Subscribe to Gizbot

ಕ್ರೆಸೆಂಟ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್

Posted By:
ಕ್ರೆಸೆಂಟ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್

ವಸ್ತುಗಳ ಗುಣಮಟ್ಟ ಹೊಂದೆ ರೀತಿ ಇದ್ದು ಬ್ರಾಂಡ್ ಬೇರೆ-ಬೇರೆ ಆಗಿದ್ದರೂ ಆ ವಸ್ತುಗಳು ಬ್ರಾಂಡ್ ನ ಮೇಲೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುತಿದೆ. ZTE ಸಹ ಇದೆ ಉಪಾಯವನ್ನು ಮಾರುಕಟ್ಟೆ ವಿಸ್ತರಿಸಲು ಬಳಸಿದೆ ಏಕೆಂದರೆ ಇದರ ಕ್ರೆಸಂಟ್ ಕೆಲವು ಮಾರುಕಟ್ಟೆಯಲ್ಲಿ ಆರೆಂಜ್ ಸ್ಯಾನ್ ಫ್ರಾನ್ಸಿಸ್ಕೊ ಬ್ರಾಂಡ್ ನಲ್ಲಿ ಗುರುತಿಸಲ್ಪಟ್ಟಿದೆ.

ZTE ಕ್ರೆಸೆಂಟ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಆಗಿದ್ದು, 2.3.5 ಆಂಡ್ರಾಯ್ಡ್ ಆಯಾಮವನ್ನು ಹೊಂದಿದೆ. ಇದು ತೆಳುವಾಗಿದ್ದು 58.5 x 117 x 10.6 mm ಡೈಮೆಂಶನ್ ಹೊಂದಿದೆ. ಇದು 120 ಗ್ರಾಂ ತೂಕವನ್ನು ಹೊಂದಿದೆ. ಇದು 800 MHz CPU ಗಡಿಯಾರ ಮತ್ತು ಕ್ವಾಲ್ ಕಮ್ MSM7227T ಪ್ರೊಸೆಸರ್ ಹೊಂದಿದೆ ಅಲ್ಲದೆ ಕ್ವಾಲ್ ಕಮ್ ಆಡ್ರೆನೊ 200 ಗ್ರಾಫಿಕಲ್ ಕಂಟ್ರೋಲ್ ಹೊಂದಿದೆ. CPU ಕೋರ್ ARM1136EJ-S ಹೊಂದಿದೆ.

ZTE ಕ್ರೆಸೆಂಟ್ 512 MB RAM ಸಾಮರ್ಥ್ಯವನ್ನು ಹೊಂದಿದೆ. ಇದರ ರೆಸ್ಯೂಲೇಶನ್ 480 x 800 ಪಿಕ್ಸಲ್ ಹೊಂದಿದ್ದು ಮಲ್ಟಿ ಟಚ್ ಸ್ಕ್ರೀನ್ ಸೌಲಭ್ಯ ಹೊಂದಿದೆ. ಇದರ ಪಿಕ್ಸಲ್ ಸಾಂದ್ರತೆಯು ಇಂಚಿಗೆ 266.3 ಪಿಕ್ಸಲ್, ಡಿಸ್ ಪ್ಲೇ ಸೈಜ್ 1.8 x 3 ಇಂಚು ಮತ್ತು ಕಲರ್ ಡೆಪ್ತ್ ಪಿಕ್ಸಲ್ ಗೆ 18 bits ಇದ್ದು ಉತ್ತಮ ಗುಣಮಟ್ಟವನ್ನು ಹೊಂದಿದೆ. ಇದು ಅಧಿಕ ಸಾಮರ್ಥ್ಯದ SD 2.0/HC ಮೆಮೊರಿ ಕಾರ್ಡ್ ಹೊಂದಿದ್ದು ಅದು 32GB ಸಪೋರ್ಟ್ ಮಾಡುತ್ತದೆ. ಇದರ ಇಂಟರ್ನಲ್ ಮೆಮೊರಿ 512MB ಹೊಂದಿದೆ.

ಇದರಲ್ಲಿ ಅಪರೂಪದ 4.92 ಮೆಗಾ ಪಿಕ್ಸಲ್ ಕ್ಯಾಮೆರಾ , ಅಟೊ ಫೋಕಸ್, 3.1 ಮೆಗಾ ಪಿಕ್ಸಲ್ ಫ್ರೆಂಟ್ ಕ್ಯಾಮೆರಾ, CMOS ಸೆನ್ಸಾರ್, 3G2, 3GP ಮತ್ತು MPEG4 ಫಾರ್ಮೇಟ್ ನ ವೀಡಿಯೊ, FM ರೇಡಿಯೊ ಸೌಲಭ್ಯವನ್ನು ಹೊಂದಿದೆ. ಇದಲ್ಲದೆ GPRS Class 12, EDGE Class 10 ಮತ್ತು HSDPA 7.2 ಲಕ್ಷಣಗಳನ್ನು ಸಹ ಹೊಂದಿದೆ.

ಭಾರತದ ಮಾರುಕಟ್ಟೆಯಲ್ಲಿ ಈ ಮೊಬೈಲ್ ಫೋನ್ ದರದ ಬಗ್ಗೆ ಇನ್ನಷ್ಟೆ ತಿಳಿದು ಬರಬೇಕಷ್ಟೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot