Subscribe to Gizbot

ಜೆಫೈರ್ ಕುಟುಂಬಕ್ಕೆ ಮತ್ತೆ 3 ಸ್ಪೀಕರ್ ಸೇರ್ಪಡೆ

Posted By:
ಜೆಫೈರ್ ಕುಟುಂಬಕ್ಕೆ ಮತ್ತೆ 3 ಸ್ಪೀಕರ್ ಸೇರ್ಪಡೆ

ಜೆಫೈರ್ ಸ್ಪೀಕರ್ ಗಳ ಸಾಲಿಗೆ 3 ಹೊಸ ಸ್ಪೀಕರ್ ಗಳಾದ ಜೆಫೈರ್ 550, ಜೆಫೈರ್ 500, ಜೆಫೈರ್ 300ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದರಿಂದ ಜೆಫೈರ್ ಆಡಿಯೊ ಕುಟುಂಬ ಮತ್ತಷ್ಟು ದೊಡ್ಡದಾಗಿದೆ. ಈ 3 ಹೊಸ ಆಡಿಯೊಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದು ಬಳಕೆದಾರರ ಮೆಚ್ಚುಗೆಯನ್ನು ಗಳಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಈ ಸ್ಪೀಕರ್ ಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದಾಗಿದ್ದು ಅದರ ಚಾರ್ಜ್ ಅಧಿಕ ಗಂಟೆಗಳ ಕಾಲ ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ. ನಿಮಗೆ ಇಷ್ಟವಾದ ಸಂಗೀತವನ್ನು ಬ್ಲೂಟೂಥ್ ಹೊಂದಿರುವ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಅಥವಾ ಐಫೋನ್ ಗಳಲ್ಲಿ ಬಳಸಿ ಸಂಗೀತದ ಸವಿಯನ್ನು ಸವಿಯಬಹುದಾಗಿದೆ.

ಇದರಲ್ಲಿ ಜೆಫೈರ್ 550 ಸ್ಟಿರಿಯೊ ಆಡಿಯೊ ಜೊತೆ ಅಲ್ಯೂಮಿನಿಯಂ ಕವಚವನ್ನು ಹೊಂದಿದೆ. ಇದು 1.5 W x 2 ಸ್ಪೀಕರ್ ಔಟ್ ಪುಟ್ ಹೊಂದಿದೆ. ಇದರಲ್ಲಿ 3000 mA ಲಿಥಿಯಂ ಪಾಲಿಮರ್ ಪಾಲಿಮರ್ ಬ್ಯಾಟರಿ ಹೊಂದಿದ್ದು , ಇದನ್ನು ಬಳಸಿ 30 ಗಂಟೆಗಳ ನಿರಂತರವಾಗಿ ಸಂಗೀತವನ್ನು ಕೇಳಬಹುದಾಗಿದೆ. ಇದರಲ್ಲಿ ಬ್ಲೂಟೂಥ್ BT ಕ್ಲಾಸ್ II 2.1V ಪ್ಲಾಟ್ ಫಾರ್ಮ್ ಹೊಂದಿದ್ದು ಇದನ್ನು 32 ಅಡಿ ಆಪರೇಟಿಂಗ್ ಅಂತರದವರೆಗೆ ವಿಸ್ತರಿಸಬಹುದಾಗಿದೆ.

ಜೆಫೈರ್ 500 ಸರಿ ಸುಮಾರು ಮೊದಲಿನ ಸ್ಪೀಕರ್ ಗುಣಮಟ್ಟವನ್ನು ಹೊಂದಿದ್ದು , ಮುಖ್ಯವಾದ ವ್ಯತ್ಯಾಸವೆಂದರೆ ಇದರಲ್ಲಿ 1500 mA ಲಿಥಿಯಂ ಪಾಲಿಮರ್ ಪಾಲಿಮರ್ ಬ್ಯಾಟರಿ ಹೊಂದಿದ್ದು , ಇದನ್ನು ಬಳಸಿ 18 ಗಂಟೆಗಳ ಸಂಗೀತವನ್ನು ಕೇಳಬಹುದಾಗಿದೆ.

ಜೆಫೈರ್ 300 ಉಳಿದ ಎರೆಡು ಸ್ಪೀಕರ್ ಗಳಿಗೆ ಹೋಲಿಸಿದಾಗ ಚಿಕ್ಕ ಗಾತ್ರದಾಗಿದ್ದು , ಕಡಿಮೆ ತೂಕ ಹೊಂದಿರುವುದರಿಂದ ಜೊತೆಯಲ್ಲಿ ಕೊಂಡೊಯ್ಯಬಹುದಾಗಿದೆ. ಈ ಸ್ಪೀಕರ್ ಗಳ ಜೊತೆ USB ಕೇಬಲ್ ಸಹ ದೊರೆಯುತ್ತದೆ.

ಈ 3 ಸ್ಪೀಕರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅವುಗಳಲ್ಲಿ ಜೆಫೈರ್ 550 ರು.8000, ಜೆಫೈರ್ 500 ರು. 6,500, ಜೆಫೈರ್ 300 ರು. 5,000 ಬೆಲೆಯನ್ನು ಹೊಂದಿವೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot