Subscribe to Gizbot

ವಿ-ಮೋಡಾ ರಿವೇಂಪ್ ಟ್ರು ಬ್ಲಡ್ ಹೆಡ್ ಫೋನ್

Posted By:
ವಿ-ಮೋಡಾ ರಿವೇಂಪ್ ಟ್ರು ಬ್ಲಡ್ ಹೆಡ್ ಫೋನ್

ಹೆಡ್ ಫೋನ್ ಬಳಕೆದಾರರಿಗೆ ಅಧಿಕ ಮನರಂಜನೆಯನ್ನು ನೀಡಲು ವಿ-ಮೋಡಾ ರಿವೇಂಪ್ ಟ್ರು ಬ್ಲಡ್ ಹೆಡ್ ಫೋನ್ ಎಚ್ ಬಿ ಓಜೊತೆ ಸೇರಿ ಬರುತ್ತಿದೆ.ವಿ ಮೋಡಾದ ಈ ಹೆಡ್ ಫೋನ್ ಕಪ್ಪು ಮತ್ತು ಕೆಂಪು ಮಿಶ್ರ ಬಣ್ಣವನ್ನು ಹೊಂದಿದ್ದು, ಸಿಲ್ಟರ್ ಬುಲೆಟ್ ನ ಒಂದು ಬಟನ್ ಇದ್ದು ಅದು ಮ್ಯೂಸಿಕ್ ಅನ್ನು ಪ್ಲೇ ಮಾಡಲು , ಕರೆಯನ್ನು ಸ್ವೀಕರಿಸಲು, ಕರೆಯನ್ನು ಹೋಲ್ಡ್ ಮಾಡಲು ಹೀಗೆ ಬಳಸಬಹುದಾಗಿದೆ.

ಇದನ್ನು ಬಳಸಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಅಥವಾ ಐಪೋಡ್ ಗಳಲ್ಲಿ ಸಂಗೀತವನ್ನು ವೇಗವಾಗಿ ರವಾನಿಸಲು ಸಹಾಯ ಮಾಡುತ್ತದೆ.ಈ ಇಯರ್ ಫೋನ್ ನಲ್ಲಿ ಆಕ್ಟೀವ್ ಫ್ಲೆಕ್ಸ್ ಇಯರ್ ಹುಕ್ ಇದ್ದು ಇದು ಇಯರ್ ಫೋನ್ ಅನ್ನು ಕೆಳಗೆ ಬೀಳದಂತೆ ತಡೆಯುತ್ತದೆ. ಈ ಸಾಧನವು ಅಧಿಕ ಕಾಲ ಬಾಳಿಕೆ ಬರುವಂತೆ ಇದ್ದು , ಇದರ ಇಯರ್ ಬಡ್ಸ್ ಅನ್ನು ಅಧಿಕ ಬಾಳಿಕೆ ಬರುವ ಹಾಗೆ ಅಲ್ಯುಮಿನಿಯಂನಿಂದ ತಯಾರಿಸಲಾಗಿದೆ.

ಇದರಲ್ಲಿ ಶಬ್ದದ ಗುಣಮಟ್ಟ ಉತ್ತಮವಾಗಿದ್ದು ಲೈವ್ ಸ್ಟೇಜ್ ನಲ್ಲಿ ಬೀಟ್ ಪೋರ್ಟ್ ಏರ್ ಫ್ಲೋ ಸಿಸ್ಟಮ್ ಬಳಸಿದಾದ ಒಳ್ಳೆಯ ಗುಣಮಟ್ಟದಲ್ಲಿ ಉಂಟಾಗುವ ಶಬ್ದ ಹೇಗೆ ಮನರಂಜನೆಯನ್ನು ನೀಡುತ್ತದೆಯೊ ಅದೇ ರೀತಿಯ ಮನರಂಜನೆ ನೀಡುವ ಸಾಮರ್ಥ್ಯವನ್ನು ಈ ಇಯರ್ ಫೋನ್ ಹೊಂದಿದೆ.

ಈ ಇಯರ್ ಫೋನ್ ಬೆಲೆ ರು. 5000 ಆಗಿದ್ದು ಭಾರತೀಯ ಮಾರುಕಟ್ಟೆಯನ್ನು ತಲುಪಿದಾಗ ಇದರ ಬೆಲೆಗೆ ಹಡಗಿನ ಚಾರ್ಜ್ ಸೇರಿ ಸ್ವಲ್ಪ ಹೆಚ್ಚಾಗಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot