Subscribe to Gizbot

ಸ್ಯಾಮ್ ಸನ್ ನಿಂದ ಮೆಟೆರೊ ಮಿಕ್ ಮೈಕ್ರೊಫೋನ್

Posted By:
ಸ್ಯಾಮ್ ಸನ್ ನಿಂದ ಮೆಟೆರೊ ಮಿಕ್ ಮೈಕ್ರೊಫೋನ್

ಸ್ಯಾಮ್ ಸನ್ ಮೆಟೆರೊ ಮಿಕ್ ಹೆಸರಿನ ಮೈಕ್ರೊಫೋನ್ ನೋಡಲು ಸುಂದರವಾಗಿದ್ದು ಇದನ್ನು USB ಪೋರ್ಟ್ ಬಳಸಿ ಯಾವುದೆ ಇನ್ ಸ್ಟಾಲ್ ಡ್ರೈವರ್ ಬಳಸದೆ ಲ್ಯಾಪ್ ಟಾಪ್ , ಮ್ಯಾಕ್ ಕಂಪ್ಯೂಟರ್, ವಿಂಡೋಸ್ ಪರ್ಸನಲ್ ಕಂಪ್ಯೂಟರ್ ಗಳಲ್ಲಿ ಬಳಸಬಹುದಾಗಿದೆ.

ಈ ಮೈಕ್ರೋಫೊನ್ ಚಿಕ್ಕ ಗಾತ್ರದಾಗಿದ್ದು ಇದನ್ನು ಜೊತೆಯಲ್ಲಿ ಎಲ್ಲಿಗೆ ಬೇಕಾದರೂ ಕೊಂಡಯ್ಯಬಹುದಾಗಿದೆ. ಇದರಲ್ಲಿ 3 ಕಾಲುಗಳಿದ್ದು ಜೊತೆಗೆ ಕೊಂಡೊಯ್ಯುವಾಗ ಮಡಚಿ ಕೊಂಡೊಯ್ಯಬಹುದಾಗಿದೆ.

ಈ ಮೈಕ್ರೊಫೋನ್ನಲ್ಲಿ ವಾಲ್ಯೂಮ್ ಡಯಲ್ ಮುಂದುಗಡೆ ಮತ್ತು ಹೆಡ್ ಫೋನ್ 3mm ಹಿಂದುಗಡೆ ಇದೆ. ನೀವು ಏನು ರೆಕಾರ್ಡ್ ಮಾಡಿದ್ದನ್ನು ಕೇಳಬೇಕೆಂದರೆ ಅದನ್ನು ಹೆಡ್ ಫೋನ್ ಗೆ ಜೋಡಿಸಬಕಾಗಿಲ್ಲ. ಇದು 44.1/48 kHz 16-bit ಆಡಿಯೊದಲ್ಲಿ ರೆಕಾರ್ಡ್ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.ಇದರಲ್ಲಿ ಇಷ್ವಾವಾಗದ ಒಂದು ಗುಣವೆಂದರೆ ಇದು ಚಿಕ್ಕ ಗಾತ್ರದಾಗಿದ್ದು ಕೆಪವೊಮ್ಮೆ ರೆಕಾರ್ಡಿಂಗ್ ಮಾಡುವಾಗ ತೊಂದರೆ ಉಂಟಾಗುವುದು, ಏಕೆಂದರೆ ಇದರ 3 ಚಿಕ್ಕ ಕಾಲುಗಳನ್ನು ರೆಕಾರ್ಡಿಂಗ್ ಗೆ ಸಮೀಪದಲ್ಲಿ ಇಟ್ಟು ಮಾಡಲು ತೊಂದರೆ ಉಂಟಾಗುತ್ತದೆ.

ಮೈಕ್ರೊಫೋನ್ ನಲ್ಲಿ ರೆಕಾರ್ಡ್ ಮಾಡುವಾಗ ಏನಾದರು ಕೆಮ್ಮ ಬೇಕು ಅಲ್ಲದಿದ್ದರೆ ಶಬ್ದವನ್ನು ಸರಿಪಡಿಸಿಕೊಳ್ಳಬೇಕೆಂದು ಬಯಸಿದರೆ ಮ್ಯೂಟ್ ಬಟನ್ ಪ್ರೆಸ್ ಮಾಡಬೇಕು, ಆದರೆ ಇದರಲ್ಲಿ ಮ್ಯೂಟ್ ಪ್ರೆಸ್ ಮಾಡಿದಾಗ ಅದರಿಂದ ಒಂದು ಶಬ್ದ ಬಂದು ಅದು ಕೂಡ ರೆಕಾರ್ಡ್ ಆಗುತ್ತದೆ. ಇದನನ್ಉ ಗೂಗಲ್ ಅಥವಾ ಸ್ಕೈಪೆ ಬಳಸಿ ರೆಕಾರ್ಡಿಗ್ ಮಾಡುವುದಾದರೆ ಬಳಸಬಹುದಾಗಿದೆ.

ಇಷ್ಟೆಲ್ಲಾ ಇದ್ದರು ಇದರಲ್ಲಿ ರೆಕಾರ್ಡಿಂಗ್ ಮಾಡಿದರೆ ರೆಕಾರ್ಡಿಂಗ್ ಗುಣಮಟ್ಟ ಅತ್ಯುತ್ತಮವಾಗಿದೆ. ಇದರ ಮತ್ತೊಂದು ಪ್ರಯೋಜನವೆಂದರೆ ಯಾವುದೆ ಸಾಫ್ಟ್ ವೇರ್ ಅಳವಡಿಸಿಕೊಳ್ಳದೆ ರೆಕಾರ್ಡಿಂಗ್ ಮಾಡಿದ್ದನ್ನು ಕೇಳಬಬಹುದಾಗಿದೆ.

ಈ ಮೈಕ್ರೊಫೋನ್ ಕೊಳ್ಳಬಯಸುವರಿಗೆ ಇದರ ಮಾರುಕಟ್ಟೆ ಬೆಲೆ ರು.5,000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot