ಸೊನ್ನೆಗಿಂತ ಕಡಿಮೆ ತಾಪಮಾನದಲ್ಲಿ ಬಳಸಬಹುದಾದ ಹೆಡ್ ಫೋನ್

|
ಸೊನ್ನೆಗಿಂತ ಕಡಿಮೆ ತಾಪಮಾನದಲ್ಲಿ ಬಳಸಬಹುದಾದ ಹೆಡ್ ಫೋನ್

ಮಾರುಕಟ್ಟೆಯಲ್ಲಿ ಅನೇಕ ರೀತಿಯ, ಗುಣಮಟ್ಟದ, ಉತ್ತಮ ಬಣ್ಣ ಮತ್ತು ವಿನ್ಯಾಸದಿಂದ ನೋಡುಗರ ಮನಸೆಳೆಯುವ ಹೆಡ್ ಫೋನ್ ಗಳು ಸಿಗುತ್ತವೆ, ಈ ಹೆಡ್ ಫೋನ್ ಗಳಿಗೆ ತಕ್ಕ ಸ್ಪರ್ಧಿಯಾಗಿ ಪಿಲಿಪ್ಸ್ ಒನೈಲ್ ಜೊತೆ ಸೇರಿ ಮಾಡಿದಂತಹ ಬೆಂಡ್ ಫೋನ್ ಬಿಡುಗಡೆಗೊಳಿಸಿದೆ.

ಈ ಹೆಡ್ ಫೋನ್ ನ ವಿಶೇಷವೆಂದರೆ ಇದನ್ನು ಅತಿ ಕಡಿಮೆ ತಾಪಮಾನ ಅಂದರೆ - ಸೊನ್ನೆ ಡಿಗ್ರಿಯಲ್ಲಿ ಸಹ ಈ ಹೆಡ್ ಫೋನ್ ಕಾರ್ಯವನ್ನು ನಿರ್ವಹಿಸುತ್ತದೆ. ಈ ಹೆಡ್ ಫೋನ್ ಅನ್ನು ಕಿವಿಗೆ ಹೊಂದುವಂತೆ ಬೆಂಡ್ ಮಾಡಿ ಬಳಸಬಹುದಾಗಿದೆ. ಆದ್ರರಿಂದ ಇದನ್ನು ಆಗಾಗ ಸರಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಹೆಡ್ ಫೀನ್ ಅನ್ನು ಗಟ್ಟಿಯಾದ ಪ್ಲಾಸ್ಟಿಕ್ ಬಳಸಿ ತಯಾರಿಸಿ ಇರಲಿಲ್ಲ.ಈ ಹೆಡ್ ಫೋನ್ ಸುಂದರವಾದ ಡ್ಯುಯಲ್ ಟೋನ್ ಕಲರ್ ನಲ್ಲಿ ಲಭ್ಯವಿದೆ.

ಈ ಹೆಡ್ ಫೋನ್ ನಲ್ಲಿ ಸಂಪರ್ಕದ ವೈರ್ ಇದ್ದು, ಇದರ ಒಂದು ಬದಿಯಲ್ಲಿ 3.5 mm ಆಡಿಯೊ ಜಾಕ್ ಇದ್ದು ಇದನ್ನು ಸೆಂಕಡರಿ ಜಾಕ್ ಮುಖಾಂತರ ಹೆಡ್ ಫೋನ್ ಗೆ ಅಳವಡಿಸಲಾಗಿರುತ್ತದೆ. ಈ ಸಾಧನದ ಡೈಮೇಂಶನ್ 16.5 cm x 19.5 cm x 6.3 cm (W x H x D) ಆಗಿದ್ದು, 110 ಗ್ರಾಂ ತೂಕವನ್ನು ಹೊಂದಿದೆ.

ಈ ಹೆಡ್ ಫೋನ್ 15 ಮತ್ತು 24, 000 Hz ನಡುವಿನ ಕಂಪನಾಂಕವನ್ನು ಹೊಂದಿದೆ. ಈ ಹೆಡ್ ಫೋನ್ 100mW ಅಧಿಕ ಪವರ್ ಬಳಸಿಕೊಳ್ಳುವುದು, ಅಲ್ಲದೆ ಇದರ ಸೆನ್ಸಟಿವಿಟಿ 107dB ಆಗಿದೆ. ಇದರ ಕೇಬಲ್ ಉದ್ದ 1.2ಮೀ ಆಗಿದೆ.

ಎಲ್ಲಾ ಕಡೆಯು ಉತ್ತಮ ಗುಣಮಟ್ಟವನ್ನು ಕೊಡುವ ಈ ಹೆಡ್ ಫೋನ್ ಬೆಲೆ ರು.4,000 -5, 000 ಒಳಗೆ ದೊರೆಯುವುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X