ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್-ಅರೈವಾ ಲಿಯೊ

|
ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್-ಅರೈವಾ ಲಿಯೊ

ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್-ಅರೈವಾ ಲಿಯೊ

ಆಫೀಸ್ ಹೋಗುವಾಗ ಅಥವಾ ಬೇರೆ ಎಲ್ಲಿಗಾದರು ಪ್ರಯಾಣಿಸುವಾಗ ಸಂಗೀತ ಕೇಳಿಕೊಂಡು ಹೋಗಬೇಕೆನಿಸುತ್ತದೆ, ಆಗ ವೈರ್ ಇರುವ ಹೆಡ್ ಸೆಟ್ ಬಳಸಿ ಸಂಗೀತವನ್ನು ಕೇಳುತ್ತಾರೆ , ಆದರೆ ಅದು ಸ್ವಲ್ಪ ಆ ರೀತಿ ವೈರ್ ಇರುವುದು ಅಷ್ಟಾಗಿ ಇಷ್ಟಪಡುವುದಿಲ್ಲ. ಅವಸರವಾಗಿ ಬಸ್ ಹತ್ತುವಾಗ ವೈರ್ ಬೇರೆ ಯಾವುದಾದರು ವಸ್ತುವಿಗೆಸಿಕ್ಕಿ ಹಾಕಿಕೊಂಡರೆ ಕಿರಿಕಿರಿ ಅನಿಸುತ್ತದೆ. ಆದಕ್ಕೆ ಇರುವ ಪರಿಹಾರವೆಂದರೆ ಈ ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್.

ಇಂತಹ ವೈರ್ ಲೆಸ್ ಹೆಡ್ ಸೆಟ್ ಕೊಳ್ಳಬಯಸುವರು ಅರೈವಾದ ಲಿಯೊ ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್ ಕೊಳ್ಳಬಹುದಾಗಿದೆ. ಈ ಹೆಡ್ ಸೆಟ್ ಬಗ್ಗೆ ಹೇಳುವುದಾದರೆ ಇದರಿಂದ ಉತ್ತಮ ಗುಣಮಟ್ಟದ ಸಂಗೀತವನ್ನು ಯಾವುದೆ ಕಿರಿಕಿರಿ ಇಲ್ಲದೆ ಅನುಭವಿಸಬಹುದಾಗಿದೆ.ಈ ಪ್ಯಾಕೇಜ್ ನಲ್ಲಿ 3 ಸೆಟ್ ಇಯರ್ ಬಡ್ಸ್ ಕವರ್ ಸಿಗುತ್ತದೆ. ಅದರಲ್ಲಿ ಎರಡ ಕಿವಿಗೆ ಸರಿಯಾಗಿ ಹೊಂದಿಕೊಂಡು ನಿಲ್ಲುವಂತೆ ರೂಪಿಸಲಾಗಿದೆ. ಇದನ್ನು ಕಿವಿಗೆ ಧರಿಸಿ ಯಾವುದೆ ತೊಂದರೆ ಇಲ್ಲದೆ ಸಂಗೀತವನ್ನು ಕೇಳಬಹುದಾಗಿದೆ.

ಇದನ್ನು ಧರಿಸಿ ಇದರ ಮೇಲೆ ಹೆಲ್ಮಟ್ ಅನ್ನು ಧರಿಸಬಹುದಾಗಿದೆ. ಇದರ ಯುನಿಟ್ 3 ಬಟನ್ ಹೊಂದಿದ್ದು , ಅದರ ಕೆಳಗಡೆ ಮೈಕ್ರೊ USB ಪೋರ್ಟ್ ಅಳವಡಿಸಲಾಗಿದೆ. ಒಂದೊಂದು ಬಟನ್ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದನ್ನು ಮುಖ್ಯವಾಗಿ ಈ ಬಟನ್ ಅನ್ನು ಮ್ಯೂಸಿಕ್ ಅನ್ನು ಪ್ಲೇ ಮಾಡಲು ಬಳಸಲಾಗುತ್ತದೆ.

ಸಂಗೀತವನ್ನು ಕೇಳುತ್ತಿರುವಾಗ ಅದರಲ್ಲಿರುವ + ಮತ್ತು _ ಚಿಹ್ನೆಯನ್ನು ಶಬ್ದವನ್ನು ಅಧಿಕ ಮತ್ತು ಕಡಿಮೆ ಮಾಡಲು ಬಳಸಬಹುದಾಗಿದೆ. 140mAh ಬ್ಯಾಟರಿಯನ್ನು ಅಳವಡಿಸಿರುವ ಈ ಸಾಧನದಲ್ಲಿ 5 ಗಂಟೆಗಳ ಕಾಲ ನಿರಂತರವಾಗಿ ಸಂಗೀತವನ್ನು ಕೇಳಬಹುದಾಗಿದೆ. ಇದನ್ನು ಅರ್ಧ ಗಂಟೆ ಚಾರ್ಜ್ ಮಾಡಿದರೆ ಬ್ಯಾಟರಿ ಫುಲ್ ಆಗುತ್ತದೆ, ಇದರ ಸ್ಟ್ಯಾಂಡ್ ಬೈ ಟೈಮ್ 20 ದಿನಗಳವರೆಗೆ ಇರುತ್ತದೆ.

ಈ ಬ್ಲೂಟೂಥ್ ಹೆಡ್ ಸೆಟ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರು.3, 500ರಷ್ಟಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X