ಆ ಪ್ಲೇಯರ್ ಅನ್ನು ಸ್ವಿMP3 2G ಎಂಬ ಹೆಸರಿನಲ್ಲಿ ಕರೆಯಲಾಗಿದೆ.

ಇದನ್ನು ನೀರಿನೊಳಗೆ ಬಳಸಿದರೂ ಸಹ ಶಬ್ದದ ಗುಣಮಟ್ಟದಲ್ಲಿ ಯಾವುದೆ ಲೋಪ ಎದ್ದು ಕಾಣುವುದಿಲ್ಲ. ಏಕೆಂದರೆ ಇದರಲ್ಲಿ ಅತ್ಯಾಧುನಿಕವಾದ ಬೋನ್ ಕಂಡಕ್ಷನ್ ಆಡಿಯೊ ಟ್ರಾನ್ಸ್ ಮಿಷನ್ ತಂತ್ರಜ್ಞಾನವನ್ನು ಬಳಿಸಿದ್ದು ಇದು ಉತ್ತಮ ಗುಣಮಟ್ಟದ ಶಬ್ದವನ್ನು ಉಂಟುಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಬಳಕೆದಾರರು ವಾಟರ್ ಫ್ರೂಫ್ ಹೆಡ್ ಫೋನ್ ಗಳನ್ನು ಬಳಸುವಾಗ ಅನುಭವಿಸುತ್ತಿದ್ದ ಸಣ್ಣ ಪುಟ್ಟ ದೋಷಗಳನ್ನು ಸಹ ಇದರಲ್ಲಿ ನಿವಾರಿಸಲಾಗಿದೆ.

ಇದರಲ್ಲಿ ಮೆಮೊರಿ ಸಾಮರ್ಥ್ಯ 2 GB ಅಂದರೆ 500 ಹಾಡುಗಳನ್ನು ಇದರಲ್ಲಿ ಸಂಗ್ರಹಿಸಬಹುದಾಗಿದೆ. ಅಲ್ಲದೆ ಇದನ್ನು ಬಳಸಿ 30 ಗಂಟೆಗಳ ಕಾಲ ಸಂಗೀತವನ್ನು ಕೇಳಬಹುದಾಗಿದೆ. ಇದರಲ್ಲಿರುವ ಹೈಡ್ರೋಡೈನಾಮಿಕ್ ಕ್ಲಿಪ್ ಪ್ಲೇಯರ್ ಬೀಳದಂತೆ ತಡೆಯುತ್ತದೆ. ಈ ಪ್ಲೇಯರ್ ಅನ್ನು ಬೀಚ್ ನೋಡಲು ಹೋಗುವಾಗ ಜೊತೆಯಲ್ಲಿ ಕೊಂಡೊಯ್ಯದ್ದರೆ ಸಮುದ್ರ ಅಲೆಯ ಜೊತೆ ಆಡುತ್ತಾ ಸಂಗೀತದ ಸವಿಯನ್ನು ಸವಿಯಬಹುದಾಗಿದೆ.

ಈ ಪ್ಲೇಯರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು.8, 500 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot